ಗಾಂಜಾ ಕೇಸ್​​ನಲ್ಲಿ ಕುದುರೆ ಅರೆಸ್ಟ್​.. ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ..

author-image
Ganesh
Updated On
ಗಾಂಜಾ ಕೇಸ್​​ನಲ್ಲಿ ಕುದುರೆ ಅರೆಸ್ಟ್​.. ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ..
Advertisment
  • ಆಂಧ್ರದ ಎನ್‌ಟಿಆರ್ ಜಿಲ್ಲೆಯಲ್ಲಿ ಪ್ರಕರಣ
  • ಪೊಲೀಸರು ಕುದುರೆಯನ್ನು ಬಂಧಿಸಿದ್ದು ಏಕೆ?
  • ತನಿಖೆಯಲ್ಲಿ ಪೊಲೀಸರಿಗೆ ಏನೆಲ್ಲ ವಿಚಾರ ತಿಳಿಯಿತು

ಆಂಧ್ರ ಪ್ರದೇಶದ ಎನ್‌ಟಿಆರ್ ಜಿಲ್ಲೆಯ ವತ್ಸವೈಯಲ್ಲಿ (Vatsavai) ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗಾಂಜಾ ಮಾರುತ್ತಿದ್ದ ಕುದುರೆಯನ್ನು ಪೊಲೀಸರು ಬಂಧಿಸಿದ್ದಾರೆ.

ಸದ್ಯ ಕುದುರೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ. ತಮಾಷೆ ಅಲ್ಲ, ಸತ್ಯ! ಕುದುರೆ ವಿಚಾರಣೆಯ ಜೊತೆಗೆ ಪ್ರತಿದಿನ ಅದಕ್ಕೆ ಮೇವು ಮತ್ತು ಹುಲ್ಲುನ್ನೂ ನೀಡುತ್ತಿದ್ದಾರೆ.

ಆಗಿದ್ದೇನು..?

ಜಗ್ಗಯ್ಯಪೇಟೆ ಕ್ಷೇತ್ರದ ವತ್ಸವೈಯಲ್ಲಿ ಕೆಲವರು ಗಾಂಜಾ ಸೇವಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ಆ ಸ್ಥಳಕ್ಕೆ ದಿಢೀರ್ ದಾಳಿ ಮಾಡಿದ್ದರು. ಈ ವಿಚಾರ ಗಾಂಜಾ ಪ್ರಿಯರಿಗೆ ಗೊತ್ತಾಗಿದ್ದು, ಆತುರದಲ್ಲಿ ಅಲ್ಲಿಂದ ಪರರಾಗಿ ಆಗಿದ್ದಾರೆ. ಆದರೆ ಅಲ್ಲಿದ್ದ ಕುದುರೆ ಪೊಲೀಸರ ಕಣ್ಣಿಗೆ ಬಿದ್ದಿದೆ.

ಈ ಕುದುರೆ ಗಾಂಜಾ ಸೇದುವವರೊಂದಿಗೆ ಸ್ನೇಹ ಬೆಳೆಸಿತ್ತು. ಪೊಲೀಸರು ಕುದುರೆಗೆ ಸಹಕರಿಸಿದ್ದಕ್ಕಾಗಿ ಅದನ್ನು ಠಾಣೆಗೆ ಕರೆದೊಯ್ದಿದ್ದಾರೆ. ಪ್ರಸ್ತುತ ವತ್ಸವೈ ಪೊಲೀಸ್ ಠಾಣೆಯಲ್ಲಿ ಕುದುರೆಯನ್ನು ಕಟ್ಟಿಹಾಕಲಾಗಿದೆ. ಕುದುರೆ ಮೂಲಕ ಗಾಂಜಾ ಮಾರಾಟ ಮಾಡಿದ್ದಾರೆ ಅನ್ನೋ ಅನುಮಾನ ಪೊಲೀಸರದ್ದು. ಕುದುರೆ ಮಾಲೀಕರು ಗಾಂಜಾ ಮಾರಾಟದಲ್ಲಿ ಭಾಗಿಯಾಗಿದ್ದಾರೆಯೇ? ಗಾಂಜಾ ಸಾಗಿಸಲು ಕುದುರೆಯನ್ನು ಬಳಸಲಾಗುತ್ತಿದೆಯೇ ಅನ್ನೋದ್ರ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಕಿರಿಯ ವಯಸ್ಸಿನಲ್ಲೇ ದೊಡ್ಡ ದಾಖಲೆ; 14 ವರ್ಷದ ವೈಭವ್ ಆಟದ ಬಗ್ಗೆ ಮೋದಿ ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment