Advertisment

ಯಾರಿಲ್ಲ ಮನೆಗೆ ಬಾ.. ರೂಂಗೆ ಹೋಗ್ತಿದ್ದಂತೆ ಹಿಗ್ಗಾಮುಗ್ಗ ಥಳಿತ; ಮೈಸೂರಲ್ಲಿ ಖತರ್ನಾಕ್ ಹನಿಟ್ರ್ಯಾಪ್‌

author-image
admin
Updated On
ಯಾರಿಲ್ಲ ಮನೆಗೆ ಬಾ.. ರೂಂಗೆ ಹೋಗ್ತಿದ್ದಂತೆ ಹಿಗ್ಗಾಮುಗ್ಗ ಥಳಿತ; ಮೈಸೂರಲ್ಲಿ ಖತರ್ನಾಕ್ ಹನಿಟ್ರ್ಯಾಪ್‌
Advertisment
  • ಬಟ್ಟೆ ವ್ಯಾಪಾರಿಗೆ ಕಲರ್, ಕಲರ್ ಮೆಸೇಜ್ ಮಾಡುತ್ತಿದ್ದ ಸುಂದರಿ
  • ಚಿಕ್ಕಮ್ಮನ ಮನೆಗೆ ಬಾ ಅಂತ ಕರೆದಿದ್ದಕ್ಕೆ ಹೋಗಿದ್ದ ವ್ಯಾಪಾರಿ
  • ಇಬ್ಬರು ಚಿಕ್ಕಮನ ಮನೆ ರೂಂಗೆ ಹೋಗಿ ಲಾಕ್ ಆಗಿದ್ದು ಹೇಗೆ?

ಮೈಸೂರು: ಯಾರೂ ಇಲ್ಲ ಚಿಕ್ಕಮ್ಮನ ಮನೆಗೆ ಬಾ ಎಂದು ವಾಟ್ಸ್​ಌಪ್​ನಲ್ಲಿ ಚೆಲುವೆ ಮೆಸೇಜ್ ಮಾಡಿದ್ದಳು. ಮನೆ ಬಾಗಿಲು ತೆರೆದು ರೂಂಗೆ ಬರ್ತಿದ್ದಂತೆ ಲಾಕ್ ಮಾಡಿಕೊಂಡು ಹಿಗ್ಗಾಮುಗ್ಗ ಥಳಿಸಿದ್ದರು.

Advertisment

ಮೈಸೂರಲ್ಲಿ ಬಟ್ಟೆ ವ್ಯಾಪಾರಿ ದಿನೇಶ್​ ಎಂಬುವವರಿಗೆ ಹನಿಟ್ರ್ಯಾಪ್ ಮಾಡಿರೋ ಖತರ್ನಾಕ್ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಇದರಲ್ಲಿ ಮತ್ತೊಂದು ಸ್ಪೆಷಲ್ ಏನಂದ್ರೆ ಈ ಹನಿಟ್ರ್ಯಾಪ್​ ಗ್ಯಾಂಗ್​ಗೆ ಪೊಲೀಸ್​ ಸಿಬ್ಬಂದಿಯೇ ಸಾಥ್ ನೀಡಿದ್ದರು.

publive-image

ಯಾರೂ ಇಲ್ಲ ರೂಂಗೆ ಬಾ!
ವಾಟ್ಸ್​ ಌಪ್​ನಲ್ಲಿ ಬಟ್ಟೆ ವ್ಯಾಪಾರಿ ದಿನೇಶ್​ಗೆ ಸುಂದರಿಯಿಂದ ಕಲರ್ ಕಲರ್ ಮೆಸೇಜ್ ಬಂದಿತ್ತು. ದಿನೇಶ್ ಕುಮಾರ್​ಗೆ ಚಿಕ್ಕಮ್ಮನ ಮನೆಯಲ್ಲಿ ಯಾರೂ ಇಲ್ಲ ಬಾ ಎಂದು ಆಹ್ವಾನ ಕೊಟ್ಟಿದ್ದರು. ಮೆಸೇಜ್ ನೋಡಿ ಆಕೆ ಮನೆಗೆ ದಿನೇಶ್ ಕುಮಾರ್ ಹೋಗಿದ್ದರು.

ಇದನ್ನೂ ಓದಿ: ಶೆಡ್‌ಗಾಗಿ ಗ್ರಾಮ ಪಂಚಾಯ್ತಿ ಕಚೇರಿಗೆ ಬಂದ ಎಮ್ಮೆ; ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ 

Advertisment

ಚಿಕ್ಕಮ್ಮನ ಮನೆ ಒಳಗೆ ಬಟ್ಟೆ ವ್ಯಾಪಾರಿ ಹೋಗುತ್ತಿದ್ದಂತೆ ಯುವತಿ ರೂಂನ ಲಾಕ್ ಮಾಡಿಕೊಂಡಿದ್ದಳು. ಇಬ್ಬರು ರೂಂ ಒಳಗಿದ್ದಾಗ ಏಕಾಏಕಿ‌ ಕೊಠಡಿ ಬೀಗ ಒಡೆದು ಯುವತಿಯ ಗ್ಯಾಂಗ್ ಒಳಪ್ರವೇಶಿಸಿದೆ. ಬಟ್ಟೆ ವ್ಯಾಪಾರಿಗೆ ಹಿಗ್ಗಾಮುಗ್ಗ ಥಳಿಸಿರುವ ಯುವತಿ ಗ್ಯಾಂಗ್ ರೂಂಗೆ ನುಗ್ಗಿ ಹಿಗ್ಗಾಮುಗ್ಗ ಥಳಿಸಿದೆ. ಯುವತಿಯನ್ನ ಬಿಡಲು 10 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ.

publive-image

ಹನಿಟ್ರ್ಯಾಪ್ ‘ಪೋಲಿ’ಸ್!
ಪಿರಿಯಾಪಟ್ಟಣದ ಈ ಹನಿಟ್ರ್ಯಾಪ್​ ಗ್ಯಾಂಗ್​ಗೆ ಪೊಲೀಸ್​ ಸಿಬ್ಬಂದಿಯ ಬೆಂಬಲ ಇತ್ತು. ಸುಂದರ ಯುವತಿ ಮುಂದೆ ಬಿಟ್ಟು ಪೊಲೀಸ್ ಸಿಬ್ಬಂದಿ ಶಿವಣ್ಣ ಅವರು ಶ್ರೀಮಂತರ ಟ್ರ್ಯಾಪ್ ಮಾಡುತ್ತಿದ್ದರು. ಪೊಲೀಸ್ ಸಿಬ್ಬಂದಿಯ ಈ ಕೃತ್ಯದಿಂದ ಪೊಲೀಸ್ ಇಲಾಖೆಯೇ ಶಾಕ್ ಆಗಿದೆ.

ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹನಿಟ್ರ್ಯಾಪ್ ಕೃತ್ಯದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ ಶಿವಣ್ಣ ಸೇರಿ ಆರೋಪಿಗಳನ್ನ ಬಂಧಿಸಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment