/newsfirstlive-kannada/media/post_attachments/wp-content/uploads/2024/10/Honda-CB300.jpg)
ಜನಪ್ರಿಯ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಕಂಪನಿ ಹೊಸ CB300F ಫ್ಲೆಕ್ಸ್-ಫ್ಯೂಯೆಲ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಇದು ಭಾರತದ ಮೊದಲ 300ಸಿಸಿ ಫ್ಲೆಕ್ಸ್ ಫ್ಯೂಯಲ್ ಮೋಟರ್ಸೈಕಲ್ ಎಂದು ಗುರುತಿಸಿಕೊಂಡಿದೆ.
ಕಳೆದ ವರ್ಷ ಭಾರತ್ ಮೊಬಿಲಿಟಿ ಕಾರ್ಯಕ್ರಮದಲ್ಲಿ ಕಂಪನಿ CB300F ಫ್ಲೆಕ್ಸ್-ಫ್ಯೂಯೆಲ್ ಬೈಕ್ ಅನ್ನು ಪ್ರದರ್ಶಿಸಿತ್ತು. ಅಂದಹಾಗೆಯೇ ಈ ಬೈಕ್ E85 ಇಂಧನದಿಂದ ಚಲಿಸುತ್ತಿದೆ. ಅಂದರೆ ಶೇ85ರಷ್ಟು ಎಥೆನಾಲ್ ಮತ್ತು ಶೇ15ರಷ್ಟು ಪೆಟ್ರೋಲ್ ಮೂಲಕ ಕ್ರಮಿಸುವ ವಿಶೇಷತೆಯನ್ನು ಈ ಬೈಕ್ ಹೊಂದಿದೆ.
ಶಕ್ತಿ ಮತ್ತು ಸಾಮರ್ಥ್ಯ
CB300F ಫ್ಲೆಕ್ಸ್-ಫ್ಯೂಯೆಲ್ ಬೈಕ್ 293.5ಸಿಸಿ ಸಾಮರ್ಥ್ಯವನ್ನು ಹೊಂದಿದ್ದು, ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಅಳವಡಿಸಿಕೊಂಡಿದೆ. 24.5bhp ಮತ್ತು 25.9Nm ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡ್ ಟ್ರಾನ್ಸ್ಮಿಷನ್ ಗೇರ್ಬಾಕ್ಸ್ ಹೊಂದಿದೆ. ಡಿಜಿಟಲ್ ಇನ್ಟ್ರುಮೆಂಟ್ ಕನ್ಸೋಲ್ ಇದರಲ್ಲಿದೆ.
ಇದನ್ನೂ ಓದಿ: ರಾಜ್ಯದಲ್ಲಿ ವರುಣಾಘಾತ; ಸಾಲು ಸಾಲು ಅವಾಂತರ; 88 ಸ್ಥಳಗಳನ್ನ ಡೇಂಜರ್ ಸ್ಪಾಟ್ ಎಂದು ಗುರುತಿಸಿದ ಜಿಲ್ಲಾಡಳಿತ
ವಿಶೇಷತೆ
ನೂತನ ಬೈಕಿನಲ್ಲಿ ಸ್ಟ್ಯಾಂಡರ್ಡ್ ಲುಕ್ ಹೊಂದಿದ್ದು, ವಿಭಿನ್ನವಾಗಿದೆ. ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ನಂತಹ ವೈಶಿಷ್ಟ್ಯ ಇದರಲ್ಲಿದೆ. ಮುಂಭಾಗದಲ್ಲಿ ಗೋಲ್ಡನ್ ಬಣ್ಣದ ಅಪ್ ಸೈಡ್ ಡೌನ್ ಪೋರ್ಕ್ ಸಸ್ಪೆಕ್ಸನ್ ನೀಡಲಾಗಿದೆ. ಹಿಂಭಾಗ ಮೊನೊಶಾಕ್ ಸಸ್ಪೆಕ್ಷನ್ ನೀಡಲಾಗಿದೆ. ಎರಡು ಚಕ್ರಗಳಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.
ಬಣ್ಣ ಮತ್ತು ಬೆಲೆ?
ನೂತನ ಬೈಕ್ ಅನ್ನು ಎರಡು ಬಣ್ಣದಲ್ಲಿ ಪರಿಚಯಿಸಲಾಗಿದೆ. ಕೆಂಪು ಮತ್ತು ಬೂದು ಬಣ್ಣದಲ್ಲಿ ಗ್ರಾಹಕರ ಖರೀದಿಗೆ ಸಿಗಲಿದೆ. ಗ್ರಾಹಕರಿಗಾಗಿ ಈಗಾಗಲೇ ಕಂಪನಿ ಬುಕ್ಕಿಂಗ್ ಮಾಡುವ ಅವಕಾಶ ತೆರೆದಿಟ್ಟಿದೆ. 1.70 ಲಕ್ಷ ರೂಪಾಯಿಗೆ ಖರೀದಿಗೆ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ