ತಪ್ಪಿದ ಘೋರ ದುರಂತ.. ಏರ್​ಪೋರ್ಟ್​​ಗೆ ವಾಪಸ್ ಆದ ಏರ್ ಇಂಡಿಯಾ ವಿಮಾನ!

author-image
Bheemappa
Updated On
ಏರ್ ಇಂಡಿಯಾ ವಿಮಾನಗಳಲ್ಲಿ ಮತ್ತೆ ದೋಷ.. ಸಂಚಾರ ದಿಢೀರ್‌ ರದ್ದು; ಕಾರಣವೇನು?
Advertisment
  • ಒಂದೂವರೆ ಗಂಟೆ ಪ್ರಯಾಣ ಮಾಡಿ ವಾಪಸ್ ಆಗಿರುವ ವಿಮಾನ
  • ಪೈಲಟ್​, ಸಿಬ್ಬಂದಿಯಿಂದ ಮತ್ತೊಂದು ದೊಡ್ಡ ಅನಾಹುತ ತಪ್ಪಿತು
  • ಭಾರತಕ್ಕೆ ಬರ್ತಿದ್ದ ಏರ್​ ಇಂಡಿಯಾ ವಿಮಾನ ಜಸ್ಟ್ ಮಿಸ್ ಆಯ್ತಾ?

ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ AI-315ವು ಇಂದು ಬೆಳಗ್ಗೆ ಹಾಂಗ್ ಕಾಂಗ್ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಆಕಾಶದಿಂದಲೇ ವಾಪಸ್ ಏರ್​ಪೋರ್ಟ್​ಗೆ ಹೋಗಿದೆ ಎಂದು ಹೇಳಲಾಗುತ್ತಿದೆ.

ಹಾಂಗ್ ಕಾಂಗ್ ವಿಮಾನ ನಿಲ್ದಾಣದಿಂದ ಭಾರತದ ರಾಜಧಾನಿ ದೆಹಲಿಗೆ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ AI-315 ವು ಇಂದು ಬೆಳಗ್ಗೆ ಹೊರಟಿತ್ತು. ವಿಮಾನವೂ ಟೇಕ್ ಆಫ್​ ಆದ ಒಂದೂವರೆ ಗಂಟೆ ನಂತರ ಅಂದರೆ 90 ನಿಮಿಷಗಳ ನಂತರ ವಿಮಾನದಲ್ಲಿ ಸಂಭಾವ್ಯ ತಾಂತ್ರಿಕ ದೋಷವನ್ನು ಪೈಲಟ್​ಗಳು ಹಾಗೂ ಸಿಬ್ಬಂದಿ ಗುರುತಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ವಿಶ್ವಕಪ್ 2025 ಸಂಪೂರ್ಣ ವೇಳಾಪಟ್ಟಿ ರಿಲೀಸ್​.. ಭಾರತ- ಪಾಕಿಸ್ತಾನ ಮೊದಲ ಪಂದ್ಯ ಯಾವಾಗ?

publive-image

ಹೀಗಾಗಿಯೇ ದೆಹಲಿಗೆ ಬರುತ್ತಿದ್ದ ವಿಮಾನ ಆಗಸದಿಂದಲೇ ಹಾಂಗ್ ಕಾಂಗ್ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದೆ. ಏರ್​ ಟ್ರಾಫಿಕ್​ ಕಂಟ್ರೊಲರ್​ಗೆ ಪೈಲಟ್​ ಫೋನ್ ಮಾಡಿ ನಾವು ಇನ್ನು ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರಿಂದ ವಿಮಾನವನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು ಯಾವುದೇ ತೊಂದರೆ ಆಗಿಲ್ಲ. ಲ್ಯಾಂಡಿಂಗ್ ವೇಳೆಯೂ ವಿಮಾನ ಸುರಕ್ಷಿತವಾಗಿದ್ದು ಸಮಸ್ಯೆ ಕಾಣಿಸಿಲ್ಲ. ಸದ್ಯ ಇನ್ನೂ AI-315 ವಿಮಾನವನ್ನು ತಾಂತ್ರಿಕ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಜೂನ್ 12 ರಂದು ಅಹಮದಾಬಾದ್​ನ ಸರ್ದಾರ್​ ವಲ್ಲಭಭಾಯ್​ ಪಟೇಲ್​ ಏರ್​ಪೋರ್ಟ್​ನಿಂದ ಹೊರಟಿದ್ದ ಏರ್​ ಇಂಡಿಯಾ ವಿಮಾನ ಟೇಕ್​ಆಫ್​ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ 242 ಪ್ರಯಾಣಿಕರು ಹಾಗೂ ಎಂಬಿಬಿಎಸ್​ ಹಾಸ್ಟೆಲ್​ನಲ್ಲಿದ್ದ 25ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ಥಳದಲ್ಲೇ ಉಸಿರು ಚೆಲ್ಲಿದ್ದರು. ಇದರ ಬೆನ್ನಲ್ಲೇ ಜಾಗೃತಿ ತೆಗೆದುಕೊಂಡ ಏರ್​ ಇಂಡಿಯಾ ಪೈಲಟ್​ ದೊಡ್ಡ ಅನಾಹುತದಿಂದ ಪಾರು ಮಾಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment