/newsfirstlive-kannada/media/post_attachments/wp-content/uploads/2024/06/Mysore-Congress-MlA-Honey-Trap-Case.jpg)
ಮೈಸೂರು: ಚಾಮರಾಜ ಕ್ಷೇತ್ರದ ಶಾಸಕ ಹರೀಶ್ಗೌಡರಿಗೆ ಹನಿಟ್ರ್ಯಾಪ್ ಮೂಲಕ ಬ್ಲಾಕ್ ಮೇಲ್ ಮಾಡಿ ಕೋಟ್ಯಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಲೋಕಸಭೆ ಸ್ಪೀಕರ್ ಆಗಿ ಓಂ ಬಿರ್ಲಾ ಮರು ಆಯ್ಕೆ.. ಪ್ರಧಾನಿ ಮೋದಿ, ರಾಹುಲ್ ಗಾಂಧಿಯಿಂದ ಶುಭಾಶಯ
ಮೈಸೂರು ಮೂಲದ ಸಂತೋಷ್ ಮತ್ತು ಪುಟ್ಟರಾಜು ಎನ್ನುವ ಆರೋಪಿಗಳನ್ನ ಬಂಧಿಸಲಾಗಿದೆ. ಇವರ ಜೊತೆಗೆ ಓರ್ವ ಯುವತಿ ಕೂಡ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಇವರೆಲ್ಲ ಸೇರಿ ವಿಐಪಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ವಿಐಪಿಗಳು ಉಳಿದುಕೊಂಡು ಹೋದ ಹೋಟೆಲ್ ರೂಮ್ ಅನ್ನೇ ಇವರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅದೆ ರೂಮ್ಗೆ ಹೋಗಿ ಯುವತಿಯನ್ನು ಬಳಸಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು. ಈ ವಿಡಿಯೋ ಹಿಡನ್ ಕ್ಯಾಮೆರಾದಿಂದ ತೆಗೆದ ರೀತಿಯಲ್ಲಿ ಇರುತ್ತಿತ್ತು.
ಇದನ್ನೂ ಓದಿ: ಕಿರುತೆರೆ ನಟನ ಗೆಳೆಯ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವು.. ಇನ್ನೊಬ್ಬ ಗಂಭೀರ
ಬಳಿಕ ಈ ವಿಡಿಯೋವನ್ನು ವಿಐಪಿಗಳಿಗೆ ಕಳಿಸಿ ಇದು ನಿಮ್ಮದೇ ವಿಡಿಯೋ ಎಂದು ಬ್ಲ್ಯಾಕ್ ಮೇಲ್ ಮಾಡಿ ಕೋಟ್ಯಂತರ ರೂಪಾಯಿಗಳಿಗೆ ಬೇಡಿಕೆ ಇಡುತ್ತಿದ್ದರು. ಅಷ್ಟೇ ಅಲ್ಲ, ಬೆದರಿಕೆ ಕೂಡ ಹಾಕುತ್ತಿದ್ದರು. ಇದೇ ರೀತಿ ಈ ಹಿಂದೆ ವಿಶ್ವವಿದ್ಯಾಲಯವೊಂದರ ಉಪಕುಲಪತಿಗಳಿಗೂ ಬ್ಲಾಕ್ಮೇಲ್ ಮಾಡಿದ್ದರು. ಈ ಬಗ್ಗೆ ಶಾಸಕ ಹರೀಶ್ಗೌಡಗೆ ಮೊದಲೇ ಮಾಹಿತಿ ಇತ್ತು. ನಂತರದ ದಿನದಲ್ಲಿ ಹರೀಶ್ ಗೌಡಗೂ ಬ್ಲಾಕ್ಮೇಲ್ ಮಾಡಿ ಕೋಟಿ, ಕೋಟಿ ಹಣ ಕೇಳಿದ್ದರು. ಇದಾದ ತಕ್ಷಣವೇ ಶಾಸಕರು ಸಿಸಿಬಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದರು. ಈ ಸಂಬಂಧ ಹುಡುಕಾಟ ನಡೆಸಿದ್ದ ಪೊಲೀಸರು, ಇಬ್ಬರು ಆರೋಪಿಗಳ ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ