/newsfirstlive-kannada/media/post_attachments/wp-content/uploads/2025/04/timmarju.jpg)
ಚಿತ್ರದುರ್ಗ: ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಸೇರಿದ್ದ ಪುರಸಭೆ ಮುಖ್ಯಾಧಿಕಾರಿ ಸಾವನ್ನಪ್ಪಿರೋ ಘಟನೆ ಹೊಸದುರ್ಗದಲ್ಲಿ ನಡೆದಿದೆ. ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ಮೃತ ದುರ್ದೈವಿ.
ಮೃತ ತಿಮ್ಮರಾಜು ಕಳೆದ ಎರಡು ದಿನಗಳ ಹಿಂದೆ ಕಚೇರಿಯಲ್ಲೆ ಲಂಚ ಪಡೆದಿದ್ದ. ಲಂಚ ಪಡೆಯುವ ವೇಳೆ ಲೋಕಾ ಅಧಿಕಾರಿಗಳು ತಿಮ್ಮರಾಜು ರನ್ನ ಟ್ರಾಪ್ ಮಾಡಿದ್ದರು. ಇ- ಸ್ವತ್ತು ಮಾಡಿಕೊಡಲು 25 ಸಾವಿರ ಲಂಚ ಪಡೆದಿದ್ದ ಕಾರಣದಿಂದ ಜೈಲು ಸೇರಿದ್ದರು.
ಆದ್ರೆ ಜೈಲಲ್ಲಿದ್ದ ಅಧಿಕಾರಿ ಎದೆ ನೋವು ಅಂತ ಒದ್ದಾಡುತ್ತಿದ್ದನ್ನು ಕಂಡ ಪೊಲೀಸರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದ್ರೆ ಹೃದಯಾಘಾತದಿಂದ ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ಮೃತ ಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us