newsfirstkannada.com

ತಲೆಹೊಟ್ಟಿನ ಸಮಸ್ಯೆಯಿಂದ ಕಿರಿಕಿರಿ ಆಗ್ತಾ ಇದ್ದೀಯಾ..? ಹಾಗ್ರಾದೆ ಈ ಸುಲಭ ಟ್ರಿಕ್ಸ್ ಯೂಸ್ ಮಾಡಿ ನೋಡಿ!

Share :

Published April 15, 2024 at 6:13am

    ತಲೆ ಹೊಟ್ಟು ಸಮಸ್ಯೆಗೆ ಇಲ್ಲಿದೆ ಮನೆ ಮದ್ದಿನ ಅತೀ ಸುಲಭ ವಿಧಾನ

    ಬೇಸಿಗೆಯ ಬೆಗೆಯಿಂದ ತಲೆಯಲ್ಲಿ ಬೆವರಿನ ಜತೆ ಹೊಟ್ಟು ಜಾಸ್ತಿ ಆಗುತ್ತೆ

    ತಲೆ ಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಉಪಾಯಗಳು

ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಹೀಗಾಗಿ ಜನರು ಮನೆಯಿಂದ ಹೊರ ಬರೋದಕ್ಕೂ ಭಯ ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಬಿರು ಬಿಸಿಲಿನಿಂದ ಚರ್ಮದಲ್ಲಿ ಅನೇಕ ಬದಲಾವಣೆಗಳು ಆಗುತ್ತಿವೆ. ಅದರಲ್ಲೂ ಉರಿ ಬೇಸಿಗೆಗೆ ದೇಹದಲ್ಲಿ ಮಾತ್ರವಲ್ಲದೇ ತಲೆಯಲ್ಲಿ ಕೂಡ ಕೆಲವೊಂದು ಸಮಸ್ಯೆಗಳು ಕಾಣಿಸುತ್ತದೆ.

ಇದನ್ನೂ ಓದಿ: ಅತಿಯಾಗಿ ಫ್ರೂಟ್ಸ್​ ಜ್ಯೂಸ್ ಕುಡಿಯೋರೆ ಎಚ್ಚರ! ನೀವು ಓದಲೇಬೇಕಾದ ಪ್ರಮುಖ ಸ್ಟೋರಿ ಇದು!

ಬೇಸಿಗೆಯ ಬೆಗೆಯಿಂದ ತಲೆಯಲ್ಲಿ ಬೆವರು ಬಂದು ಅದು ಹೊಟ್ಟು ಜಾಸ್ತಿಯಾಗಲು ಕಾರಣವಾಗುತ್ತದೆ. ದಿನ ಕಳೆದಂತೆ ಈ ಹೊಟ್ಟಿನ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸುವುದೇ ಹೆಚ್ಚು. ಹೀಗಾಗಿ ತಲೆ ಹೊಟ್ಟಿನ ಸಮಸ್ಯೆಯಿಂದ ಹೇಗೆ ಹೊರ ಬರಬೇಕು ಎಂದು ಸಾಕಷ್ಟು ಜನರು ವೈದ್ಯರ ಮೋರೆ ಹೋಗುತ್ತಾರೆ. ಆದರೆ ಮನೆಯಲ್ಲಿ ಇರುವ ವಸ್ತುಗಳಿಂದಲೇ ತಲೆ ಹೊಟ್ಟಿನ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ಎಲ್ಲರಲ್ಲೂ ಹೊಟ್ಟಿನ ಸಮಸ್ಯೆ ಸರ್ವೆ ಸಾಮಾನ್ಯ. ತಲೆಯಲ್ಲಿ ಹೊಟ್ಟು ಹೆಚ್ಚಾದರೆ ತುರಿಕೆ, ಕೂದಲು ಉದುರುವುದು ಕೂಡ ಹೆಚ್ಚುತ್ತದೆ. ಇದರಿಂದ ಆಫೀಸ್ ಹೋಗುವ ಉದ್ಯೋಗಿಗಳು, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮುಜುಗರವನ್ನೂ ಎದುರಿಸಬೇಕಾಗುತ್ತದೆ. ಹಾಗಾಗಿ ಈ ತಲೆ ಹೊಟ್ಟಿನಿಂದ ಮುಕ್ತವಾಗಲು ಈ ಮನೆಮದ್ದನ್ನು ಉಪಯೋಗ ಮಾಡಿ.

ಮೊದಲು ಕಹಿ ಬೇವಿನ ಬಳಕೆ. ಇದು ಆಯುರ್ವೇದ ಚಿಕಿತ್ಸಾ ಪದ್ಧತಿಯ ಒಂದು ಬಹುಮುಖ್ಯ ಭಾಗವಾಗಿದೆ. ಅಲ್ಲದೇ ನೂರಾರು ವರ್ಷಗಳಿಂದ ಬಳಕೆಯಲ್ಲಿ ಇರುವಂತದ್ದು ಮನೆಮದ್ದಾಗಿದೆ. ರುಚಿಯಲ್ಲಿ ಕಹಿ ಇದ್ದರು ಬೇವಿನ ಎಲೆಗಳಲ್ಲಿ ಇರುವ ಔಷಧೀಯ ಗುಣಗಳು ನಮ್ಮ ಪಾಲಿಗೆ ಸಿಹಿಯನ್ನೇ ತರುತ್ತವೆ. ಇದು ಆರೋಗ್ಯದ ಸಮಸ್ಯೆ, ಕೂದಲು ಮತ್ತು ಚರ್ಮದ ಸಮಸ್ಯೆಗಳ ನಿವಾರಣೆಗೆ ಬಳಸುತ್ತಾರೆ. ನಿಂಬೆ ಹಣ್ಣಿನ ರಸದಲ್ಲಿ ಆಂಟಿಮೈಕ್ರೋಬಿಯಲ್​ ಅಂಶ ಇರುವುದರಿಂದ ತಲೆಯಲ್ಲಿರುವ ಹೊಟ್ಟು ಸಂಪೂರ್ಣವಾಗಿ ದೂರಮಾಡಬಹುದು. ವಾರಕ್ಕೆ ಎರಡು ಬಾರಿ ನಿಂಬೆ ಹಣ್ಣಿನ ರಸ ಕೂದಲಿಗೆ ಹಚ್ಚುತ್ತಾ ಹೋದರೆ ತಲೆ ಹೊಟ್ಟಿನಿಂದ ಮುಕ್ತಿ ನೀಡಬಹುದು. ನಂತರ ಮೊಸರಿಗೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಕಲಸಿ. ಚೆನ್ನಾಗಿ ನೀವು ನಿಮ್ಮ ಕೂದಲಿಗೆ ಹಚ್ಚಿ. ಹೀಗೆ ವಾರಕ್ಕೆ 1 ಬಾರಿ ಮಾಡೋದ್ರಿಂದ ತಲೆಯಿಂದ ಹೊಟ್ಟು ನಿವಾರಣೆ ಆಗುತ್ತದೆ. ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವ ಜೊತೆಗೆ ಹೊಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಲೆಹೊಟ್ಟಿನ ಸಮಸ್ಯೆಯಿಂದ ಕಿರಿಕಿರಿ ಆಗ್ತಾ ಇದ್ದೀಯಾ..? ಹಾಗ್ರಾದೆ ಈ ಸುಲಭ ಟ್ರಿಕ್ಸ್ ಯೂಸ್ ಮಾಡಿ ನೋಡಿ!

https://newsfirstlive.com/wp-content/uploads/2024/04/dandruff1.jpg

Load More