/newsfirstlive-kannada/media/post_attachments/wp-content/uploads/2025/04/RCR-FATHER.jpg)
ಆಕೆ ಅನ್ಯ ಜಾತಿಯ ಯುವಕನ ಪ್ರೀತಿಸಿದ ಅಪ್ರಾಪ್ತೆ. ಮರ್ಯಾದೆಗೆ ಅಂಜಿದ್ದ ಆಕೆಯ ತಂದೆ ಪ್ರೀತಿಗೆ ಅಡ್ಡಿಪಡಿಸಿದ್ದ. ಯುವಕನ ಸಹವಾಸವೇ ಬೇಡ ಎಂದು ನಿತ್ಯವೂ ಗೋಗರೆದಿದ್ದ. ಆದ್ರೆ ಅವನೇ ಬೇಕು ಎಂದು ಪಟ್ಟು ಹಿಡಿದವಳಿಗೆ ಆ ತಂದೆ ಮಾಡಿದ್ದು ಮಾತ್ರ ಘನಘೋರ.
ಮಗಳನ್ನೇ ಕೊಂದು ಕೃಷ್ಣ ನದಿಗೆ ಎಸೆದ ತಂದೆ!
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದ ಅಪ್ರಾಪ್ತೆ ಅನ್ಯ ಜಾತಿಯ ಯುವಕ ಹನುಮಂತ ಎಂಬಾತನನ್ನ ಪ್ರೀತಿ ಮಾಡಿದ್ಲು. ಈ ಪ್ರೀತಿ ಆಕೆಯ ತಂದೆ ಲಕ್ಕಪ್ಪ ಕಂಬಳಿಗೆ ಕೋಪ ತರಿಸಿತ್ತು. ಅವನನ್ನೇ ಮದುವೆಯಾಗುವ ಪಣ ತೊಟ್ಟಿದ್ದ ಮಗಳ ಹಠದಿಂದ ಗ್ರಾಮದಲ್ಲಿ ತನ್ನ ಹಾಗೂ ಕುಟುಂಬ ಮರ್ಯಾದೆ ಮಣ್ಣು ಪಾಲಾಗುತ್ತೆ ಎಂದು ಲಕ್ಕಪ್ಪ ಆತಂಕದಲ್ಲಿದ್ದ. ಇದೇ ಸಿಟ್ಟಿನಲ್ಲಿ ಆತ ಮಾಡಿದ್ದು ಮಾತ್ರ ಘೋರ ಕೃತ್ಯ.
ಇದನ್ನೂ ಓದಿ: ಒಂದೇ ಓವರ್, 28 ರನ್ ಸಿಡಿಸಿದ ವೈಭವ್ ಸೂರ್ಯವಂಶಿ.. ಅತಿ ವೇಗದ ಅರ್ಧಶತಕ ಬಾರಿಸಿದ 14 ವರ್ಷದ ಬಾಲಕ
ಮರ್ಯಾದಗೇಡು ಹತ್ಯೆ!
ಅಪ್ರಾಪ್ತೆ ಹಾಗೂ ಹನುಮಂತ ಒಂದೇ ಗ್ರಾಮದವರಾದ್ರಿಂದ ಇವರಿಬ್ಬರ ಪ್ರೀತಿ ಗುಟ್ಟಾಗಿರದೆ ಗ್ರಾಮದಲ್ಲಿ ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಎಲ್ಲೆಂದರಲ್ಲಿ ಒಟ್ಟಿಗೆ ಓಡಾಡುತ್ತಿದ್ದರು. ಇವರಿಬ್ಬರ ಪ್ರೀತಿಗೆ ಮನೆಯಲ್ಲಿ ಅಪಸ್ವರ ಕೇಳಿ ಬಂದಿತ್ತು. ಅಲ್ಲದೇ ಪ್ರೀತಿಸಿದ ಯುವಕನೊಂದಿಗೆ ಬಾಲಕಿ ಮನೆ ಬಿಟ್ಟು ಹೋಗಿದ್ಲು. ಆಗ ತಂದೆ ಲಕ್ಕಪ್ಪ ಆಕೆಯನ್ನ ಹುಡುಕಿಸಿ ಕರೆತಂದಿದ್ದ. ಅದಾದ ನಂತರವೂ ಇಬ್ಬರು ಸಲುಗೆಯಿಂದ ಇದ್ದದ್ದು ತಂದೆಗೆ ಮತ್ತಷ್ಟು ಸಿಟ್ಟು ತರಿಸಿತ್ತು. ನಮ್ಮ ಮರ್ಯಾದೆ ಕಳೀಬೇಡ ಅವನೊಂದಿಗೆ ಮಾತನಾಡುವುದನ್ನು ಬಿಡು ಎಂದು ಮಗಳಿಗೆ ತಂದೆ ತಾಕೀತು ಮಾಡಿದ್ದ. ಆದ್ರೆ 18 ವರ್ಷ ತುಂಬಿದ ಮರು ದಿನವೇ ಹನುಂತನ ಜೊತೆ ಓಡಿ ಹೋಗುವುದಾಗಿ ಮಗಳು ಪದೇ ಪದೇ ಹೇಳುತ್ತಿದ್ದಳು.
ಇದನ್ನೂ ಓದಿ: ಕುಟುಂಬದಲ್ಲಿ ಶಾಂತಿಯ ವಾತಾವರಣ, ಉದ್ಯೋಗದಲ್ಲಿ ಅಭಿವೃದ್ಧಿ ಕಾಣೋ ದಿನ- ಇಲ್ಲಿದೆ ಇಂದಿನ ಭವಿಷ್ಯ!
ಇದ್ರಿಂದ ಸಿಟ್ಟಿಗೆದ್ದಿದ್ದ ಲಕ್ಕಪ್ಪನ ಮಗಳು ನನ್ನ ಮರ್ಯಾದೆ ಕಳೆಯುತ್ತಿದ್ದಾಳೆ ಎಂದು ಆಕೆಯನ್ನೇ ಹತ್ಯೆಗೈದಿದ್ದಾನೆ. ಬಳಿ ಕೃಷ್ಣಾ ನದಿಗೆ ಮಗಳ ಮೃತದೇಹವನ್ನ ಎಸೆದಿದ್ದಾನೆ. ಅಲ್ಲದೇ ನದಿಗೆ ಎಸೆದು ಬಂದು ಪತ್ನಿ ಮುಂದೆ ನಡೆದ ಘಟನೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೊಂದು ಹಾಕುತ್ತೇನೆ ಎಂದು ಪತ್ನಿಗೆ ಬೆದರಿಕೆ ಹಾಕಿದ್ದಾನೆ.
ಮಗಳನ್ನು ಕೊಂದು ನದಿಗೆ ಎಸೆದ ನಂತರ ಯಾರಿಗೂ ತಿಳಿಸದೇ ಆಕೆಗೆ ಮದುವೆ ಮಾಡಿ ಕೊಟ್ಟಿರುವುದಾಗಿ ಗ್ರಾಮದಲ್ಲಿ ಹೇಳಿಕೊಂಡು ಲಕ್ಕಪ್ಪ ತಿರುಗಾಡುತ್ತಿದ್ದ. ಮರ್ಯಾದೆಗಾಗಿ ಮಗಳನ್ನು ಕೊಂದ ಪ್ರಕರಣ ಅದು ಹೇಗೋ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ಲಿಂಗಸುಗೂರು ಪೊಲೀಸರು ಕೃಷ್ಣಾ ನದಿಯಲ್ಲಿ ಅಪ್ರಾಪ್ತೆ ಶವಕ್ಕಾಗಿ ಶೋಧ ಕಾರ್ಯ ಮಾಡುತ್ತಿದ್ದಾರೆ. ಆದ್ರೆ ಮೃತದೇಹ ಮಾತ್ರ ಇನ್ನೂ ಸಿಕ್ಕಿಲ್ಲ.. ಮೊಸಳೆಗಳು ಮೃತದೇಹ ತಿಂದು ಹಾಕಿರುವ ಸಾಧ್ಯತೆ ಇದೆ.
ಇದನ್ನೂ ಓದಿ: NIAಗೆ ಸಖತ್ ಕ್ಲೂ ಕೊಟ್ಟ ಅದೊಂದು ವಿಡಿಯೋ, ಪಹಲ್ಗಾಮ್ ದಾಳಿ ತನಿಖೆಗೆ ಬಿಗ್ ಟ್ವಿಸ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ