ಪಹಲ್ಗಾಮ್​ ದಾಳಿಯಿಂದ ಬದುಕುಳಿದಿದ್ದೇ ಪವಾಡ.. 17 ಮಂದಿಯ ಜೀವ ಉಳಿಸಿದ ಕುದುರೆಗಳು..!

author-image
Ganesh
Updated On
ಪಹಲ್ಗಾಮ್​ ದಾಳಿಯಿಂದ ಬದುಕುಳಿದಿದ್ದೇ ಪವಾಡ.. 17 ಮಂದಿಯ ಜೀವ ಉಳಿಸಿದ ಕುದುರೆಗಳು..!
Advertisment
  • ಮಹಾರಾಷ್ಟ್ರದಿಂದ ಪಹಲ್ಗಾಮ್​ಗೆ ತೆರಳಿದ್ದ 17 ಮಂದಿ
  • ಗನ್​ ಸದ್ದು ಕೇಳಿ ಬೆಚ್ಚಿಬಿದ್ದಿತ್ತು ಮಹಾರಾಷ್ಟ್ರದ ಕುಟುಂಬ
  • ಘೋರ ದಾಳಿಯಿಂದ ಈ ಕುಟುಂಬ ಬಚಾವ್ ಆಗಿದ್ದೇಗೆ..?

ಪಹಲ್ಗಾಮ್​​ ದಾಳಿಯಿಂದ ಆಗಿರುವ ನೋವಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಪೈಶಾಚಿಕ ಕೃತ್ಯ ನಡೆಸಿರುವ ಭಯೋತ್ಪಾದಕರ ವಿರುದ್ಧ ಪ್ರತೀಕಾರ ಆಗಲೇಬೇಕು ಎಂಬ ಕೂಗು ಜೋರಾಗಿದೆ. ಇದರ ಮಧ್ಯೆ ಪಹಲ್ಗಾಮ್​ ದಾಳಿಗೆ ಸಂಬಂಧಿಸಿದ ಕೆಲವು ರಣ ಭಯಂಕರ ವಿಚಾರಗಳು ಹೊರಗೆ ಬರುತ್ತಿವೆ.

ಅದರಲ್ಲಿ ಈ ಕತೆಯೂ ಒಂದು. ಮಹಾರಾಷ್ಟ್ರದ ಕೊಲ್ಹಾಪುರದ ಸುರೇಂದ್ರ ದತ್ತಾತ್ರೇಯ ಸಪಾಳೆ ಎಂಬುವವರ ಕುಟುಂಬ ಪೆಹಲ್ಗಾಮ್​​ಗೆ ತೆರಳಿತ್ತು. ಸಪಾಳೆಗೆ ಸಂಬಂಧಿಸಿದ ಎರಡು ಕುಟುಂಬದ 17 ಮಂದಿ ಸದಸ್ಯರ ತಂಡ ಕಾಶ್ಮೀರ ಪ್ರವಾಸದಲ್ಲಿತ್ತು. ದಾಳಿ ನಡೆಯುವ ಹೊತ್ತಿಗೆ ಪಹಲ್ಗಾಮ್​​ನಲ್ಲಿ ಇವರ ಕುಟುಂಬವಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ಈ ಕುಟುಂಬ ದಾಳಿಯಾದ ಬೈಸರನ್ (Baisaran) ಹೋಗಬೇಕಿತ್ತು. ಅಂದ್ಹಾಗೆ ಇವರು ಬೈಸರನ್​​ನಿಂದ ಭಾರೀ ದೂರವಿರಲಿಲ್ಲ. ಕೇವಲ 1.5 ಕಿಲೋ ಮೀಟರ್ ದೂರದಲ್ಲಿದ್ದರಷ್ಟೇ.

ಇದನ್ನೂ ಓದಿ: ಭಾರತ ಅಟ್ಟಾರಿ ಗಡಿ ಬಂದ್ ಮಾಡಿದರೆ.. ಪಾಕ್​​ಗೆ ಎಷ್ಟು ಕೋಟಿ ನಷ್ಟ ಆಗಲಿದೆ, ಹೇಗೆಲ್ಲ ಪೆಟ್ಟು ಬೀಳುತ್ತೆ?

publive-image

ಜೀವ ಉಳಿಸಿದ್ದು ಯಾರು..?

ಮಿನಿ ಸ್ವಿಟ್ಜರ್​​ಲೆಂಡ್​ ಎಂದೇ ಬಿಂಬಿತಗೊಂಡಿರುವ ಪಹೆಲ್ಗಾಮ್​​​ನ ಬೈಸರನ್​ಗೆ ಹೋಗೋದು ಅಷ್ಟು ಸುಲಭವಿಲ್ಲ. ಅಲ್ಲಿಗೆ ಹೋಗಲು ವಾಹನಗಳ ವ್ಯವಸ್ಥೆ ಸರಿಯಾಗಿಲ್ಲ. ಬೈಕ್, ಆಟೋ, ಕಾರುಗಳ ಮೂಲಕ ಅಲ್ಲಿಗೆ ಸುಲಭವಾಗಿ ಹೋಗಲು ಸಾಧ್ಯವಿಲ್ಲ. ಬೆಟ್ಟ, ಗುಡ್ಡಗಳ ಹತ್ತಿ ಬರಬೇಕಾಗಿರೋದ್ರಿಂದ, ಕಡಿದಾದ ದಾರಿ ಇರೋದ್ರಿಂದ ಪ್ರವಾಸಿಗರು ಸಾಮಾನ್ಯವಾಗಿ ಕುದುರೆ ಸಾವರಿಯನ್ನೇ ನೆಚ್ಚಿಕೊಳ್ತಾರೆ. ಅಂತೆಯೇ ಇವರೂ ಕೂಡ ಬೈಸರನ್​ಗೆ ಹೋಗಲು ಕುದುರೆ ಸವಾರಿಗಾಗಿ ಕಾಯುತ್ತಿದ್ದರು. ಇವರ ದುರಾದೃಷ್ಟಕ್ಕೆ ಆ ಸಮಯಕ್ಕೆ ಕುದುರೆ ಸವಾರಿಗಳು ಸಿಗಲಿಲ್ಲ. ಅದಕ್ಕಾಗಿ ಕಾಯುತ್ತಿದ್ದರು. ಕುದುರೆ ಸವಾರಿ ವಿಳಂಬ ಆಗಿದ್ದರಿಂದ 17 ಮಂದಿ ಬದುಕುಳಿದಿದ್ದಾರೆ. ಜನಪ್ರಿಯ ಪ್ರವಾಸಿ ಕೇಂದ್ರ ಆಗಿರೋದ್ರಿಂದ ಕುದುರೆಗಳು ರೈಡಿಂಗ್​ಗೆ ಬೇಗ ಸಿಕ್ಕಿಬಿಡುತ್ತವೆ. ಆದರೆ, ಪವಾಡ ಎಂಬುವಂತೆ ಅದೇ ಸಮಯದಲ್ಲಿ ಈ ಕುಟುಂಬಕ್ಕೆ ಕುದುರೆಗಳು ರೈಡಿಂಗ್​ಗೆ ಸಿಗದೆ ಇರೋದು ಅದೃಷ್ಟವೇ ಸರಿ.

ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ವಿರುದ್ಧ BSF ಕೂಂಬಿಂಗ್ ತೀವ್ರ; ಓರ್ವ ಯೋಧ ಹುತಾತ್ಮ

publive-image

ಕುದುರೆಗಳಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಏನಾಯ್ತು ಅನ್ನೋದನ್ನು ಅವರೇ (ಸಪಾಳೆ) ವಿವರಿಸುವಂತೆ.. ನಮಗೆ ಇದ್ದಕ್ಕಿದ್ದಂತೆ ಬಂದೂಕಿನ ಸದ್ದು ಕೇಳಿದೆ. ಇದರಿಂದ ನಾವು ಗಾಬರಿಯಾದೆವು. ಎಲ್ಲಿ ಏನಾಗುತ್ತಿದೆ ಅನ್ನುವಷ್ಟರಲ್ಲಿ ಗುಂಡಿನ ಸದ್ದು ಜೋರಾಗಿತ್ತು. ಕೊನೆಗೆ ಅಸಲಿ ವಿಚಾರ ಗೊತ್ತಾಯ್ತು. ಬೈಸರನ್​​ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸ್ತಿದ್ದಾರೆ. ದೊಡ್ಡ ಅನಾಹುತಗಳೇ ನಡೆಯುತ್ತಿದೆ. ನೀವು ಆದಷ್ಟು ಬೇಗ ಸೈನಿಕರ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ಹೋಗಬೇಕು ಎಂಬ ಸೂಚನೆ ಸಿಕ್ಕಿತು. ಇದಿರಿಂದ ನಮ್ಮ ಕುಟುಂಬ ಆತಂಕ್ಕೆ ಒಳಗಾಯಿತು. ಕೊನೆಗೆ ನಾವು ಸುರಕ್ಷಿತ ಸ್ಥಳಕ್ಕೆ ಬಂದಿದೇವು. ನಮ್ಮ ಪ್ಲಾನ್ ಪ್ರಕಾರ, ಮೇ 1 ರಂದು ಕೊಲ್ಹಾಪುರಕ್ಕೆ ಬರಬೇಕಿತ್ತು ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ: ಉಗ್ರರ ನರಮೇಧ ಕಣ್ಣಾರೆ ಕಂಡ ಕನ್ನಡಿಗರು.. 178 ಮಂದಿ ಕಾಶ್ಮೀರದಿಂದ ವಾಪಸ್‌; ಏನಂದ್ರು? VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment