newsfirstkannada.com

ಸಾವು ಗೆದ್ದು ಬಂದ ಸಾತ್ವಿಕನೇ ಮಹಾಪುರುಷ.. ತವರೂರಿನ ಗ್ರಾಮಸ್ಥರು, ಗಣ್ಯರಿಂದ ಸನ್ಮಾನ, ಗೌರವ

Share :

Published April 7, 2024 at 10:03pm

    ಗ್ರಾಮದ ಮಲ್ಲಯ್ಯನ ಗುಡಿ ಎದುರು ಮಂಗಲ ಪುರಾಣ ಕಾರ್ಯಕ್ರಮ

    ಸಾತ್ವಿಕ್ ಜೊತೆಗೆ ತಂದೆ ಸತೀಶ್‌, ತಾಯಿ ಪೂಜಾ ಅವರಿಗೂ ಸನ್ಮಾನ

    ಗ್ರಾಮದ ಆರಾಧ್ಯ ಧೈವ ಶ್ರೀ ಸಿದ್ಧಲಿಂಗ ಮಹಾರಾಜರ ಪವಾಡ ಎಂಬ ನಂಬಿಕೆ

ವಿಜಯಪುರ: ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದು 20 ಗಂಟೆಯ ಬಳಿಕ ಸುರಕ್ಷಿತವಾಗಿ ಹೊರ ಬಂದ ಬಳಿಕ 2 ವರ್ಷದ ಬಾಲಕ ಸಾತ್ವಿಕ್ ಎಲ್ಲರಿಗೂ ಅಚ್ಚರಿಯಾಗಿದ್ದಾನೆ. ಸಾವು ಗೆದ್ದು ಬಂದ ಬಾಲಕ ಸಾತ್ವಿಕನಿಗೆ ಸೂಕ್ತ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಇದೀಗ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಗೌರವ, ಸನ್ಮಾನಗಳು ಮುಂದುವರಿದಿದೆ.

ಲಚ್ಯಾಣ ಗ್ರಾಮದ ಮಲ್ಲಯ್ಯನ ಗುಡಿ ಎದುರು ಮಂಗಲ ಪುರಾಣ ಕಾರ್ಯಕ್ರಮ ಸಮಿತಿಯಿಂದ ಬಾಲಕ ಸಾತ್ವಿಕ್‌ನಿಗೆ ವಿಶೇಷ ಗೌರವ ನೀಡಿ, ಸನ್ಮಾನಿಸಲಾಗಿದೆ. ಸಾತ್ವಿಕ್ ಜೊತೆಗೆ ತಂದೆ ಸತೀಶ್ ಮುಜಗೊಂಡ ಹಾಗೂ ತಾಯಿ ಪೂಜಾ ಮುಜಗೊಂಡ ಅವರನ್ನು ಗೌರವಿಸಲಾಗಿದೆ.

ಲಚ್ಯಾಣ ಗ್ರಾಮದ ತೋಟದ ಮನೆಯಲ್ಲಿದ್ದ ತೆರೆದ ಕೊಳವೆಬಾವಿಯಲ್ಲಿ ಆಟವಾಡುವ ವೇಳೆ ಸಾತ್ವಿಕ್ ಬಿದ್ದಿದ್ದ. ಸತತ 20 ಗಂಟೆ ಕಾರ್ಯಾಚರಣೆ ನಡೆಸಿ ಸಾತ್ವಿಕ್ ಅನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿತ್ತು. 48 ಗಂಟೆಯ ಕಾಲ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ನಿನ್ನೆಯಷ್ಟೇ ಲಚ್ಯಾಣ ಗ್ರಾಮಕ್ಕೆ ಕರೆತಂದು ಬಿಟ್ಟಿದ್ದಾರೆ. ಇದೀಗ ಸಾತ್ವಿಕ್ ಸಂಪೂರ್ಣ ಆರೋಗ್ಯವಾಗಿದ್ದಾನೆ.

ಇದನ್ನೂ ಓದಿ: ಸಾತ್ವಿಕ್‌ ಸಾಮಾನ್ಯನಲ್ಲ.. ಕೊಳವೆ ಬಾವಿಗೆ ಬಿದ್ದಿದ್ದ ಕಂದನ ರಿಪೋರ್ಟ್‌ಗೆ ಶಾಕ್ ಆದ ವೈದ್ಯರು; ಹೇಳಿದ್ದೇನು?

ಲಚ್ಯಾಣ ಗ್ರಾಮದ ಆರಾಧ್ಯ ಧೈವ ಶ್ರೀ ಸಿದ್ಧಲಿಂಗ ಮಹಾರಾಜರ ಪವಾಡದಿಂದಲೇ ಸಾತ್ವಿಕ್ ಸಾವನ್ನೇ ಗೆದ್ದು ಬಂದಿದ್ದಾನೆ ಎಂದು ಗ್ರಾಮಸ್ಥರು ನಂಬಿದ್ದಾರೆ. ಮಗನಿಗೆ ಸಾತ್ವಿಕ್ ಬದಲಾಗಿ ಸಿದ್ಧಲಿಂಗ ಎಂದು ನಾಮಕರಣ ಮಾಡುತ್ತೇವೆಂದು ಪೋಷಕರು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವು ಗೆದ್ದು ಬಂದ ಸಾತ್ವಿಕನೇ ಮಹಾಪುರುಷ.. ತವರೂರಿನ ಗ್ರಾಮಸ್ಥರು, ಗಣ್ಯರಿಂದ ಸನ್ಮಾನ, ಗೌರವ

https://newsfirstlive.com/wp-content/uploads/2024/04/Vijayapura-Borewell-Satwik-6.jpg

Load More