/newsfirstlive-kannada/media/post_attachments/wp-content/uploads/2024/10/BACKPAIN-1.jpg)
ಇಂದಿನ ಕಾಲದಲ್ಲಿ ಬ್ಯಾಕ್​ಪೇನ್ ಅಥವಾ ಬೆನ್ನುನೋವು ಅನ್ನೋದು ಸರ್ವೇ ಸಾಮಾನ್ಯವಾದಂತಾಗಿದೆ. ಬೆನ್ನಿನ ಕೆಳಭಾಗದಲ್ಲಿ ಒಂದು ಬಾರಿ ನೋವು ಬಂದರೆ ಅದರಿಂದ ಹೊರಬರಲು ಪರದಾಡುಬೇಕಾಗುತ್ತದೆ. ವಿಪರೀತ ನೋವು, ಬಾವು ಬರುವುದು ಈ ರೀತಿಯ ಸಮಸ್ಯೆಗೆ ಹೊರಳುವ ಈ ಬ್ಯಾಕ್​ಪೇನ್​ ಮುಂದೆ ಕ್ಯಾನ್ಸರ್​ನಂತಹ ಸಮಸ್ಯೆಗಳನ್ನು ಕೂಡ ತಂದಿಡುವ ಸಾಧ್ಯತೆ ಇರುತ್ತದೆ. ಕ್ಯಾನ್ಸರ್​ನಂತಹ ಸಮಸ್ಯೆಗಳು ಆಗುವುದು ಕಡಿಮೆ ಆದರೂ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ ಅಂತಾರೆ ವೈದ್ಯರು. ಸಾಧಾರಣವಾಗಿ ಬೆನ್ನುನೋವು ನಮ್ಮನ್ನು ಅತಿಯಾಗಿ ಕಾಡುವುದು ನಾವು ಮುಂದುಗಡೆ ಬಾಗಿದಾಗ. ಇದಕ್ಕೆ ಕಾರಣ ಆ ಭಾಗದಲ್ಲಿ ಸ್ನಾಯುಗಳು ದುರ್ಬಲಗೊಂಡಿರುತ್ತವೆ ಹೀಗಾಗಿ ಬ್ಯಾಕ್​ಪೇನ್ ಆಗಾಗ ಕಾಡುತ್ತಲೇ ಇರುತ್ತದೆ.
ಇದನ್ನೂ ಓದಿ:ಕುರುಡುತನ ತಂದೊಡ್ಡುವ ಟ್ರಾಕೋಮಾ ಭಾರತದಲ್ಲಿ ನಿರ್ಮೂಲನೆ ಆಗಿದ್ದು ಹೇಗೆ? ಏನಿದರ ಗುಣಲಕ್ಷಣಗಳು ?
ಇನ್ನು ಕೆಲವು ಬಾರಿ ಇದು ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಯೂ ಆಗಿರುತ್ತದೆ. ಹೆಜ್ಜೆಗಳನ್ನಿಟ್ಟಾಗ ದೇಹದ ಭಾರವೆಲ್ಲಾ ಬೆನ್ನಿನ ಮೇಲೆ ಬಿದ್ದಂತಾಗಿ ನೋವು ಶುರುವಾಗುತ್ತದೆ. ಇದು ಬೆನ್ನಿನ ಸ್ನಾಯುಗಳ ಮೇಲೆ ಅತಿಹೆಚ್ಚು ಒತ್ತಡ ಬಿದ್ದಾಗ ಈ ತರಹದ ನೋವುಗಳು ಶುರುವಾಗುತ್ತವೆ.ಬೆನ್ನುನೋವಿನ ಈ ಸಮಸ್ಯೆಗೆ ನಾವು ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು. ಅತ್ಯಂತ ಸರಳ ಮದ್ದಿನೊಂದಿಗೆ ನಾವು ಈ ಬೆನ್ನುನೋವಿನ ಸಮಸ್ಯೆಯಿಂದ ದೂರಾಗಬಹುದು. ಕಡಿಮೆ ವೆಚ್ಚ, ಹೆಚ್ಚಿನ ಪರಿಣಾಮವನ್ನು ನಾವು ಕಾಣಬಹುದು
/newsfirstlive-kannada/media/post_attachments/wp-content/uploads/2024/10/BACKPAIN.jpg)
ಐಸ್​ಪ್ಯಾಕ್​:
ಐಸ್​ಪ್ಯಾಕ್​ನ್ನು ನಾವು ಬೆಸ್ಟ್ ಪೇನ್ ಕಿಲ್ಲರ್ ಎಂದೇ ಕರೆಯುತ್ತೇವೆ. ಸಾಮಾನ್ಯವಾಗಿ ಬೆನ್ನುನೋವು ಕಾಣಿಸಿಕೊಂಡಾಗ, ನೋವು ಇದ್ದ ಜಾಗದಲ್ಲಿ ಐಸ್​ಪ್ಯಾಕ್​ ಇಡುವುದರಿಂದ ಈ ಸಮಸ್ಯೆ ದೂರವಾಗುತ್ತದೆ. ನಿತ್ಯ ಎರಡು ಅಥವಾ ಮೂರು ಬಾರಿ ಈ ಒಂದು ಪ್ರಯೋಗವನ್ನು ಮಾಡಿ ನೋಡಿ ನಿಮ್ಮ ಸಮಸ್ಯೆ 100% ಪರಿಹಾರ ಸಿಗೋದು ಗ್ಯಾರಂಟಿ.
ಕುಳಿತುಕೊಳ್ಳುವ ಭಂಗಿ ಸರಿಯಾಗಿ ಇರಲಿ
ನಾವು ನಿತ್ಯ ಗಂಟೆಗಟ್ಟಲೇ ಆಫೀಸ್​ನಲ್ಲಿಯೋ, ಮನೆಯಲ್ಲಿಯೋ ಕುಳಿತುಕೊಂಡು ಕಾಲ ಕಳೆಯಬೇಕಾಗುತ್ತದೆ. ಹೀಗಾಗಿ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದನ್ನು ನಾವು ರೂಢಿ ಮಾಡಿಕೊಳ್ಳಬೇಕು. ಬೆನ್ನಿನ ಮೇಲೆ ಹೆಚ್ಚು ಭಾರ ಬೀಳದಂತೆ ನಾವು ಕುಳಿತುಕೊಳ್ಳುವುದರಿಂದ ನಾವು ಆದಷ್ಟು ಬೆನ್ನುನೋವಿನಿಂದ ಮುಕ್ತಿ ಪಡೆಯಬಹುದು. ಸರಿಯಾಗಿ ಕುಳಿತುಕೊಳ್ಳುವುದ ಅಂದ್ರೆ ಅದು ಬೆನ್ನು ಹುರಿಯ ಎಲುಬುಗಳು ಏಕಪ್ರಕಾರವಾಗಿ ನಿಲ್ಲುವಂತೆ ನಾವು ಕುಳಿತುಕೊಳ್ಳಬೇಕಾಗುತ್ತದೆ. ಈ ಒಂದು ಭಂಗಿಯನ್ನು ರೂಢಿ ಮಾಡಿಕೊಂಡಲ್ಲಿ ಬೆನ್ನುನೋವಿನ ಸಮಸ್ಯೆ ಇರುವುದಿಲ್ಲ.
/newsfirstlive-kannada/media/post_attachments/wp-content/uploads/2024/10/BACKPAIN-4.jpg)
ನಿತ್ಯ ಮಸಾಜ್​
ಮಸಾಜ್ ಕೇವಲ ಬೆನ್ನುನೋವನ್ನು ಕಡಿಮೆ ಮಾಡಲ್ಲ. ಅದು ಮನಸ್ಸಿಗೆ ನಿರಾಳತೆಯನ್ನು ಕೂಡ ತಂದು ಕೊಡುತ್ತೆ. ಹೀಗಾಗಿ ನಿಮ್ಮ ಬೆನ್ನನ್ನು ನಿತ್ಯ ಮಸಾಜ್ ಮಾಡುವುದರಿಂದ ಅನೇಕ ಲಾಭಗಳು ಇವೆ. ಸರಿಯಾದ ಆಯಿಂಟ್ಮೆಂಟ್​ನಿಂದ ಮಸಾಜ್ ಮಾಡುವ ಮೂಲಕ ಬೆನ್ನು ನೋವು ಕಡಿಮೆ ಮಾಡಿಕೊಳ್ಳಬಹುದು
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನಬೇಕು
ಸುಮ್ಮನೆ ನಿತ್ಯ ಎರಡರಿಂದ ಮೂರು ಬೆಳ್ಳುಳ್ಳಿ ಎಸಳುಗಳನ್ನು ತಿಂದು ನೋಡಿ. ಒಂದು ಪವಾಡವೇ ನಡೆದು ಹೋಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಎರಡರಿಂದ ಮೂರು ಬೆಳ್ಳಳ್ಳಿ ಎಸಳುಗಳನ್ನು ತಿನ್ನುವುದರಿಂದ ನಿಮ್ಮ ಬೆನ್ನು ನೋವು ಮಂಗಮಾಯವಾಗಿ ಹೋಗುತ್ತದೆ. ಇಷ್ಟು ಮಾತ್ರವಲ್ಲ ನೀವು ಬೆಳ್ಳುಳ್ಳಿ ಎಣ್ಣೆಯಿಂದಲೂ ಕೂಡ ಮಸಾಜ್ ಮಾಡುವುದರಿಂದ ನಿಮ್ಮ ಬೆನ್ನು ನೋವು ಕಡಿಮೆ ಮಾಡಿಕೊಳ್ಳಬಹುದು.
/newsfirstlive-kannada/media/post_attachments/wp-content/uploads/2024/10/BACKPAIN-2.jpg)
ನಿತ್ಯ ವ್ಯಾಯಾಮ ಮಾಡಿ
ನೀವು ಬೆನ್ನುನೋವನ್ನು ನಿಯಂತ್ರಣ ಮಾಡಲು ಮತ್ತೊಂದು ಸರಳ ಉಪಾಯವೆಂದರೆ ನಿತ್ಯ ವ್ಯಾಯಾಮ ಮಾಡುವುದು. ನಿತ್ಯ ವ್ಯಾಯಾಮದಿಂದ ಬೆನ್ನಿನ ಸ್ನಾಯುಗಳು ಬಲಗೊಳ್ಳುತ್ತವೆ. ಸ್ಟ್ರೆಚಿಂಗ್​ನಂತಹ ವ್ಯಾಯಾಮಗಳನ್ನು ನಿತ್ಯ ಮಾಡುವುದರಿಂದ ನಾವು ಬೆನ್ನು ನೋವನ್ನು ನಿವಾರಿಸಿಕೊಳ್ಳಬಹುದು.
/newsfirstlive-kannada/media/post_attachments/wp-content/uploads/2024/10/BACKPAIN-3.jpg)
ಉಪ್ಪು ಹಾಕಿದ ನೀರಿನಿಂದ ಸ್ನಾನ
ನೀವು ಸ್ನಾನ ಮಾಡುವ ನೀರಿಗೆ ಉಪ್ಪು ಹಾಕಿಕೊಂಡ ಕೆಲವು ದಿನಗಳ ಕಾಲ ಸ್ನಾನ ಮಾಡುವುರಿಂದ ನಿಮ್ಮ ಬೆನ್ನು ನೋವು ಸರಳವಾಗಿ ಕಡಿಮೆ ಆಗುತ್ತದೆ. ತುಂಬಾ ಕೆಲಸವಾಗಿ ಸುಸ್ತು ಅನಿಸಿದಾಗ ಉಪ್ಪು ನೀರಿನ ಸ್ನಾನ ಮಾಡಿ. ಇಡೀ ದೇಹಕ್ಕೆ ನಿರಾಳತೆಯೊಂದು ಸಿಗುವುದರ ಜೊತೆಗೆ ಬೆನ್ನು ನೋವು ಕೂಡ ಕಡಿಮೆಯಾಗುತ್ತದೆ. ಆದರೆ ನೀರಿನ ಬಿಸಿಯ ಬಗ್ಗೆ ಗಮನವಿರಲಿ. ಅತಿಯಾದ ಬಿಸಿನೀರಿನಲ್ಲಿ ಉಪ್ಪಿನ್ನು ಬೆರೆಸಿ ಸ್ನಾನ ಮಾಡುವುದು ಅಷ್ಟು ಒಳ್ಳೆಯದಲ್ಲ.
ಹಾಲಿಗೆ ಅರಿಶಿನ ಮತ್ತು ಜೇನುತುಪ್ಪ ಬೆರಸಿ ಕುಡಿಯಿರಿ
ನೀವು ನಿತ್ಯ ಕುಡಿಯವ ಹಾಲಿನಲ್ಲಿ ಸ್ವಲ್ಪ ಅರಿಷಿನ ಪುಡಿ ಹಾಗೂ ಜೇನುತುಪ್ಪವನ್ನು ಹಾಕಿಕೊಂಡು ಕುಡಿಯಿರಿ ಇದರಿಂದ ಬೆನ್ನುನೋವು ಕಡಿಮೆಯಾಗುತ್ತದೆ. ಇದು ಬೆನ್ನುನೋವಿನ ನಿರಾವಣೆಗೆ ಅತ್ಯಂತ ಪ್ರಾಚೀನ ಕಾಲದಿಂದಲೂ ಇರುವ ಔಷಧ ಇದು.ಹೀಗೆ ಬೆನ್ನು ನೋವಿಗೆ ಅನೇಕ ಪರಿಹಾರಗಳು ನಮ್ಮ ಮನೆಯಲ್ಲಿಯೇ ಇವೆ. ಇವುಗಳನ್ನು ಒಮ್ಮೆ ಟ್ರೈಮಾಡಿ ನೋಡಿ. ಪರಿಹಾರ ಸಿಗೋದಂತೂ ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us