/newsfirstlive-kannada/media/post_attachments/wp-content/uploads/2024/07/Vijayapura-Accident.jpg)
ವಿಜಯಪುರ: ದೇವರ ಹಿಪ್ಪರಗಿಯ ಟಿಪ್ಪು ನಗರದಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಅತಿ ವೇಗದಲ್ಲಿ ಕಾರು ಚಲಾಯಿಸಿದ ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರಿಗೆ ಗುದ್ದಿಕೊಂಡು ಪರಾರಿಯಾಗಿದ್ದಾನೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಕೊಡಗಿನಲ್ಲಿ ಪತ್ನಿಯ ಬರ್ಬರ ಹತ್ಯೆ.. ಕೋವಿ ಸಮೇತ ಪೊಲೀಸರಿಗೆ ಶರಣಾದ ಬೋಪಣ್ಣ; ಕಾರಣವೇನು?
ಭೀಕರ ಅಪಘಾತ ಹೇಗಾಯ್ತು?
ಕಾರು ಚಾಲಕ ಕುಡಿದ ಮತ್ತಿನಲ್ಲಿ ಇಬ್ಬರು ಮಹಿಳೆಯರಿಗೆ ಗುದ್ದಿದ್ದಾನೆ. ಕಾರು ಗುದ್ದಿದ ರಭಸಕ್ಕೆ ಮಹಿಳೆಯರು ಆಳೆತ್ತರಕ್ಕೆ ಹಾರಿ ಕೆಳಗೆ ಬಿದ್ದಿದ್ದಾರೆ. ಇದಾದ ಮೇಲೆ ಮುಂದಿದ್ದ ಬೈಕ್ ಸವಾರನಿಗೂ ಕಾರು ಡಿಕ್ಕಿ ಹೊಡೆದಿದೆ. ಚಾಲಕ ಮಹಿಳೆಯರಿಗೆ ಗುದ್ದಿದರೂ ಕಾರು ನಿಲ್ಲಿಸದೆ ಹೊರಟು ಹೋಗಿದ್ದಾನೆ.
ಆರೋಪಿ ಕಾರು ಚಾಲಕನನ್ನು ರಿಯಾಜ್ ದುಮ್ಮಾದ್ರಿ ಎನ್ನಲಾಗಿದೆ. ರಿಯಾಜ್ ದುಮ್ಮಾದ್ರಿ ನಿನ್ನೆ ರಾತ್ರಿ 9ಗಂಟೆ ಸುಮಾರಿಗೆ ಇಬ್ಬರು ಮಹಿಳೆಯರಿಗೆ ಗುದ್ದಿದ್ದಾನೆ. ಐಶ್ವರ್ಯ ರಾಮಚಂದ್ರ ಗೊಲ್ಲರ್ (16) ಯಲ್ಲವ್ವ ಪರಶುರಾಮ ಗೊಲ್ಲರ್ (50) ಅವರಿಗೆ ಗಂಭೀರ ಗಾಯಗಳಾಗಿದೆ.
ಇದನ್ನೂ ಓದಿ:ರೇಣುಕಾಸ್ವಾಮಿ ಮೇಲೆ ದರ್ಶನ್ ಮಾಡಿರೋ ಹಲ್ಲೆ ವಿಡಿಯೋ ಸೆರೆ? 3 ಸೆಕೆಂಡ್ನ ಕರಾಳತೆಯ ಸತ್ಯ ಕಕ್ಕಿದ ಈ ಆರೋಪಿ
ಗಾಯಾಳುಗಳನ್ನು ವಿಜಯಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯರಿಗೆ ಗುದ್ದಿಕೊಂಡು ಪರಾರಿಯಾದ ಆರೋಪಿ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ