/newsfirstlive-kannada/media/post_attachments/wp-content/uploads/2025/05/ABD_BATTING.jpg)
ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫೈನಲ್​ ತಲುಪಿದ್ದು ಕಪ್ ಗೆಲ್ಲುಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ. ಫೈನಲ್​ಗಾಗಿ ಆಟಗಾರರೆಲ್ಲ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಇದರ ನಡುವೆ ಆರ್​ಸಿಬಿ ಈ ಬಾರಿ ಟ್ರೋಫಿ ಎತ್ತಿ ಹಿಡಿಯುತ್ತದೆ ಎಂದು ಆರ್​ಸಿಬಿಯ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರ್​ಸಿಬಿ ತಂಡದ ಮಾಜಿ ಆಟಗಾರ ಮಿಸ್ಟರ್​ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರು ಮುಂಬೈನಲ್ಲಿ ವೀಲ್‌ಚೇರ್​ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಮುಂಬೈನ ಮರೀನ್ ಲೈನ್ಸ್‌ನಲ್ಲಿರುವ ಇಸ್ಲಾಂ ಜಿಮ್ಖಾನಾದಲ್ಲಿ ವೀಲ್‌ಚೇರ್ ತಂಡದ ಆಟಗಾರರ ಜೊತೆ ಕೆಲವು ಕ್ಷಣಗಳನ್ನು ಕಳೆದರು. ಇದೇ ವೇಳೆ ಎಬಿ ಡಿವಿಲಿಯರ್ಸ್ ಅವರು ಮಾತನಾಡಿದರು.
/newsfirstlive-kannada/media/post_attachments/wp-content/uploads/2025/05/ABD_BATTING_1.jpg)
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಬಿ ಡಿವಿಲಿಯರ್ಸ್ ಅವರು, 2025ರ ಐಪಿಎಲ್​ನಲ್ಲಿ ಆರ್​ಸಿಬಿ ಫೈನಲ್​ ತಲುಪಿರುವುದು ನನಗೆ ತುಂಬಾ ಖುಷಿ ಆಗಿದೆ. ಕಳೆದ ರಾತ್ರಿ ಮುಂಬೈ ಇಂಡಿಯನ್ಸ್​, ಗುಜರಾತ್​ ಟೈಟನ್ಸ್​ ವಿರುದ್ಧ ಗೆಲುವು ಸಾಧಿಸಿದ್ದು ಕ್ವಾಲಿಫೈಯರ್​- 2ನಲ್ಲಿ ಪಂಜಾಬ್​ ಜೊತೆ ಆಡಲಿದೆ. ನಾನು ಕೂಡ ಆರ್​ಸಿಬಿ ಜೊತೆಗೆ ಯಾವ ಟೀಮ್ ಫೈನಲ್​ಗೆ ಬರುತ್ತದೆ ಎಂದು ಕುತೂಹಲದಿಂದ ಇದ್ದೇನೆ. ಇದು ಒಳ್ಳೆಯ ವರ್ಷ, ಆರ್​ಸಿಬಿ ಟ್ರೋಫಿ ಗೆದ್ದೇ, ಗೆಲ್ಲುತ್ತದೆ. ಆರ್​ಸಿಬಿ ಟ್ರೋಫಿ ಎತ್ತಿಹಿಡಿಯಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
ಕ್ವಾಲಿಫೈಯರ್- 1ರ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ಭರ್ಜರಿ ಬೌಲಿಂಗ್ ಮಾಡಿದ್ದ ಆರ್​ಸಿಬಿ ಸುಲಭವಾಗಿ ಗುರಿ ಮುಟ್ಟಿತು. ಇದರಿಂದ ನೇರವಾಗಿ ಆರ್​ಸಿಬಿ ಐಪಿಎಲ್​ನ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಕ್ವಾಲಿಫೈಯರ್- 2 ಪಂದ್ಯ ಮುಂಬೈ ಹಾಗೂ ಪಂಜಾಬ್​​ ಕಿಂಗ್ಸ್​ ಜೊತೆ ನಡೆಯಲಿದ್ದು ಇದರಲ್ಲಿ ಗೆದ್ದ ತಂಡ, ಆರ್​ಸಿಬಿ ವಿರುದ್ಧ ಫೈನಲ್​ನಲ್ಲಿ ಅಖಾಡಕ್ಕೆ ಧುಮುಕಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us