ರೇಣುಕಾಸ್ವಾಮಿ ಮಾದರಿಯಲ್ಲೇ ಮತ್ತೊಂದು ಅಟ್ಯಾಕ್; ಮೆಸೇಜ್ ಮಾಡಿದ್ದಕ್ಕೆ ಅಪಹರಿಸಿ ಭಯಾನಕ ವಿಕೃತಿ..

author-image
Ganesh
Updated On
ರೇಣುಕಾಸ್ವಾಮಿ ಕೊಲೆಗೂ ಮುನ್ನ ಹೊಟ್ಟೆ ತುಂಬಾ ಊಟ ತಿನ್ನಿಸಿದ್ರು.. ಆಮೇಲೆ ನಡೆದಿದ್ದೇ ಡೆವಿಲ್‌ ಗ್ಯಾಂಗ್‌ ಚಿತ್ರಹಿಂಸೆ!
Advertisment
  • ನೆಲಮಂಗಲದ ಸೋಲದೇಹವನಹಳ್ಳಿಯಲ್ಲಿ ಅಟ್ಯಾಕ್
  • ರೇಣುಕಾಸ್ವಾಮಿ ಕೇಸಂತೆ ಆಗುತ್ತೆ ಅಂತಾ ಹೇಳಿ ಹಲ್ಲೆ
  • ಪ್ರಕರಣ ಸಂಬಂಧ ಆರೋಪಿಗಳ ಬಂಧನ ಆಗಿದೆ

ಬೆಂಗಳೂರು: ಕಳೆದ ಒಂದು ವರ್ಷದ ಹಿಂದೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆಘಾತಕಾರಿ ಕೃತ್ಯವೊಂದು ಆ ಪ್ರಕರಣವನ್ನು ಮತ್ತೆ ನೆನಪಿಸಿದೆ. ಮಾತ್ರವಲ್ಲ, ಈ ಕೇಸ್​ನಲ್ಲಿರುವ ಆರೋಪಿಗಳೇ ಹಲ್ಲೆ ಮಾಡುವಾಗ ಖುದ್ದು ರೇಣುಕಾಸ್ವಾಮಿ ಪ್ರಕರಣವನ್ನು ಪ್ರಸ್ತಾಪಿಸಿದ್ದಾರೆ!

ಏನಿದು ಪ್ರಕರಣ..?

ಕುಶಾಲ್ ಎಂಬಾತ ತನ್ನ ಮಾಜಿ ಸ್ನೇಹಿತೆಗೆ ಮೆಸೇಜ್ ಮಾಡಿದ ಅನ್ನೋ ಕಾರಣಕ್ಕೆ, ಆತನ ಅಪಹರಿಸಿ ಮನಸೋ ಇಚ್ಛೆ ಹಲ್ಲೆ ಮಾಡಲಾಗಿದೆ. ಅಂದು ರೇಣುಕಾಸ್ವಾಮಿಯ ಬಟ್ಟೆ ಬಿಚ್ಚಿಸಿ, ನಗ್ನಗೊಳಿಸಿ ಚಿತ್ರಹಿಂಸೆ ನೀಡಿದಂತೆ ಟಾರ್ಚರ್ ನೀಡಲಾಗಿದೆ. ಮಾತ್ರವಲ್ಲ ಆತನ ಮರ್ಮಾಂಗಕ್ಕೆ ಒದ್ದು, ಕೊಡಬಾರದ ಹಿಂಸೆ ಕೊಟ್ಟಿದ್ದಾರೆ. ‘ತಪ್ಪಾಯ್ತು ಅಣ್ಣಾ, ಬಿಡ್ರೋ’ ಅಂದ್ರೂ ಕೇಳದ ಪಾಪಿಗಳು ಬರ್ಬರವಾಗಿ ಥಳಿಸಿದ್ದಾರೆ.

ಇದನ್ನೂ ಓದಿ: ಶಾಲೆಯಲ್ಲಿ ಮಹಾ ಹಗರಣ! 24 ಲೀ. ಪೇಂಟ್ ಬಳಿಯಲು 443 ಕಾರ್ಮಿಕರು.. 3.38 ಲಕ್ಷ ರೂ ಖರ್ಚು..!

publive-image

ಹಲ್ಲೆ ಮಾಡಿದ್ದು ಮಾತ್ರವಲ್ಲದೇ, ಹಿಗ್ಗಾಮುಗ್ಗಾ ಥಳಿಸುವ ದೃಶ್ಯವನ್ನೂ ಮೊಬೈಲ್​​ನಲ್ಲಿ ಕಿರಾತಕರು ಸೆರೆ ಹಿಡಿದುಕೊಂಡಿದ್ದಾರೆ. ಇದೀಗ ಆ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲ್ಲೆ ಮಾಡ್ತಿರುವ ದೃಶ್ಯವನ್ನು ಓರ್ವ ಆರೋಪಿ ಸೆರೆ ಹಿಡಿದಿದ್ದಾನೆ. ಅದರಲ್ಲಿ ಆತ, ಎ-1 ಹೇಮಂತ್, ಎ-2 ನಾನು ಎಂದು ಹೇಳಿದ್ದಾನೆ. ಸುಮಾರು 6 ರಿಂದ 7 ಮಂದಿಯಿದ್ದ ಗ್ಯಾಂಗ್​ನಿಂದ ಈ ಮಾರಣಾಂತಿಕ ದಾಳಿಯಾಗಿದೆ. ಎರಡು ವಿಡಿಯೋಗಳು ವೈರಲ್ ಆಗಿದ್ದು, ಒಂದರಲ್ಲಿ ಬಟ್ಟೆ ಬಿಚ್ಚಿಸಿ ಅಟ್ಟಾಡಿಸಿ ಹೊಡೆಯುತ್ತಿದ್ದಾರೆ. ಇನ್ನೊಂದರಲ್ಲಿ ಸಂತ್ರಸ್ತ ಕುಶಾಲ್​​ನನ್ನು ಫೀಲ್ಡ್​​ನಲ್ಲಿ ಬೀಳಿಸಿಕೊಂಡು ಆತನ ಮೇಲೆ ಮೃಗಿಯವಾಗಿ ಹಲ್ಲೆ ಮಾಡ್ತಿರೋದಾಗಿದೆ.

ಹೇಗಿದೆ ಯುವಕನ ಸ್ಥಿತಿ..?

ಮಾರಣಾಂತಿಕ ದಾಳಿಗೆ ಒಳಗಾದ ಕುಶಾಲ್​​ನನ್ನು ಸದ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆರೋಗ್ಯ ಸ್ಥಿತಿ ಹೇಗಿದೆ ಅನ್ನೋದ್ರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕುಟುಂಬಸ್ಥರು ಕುಶಾಲ್​ನ ಸ್ಥಿತಿ ಕಂಡು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ನಿಮಗಿದು ಗೊತ್ತೇ.. ಹೃದಯಾಘಾತ ತಡೆಯೋ ಶಕ್ತಿ ಈ ಹಣ್ಣಿಗೆ ಇದೆ.. ವಾರಕ್ಕೆ ಒಮ್ಮೆ ತಿಂದರೆ ಸಾಕು..!

publive-image

ಪ್ರಕರಣದ ಹಿನ್ನೆಲೆ ಏನು..?

ಸಂತ್ರಸ್ತ ಕುಶಾಲ್, ಕಳೆದ ಎರಡು ವರ್ಷಗಳ ಹಿಂದೆ ಕಾಲೇಜಿಗೆ ಹೋಗುವಾಗ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಇತ್ತೀಚೆಗೆ ಲವ್​ ಬ್ರೇಕ್ ಅಪ್ ಆಗಿದೆ. ಬ್ರೇಕ್​ ಅಪ್ ಬೆನ್ನಲ್ಲೇ, ಆ ಯುವತಿಗೆ ಇನ್ನೊಂದು ಹುಡುಗನ ಪರಿಚಯ ಆಗಿದೆ. ಇದು ಕುಶಾಲ್​ಗೆ ಗೊತ್ತಾಗಿ, ಮೆಸೇಜ್ ಮಾಡಿದ್ದಾನೆ. ಮಾಜಿ ಪ್ರಿಯಕರ ಕುಶಾಲ್ ಮಾಡಿದ ಮೆಸೇಜ್ ಅನ್ನು ಆಕೆ ಹಾಲಿ ಹುಡುಗನಿಗೆ ತಿಳಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಆತ, ಕುಶಾಲ್​​ನನ್ನು ಕಿಡ್ನ್ಯಾಪ್ ಮಾಡಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಕಾರಿನಲ್ಲಿ ಕರೆದುಕೊಂಡು ಹೋಗುವಾಗ ರಾಜಿ ಸಂಧಾನ ಮಾಡಿ ಪ್ರಕರಣ ಇತ್ಯರ್ಥ ಮಾಡಿಸ್ತೇವೆ ಎಂದು ಕಾರು ಹತ್ತಿಸಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಹಲ್ಲೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆಯೇ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಸೋಲದೇವನಹಳ್ಳಿ ಪೊಲೀಸರು ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೇಮಂತ್, ಯಶವಂತ್, ಶಿವಶಂಕರ್, ಶಶಾಂಕ್ ಗೌಡ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಅಧಿಕಾರಿಗಳು ತೀವ್ರ ತನಿಖೆ ನಡೆಸ್ತಿದ್ದಾರೆ.

ಇದನ್ನೂ ಓದಿ: ಮಗಳು ಬರ್ಬೇಡ ಅಂತಾಳೆ, ಮಗ-ಸೊಸೆ ಹಿಂಸೆ ನೀಡ್ತಾರೆ; ಕೃಷ್ಣಾ ನದಿಗೆ ಹಾರಲು ಯತ್ನಿಸಿದ್ದ ವೃದ್ಧನ ಕಣ್ಣೀರ ಕತೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment