90 ಸಾವಿರಕ್ಕೂ ಹೆಚ್ಚು ಕಾರುಗಳ ವಾಪಸ್​ ಪಡೆಯಲು ಹೋಂಡಾ ನಿರ್ಧಾರ; ನೀವು ಓದಲೇಬೇಕಾದ ಸ್ಟೋರಿ ಇದು!

author-image
Ganesh Nachikethu
Updated On
90 ಸಾವಿರಕ್ಕೂ ಹೆಚ್ಚು ಕಾರುಗಳ ವಾಪಸ್​ ಪಡೆಯಲು ಹೋಂಡಾ ನಿರ್ಧಾರ; ನೀವು ಓದಲೇಬೇಕಾದ ಸ್ಟೋರಿ ಇದು!
Advertisment
  • ಹೋಂಡಾ ಕಂಪನಿ ಕಾರುಗಳಲ್ಲಿ ತಾಂತ್ರಿಕ ದೋಷ
  • ಮರಳಿ ಪಡೆಯುವುದಾಗಿ ಘೋಷಿಸಿದ ಹೋಂಡಾ!
  • ಮಾಲೀಕರಿಗೆ ಹೋಂಡಾ ಕೊಟ್ಟ ಸಂದೇಶವೇನು..?

ಕಾರು ಉತ್ಪಾದನ ಕಂಪನಿ ಹೋಂಡಾ ಭಾರತದಲ್ಲಿ 90 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಗ್ರಾಹಕರಿಂದ ಮರಳಿ ಪಡೆಯಲು ಮುಂದಾಗಿದೆ. ಕಾರುಗಳಲ್ಲಿ ದೋಷಪೂರಿತ ಇಂಧನ ಪಂಪ್​ ಅನ್ನು ಬದಲಿಸಿ ಕೊಡುವ ಸಲುವಾಗಿ ಮತ್ತೆ ಹಿಂಪಡೆಯುತ್ತಿದೆ.

ಅಂದಹಾಗೆಯೇ ಹೋಂಡಾ ಸೆಪ್ಟೆಂಬರ್​​ 2017 ಮತ್ತು ಜೂನ್​​ 2018ರಲ್ಲಿ ತಯಾರಿಸಲಾದ ಕಾರುಗಳನ್ನು ಗ್ರಾಹಕರಿಂದ ಮರಳಿ ಪಡೆಯುತ್ತಿದೆ. ಹೋಂಡಾ ಅಮೇಜ್​, ಬ್ರಿಯೊ, ಬಿಆರ್​​-ವಿ, ಹೋಂಡಾ ಸಿಟಿ, ಜಾಝ್​ ಮತ್ತು ಡಬ್ಲ್ಯುಆರ್​-ವಿ ಮಾದರಿಯನ್ನು ಮರಳಿ ಪಡೆಯುತ್ತಿದೆ.

publive-image

ಫೆಬ್ರವರಿ​ 11ರಿಂದ ಅಧಿಕೃತವಾಗಿ ಕಾರುಗಳನ್ನು ಮರಳಿ ಪಡೆಯುವುದಾಗಿ ಹೋಂಡಾ ಕಂಪನಿ ಘೋಷಿಸಿದೆ. ಜೊತೆಗೆ ಅಗತ್ಯವಿರುವ ಎಲ್ಲಾ ರಿಪೇರಿಯನ್ನು ಮಾಲೀಕರಿಗೆ ಯಾವುದೇ ವೆಚ್ಚ ಭರಿಸದೆ ಸರಿಪಡಿಸಿ ಕೊಡುವುದಾಗಿ ಹೇಳಿದೆ.

publive-image

ಕಾರಿನಲ್ಲಿ ದೋಷಪೂರಿತ ಇಂಪರೆಲ್ಲರ್​ನಿಂದಾಗಿ ಎಂಜಿನ್​ ವೈಫಲ್ಯ ಸೇರಿ ಹಲವು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದನ್ನು ಗಮನಿಸಿದ ಕಂಪನಿ ಮರಳಿ ಪಡೆಯಲು ಮುಂದಾಗಿದೆ.

ಇದನ್ನೂ ಓದಿ:ಆರ್​​ಸಿಬಿ ತಂಡಕ್ಕೆ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​​; ಟೂರ್ನಿಯಿಂದಲೇ ಔಟ್​; ಕಾರಣವೇನು?

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment