ರೋಡ್ ರೇಜ್ ರೌಡಿಸಂ.. ಬೆಂಗಳೂರಲ್ಲಿ ರಪ್ ರಪ್ ಅಂತ ಹೆಲ್ಮೆಟ್ ಅಲ್ಲೇ ಹೊಡೆದ ಕಿರಾತಕರು!

author-image
admin
Updated On
ರೋಡ್ ರೇಜ್ ರೌಡಿಸಂ.. ಬೆಂಗಳೂರಲ್ಲಿ ರಪ್ ರಪ್ ಅಂತ ಹೆಲ್ಮೆಟ್ ಅಲ್ಲೇ ಹೊಡೆದ ಕಿರಾತಕರು!
Advertisment
  • ಬೆಂಗಳೂರಲ್ಲಿ ಮತ್ತೆ ರೋಡ್ ರೇಜ್ ಪ್ರಕರಣದ ರಾಕ್ಷಸ ಕೃತ್ಯ
  • ರಸ್ತೆಯಲ್ಲೇ ವಾಹನ ಸವಾರನಿಗೆ ರಕ್ತ ಬರುವ ಹಾಗೆ ಹೊಡೆದ ಗ್ಯಾಂಗ್‌
  • ಹೆಲ್ಮೆಟ್ ಅಲ್ಲಿ ತಲೆಗೆ ಹೊಡೆಯುವ ದೃಶ್ಯ ಎದೆ ಝಲ್ ಅನ್ನಿಸುತ್ತೆ!

ಬೆಂಗಳೂರಲ್ಲಿ ಈ ರೋಡ್ ರೇಜ್ ಪ್ರಕರಣದ ರಾಕ್ಷಸ ಕೃತ್ಯಕ್ಕೆ ಕಡಿವಾಣವೇ ಬೀಳುತ್ತಿಲ್ಲ. ಗಾಡಿ ಟಚ್ ಆಯ್ತು ಅಂತ ಕಿಡಿಗೇಡಿಗಳು ರಸ್ತೆಯಲ್ಲೇ ವಾಹನ ಸವಾರನಿಗೆ ರಕ್ತ ಬರುವ ಹಾಗೆ ಹೊಡೆದಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭಯಾನಕ ಘಟನೆ ನಡೆದಿದೆ.

publive-image

ಗಾಡಿ ಟಚ್ ಆಗಿದ್ದಕ್ಕೆ ಆ ಯುವಕ ತಪ್ಪಾಯ್ತು ಅಂತ ಕೇಳಿಕೊಂಡಿದ್ದಾನೆ. ಆದರೂ ಕಿರಾತಕರ ಗ್ಯಾಂಗ್‌ಗೆ ಕರುಣೆಯೇ ಬಂದಿಲ್ಲ. ರಪ್ ರಪ್ ಅಂತ ಹೆಲ್ಮೆಟ್ ಅಲ್ಲಿ ತಲೆಗೆ ಹೊಡೆಯುವ ದೃಶ್ಯ ಎದೆ ಝಲ್ ಅನ್ನುವಂತಿದೆ.
ಒಬ್ಬ ಯುವಕನ ಮೇಲೆ ನಾಲ್ವರ ಗ್ಯಾಂಗ್‌ ಸುತ್ತುವರಿದು ಅಟ್ಯಾಕ್ ಮಾಡಿರೋ ಈ ವಿಡಿಯೋ ನ್ಯೂಸ್ ಫಸ್ಟ್ ಚಾನೆಲ್‌ಗೆ ಲಭ್ಯವಾಗಿದೆ.

publive-image

ತಲೆ ಮೇಲೆ ಗಾಯ, ಕಣ್ಣಲ್ಲಿ ನೀರು ಸುರಿಸುತ್ತಿರುವ ಯುವಕ ಕ್ಷಮಿಸಿ ಅಂತ ಅಂಗಲಾಚಿದ್ದಾನೆ. ಇಷ್ಟಾದರೂ ಪಾಪಿಗಳು ಹೆಲ್ಮೆಟ್‌ನಲ್ಲಿ ಥಳಿಸುವುದನ್ನು ಮಾತ್ರ ನಿಲ್ಲಿಸಿಯೇ ಇಲ್ಲ.

ಇದನ್ನೂ ಓದಿ: Rain Alert: ಕರ್ನಾಟಕದಲ್ಲಿ ಒಂದು ವಾರ ಮಳೆ.. 11 ಜಿಲ್ಲೆಗಳಿಗೆ ಎಚ್ಚರಿಕೆ..! 

ರೋಡ್ ರೇಜ್ ರೌಡಿಸಂಗೆ ಕೊನೆ ಯಾವಾಗ?
ರಸ್ತೆಯಲ್ಲಿ ಈ ಯುವಕನ ಆಕ್ರಂದನ ಕೇಳಲಾಗದೆ ಸ್ಥಳೀಯರು ಸಹಾಯಕ್ಕೆ ಬಂದಿದ್ದಾರೆ. ಸ್ಥಳೀಯರು ಸುತ್ತುವರಿದರೂ ಆ ಯುವಕರ ಆಕ್ರೋಶ ಕಡಿಮೆ ಆಗಲೇ ಇಲ್ಲ. ಈ ದೃಶ್ಯವನ್ನು ನೋಡಿದ್ರೆ ಸಿಲಿಕಾನ್ ಸಿಟಿಯಲ್ಲಿ ರೋಡ್ ರೇಜ್ ಪ್ರಕರಣಕ್ಕೆ ಕೊನೆಯೇ ಇಲ್ಲದ ಹಾಗಿದೆ ಅನ್ನೋದು ಗೊತ್ತಾಗಿದೆ. ಸದ್ಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ A1 ಮುಖೇಶ್, A2 ವಿಜಯ್, A3 ಶರಣ್, A4 ಪ್ರವೀಣ್, A5 ಶಶಿ ವಿರುದ್ಧ FIR ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment