ಬೆಂಗಳೂರು-ಮೈಸೂರು ಎಕನಾಮಿಕ್​ ಕಾರಿಡಾರ್​​ನಿಂದ ಲಾಭವೋ ಲಾಭ.. ಈ ಏರಿಯಾದಲ್ಲಿ ಇನ್ವೆಸ್ಟ್​ ಮಾಡಬಹುದಾ?

author-image
Bheemappa
Updated On
ಬೆಂಗಳೂರು-ಮೈಸೂರು ಎಕನಾಮಿಕ್​ ಕಾರಿಡಾರ್​​ನಿಂದ ಲಾಭವೋ ಲಾಭ.. ಈ ಏರಿಯಾದಲ್ಲಿ ಇನ್ವೆಸ್ಟ್​ ಮಾಡಬಹುದಾ?
Advertisment
  • ಬೆಂಗಳೂರಲ್ಲಿ ಭೂಮಿ ಬೆಲೆ ಸಕ್ಕತ್​ ಕ್ಲಾಸ್ಟ್ಲಿ, ಇನ್ವೆಸ್ಟ್​ಮೆಂಟ್​ಗೆ ಹೇಗಿದೆ?
  • ಮಕ್ಕಳ ಎಜುಕೇಷನ್ ಹೇಗಪ್ಪ ಅಂತ ಯೋಚನೆ ನಿಮ್ಗೆ ಬೇಡವೇ ಬೇಡ
  • ಮನೆ, ಸೈಟ್​​, ಅಪಾರ್ಟ್ಮೆಂಟ್​ ಖರೀದಿ ಮಾಡಲು ಬೆಸ್ಟ್​ ಪ್ಲೇಸ್​ ಇಲ್ಲಿದೆ

ಬೆಂಗಳೂರು ಹೂಡಿಕೆದಾರರ ಸ್ವರ್ಗ, ಬೆಳೆಯುತ್ತಿರುವ ನಗರ, ಒಂದು ಕಾಲದಲ್ಲಿ ನಿವೃತ್ತಿದಾರರ ಸ್ವರ್ಗ ಅನಿಸಿಕೊಳ್ತಿದ್ದ ಸಿಲಿಕಾನ್ ಸಿಟಿ ಇವತ್ತು ಐಟಿ ಹಬ್ ಆಗಿ ಬೆಳೆದಿದೆ. ದಿನೇ ದಿನೇ ಹೆಚ್ಚಾಗ್ತಿರೋ ಜನಸಂಖ್ಯೆಯಿಂದಾಗಿ ಉದ್ಯಾನ ನಗರಿ ಬೆಂಗಳೂರು ಎಂದಿಗೂ ಹೂಡಿಕೆದಾರರ ಹಾಟ್​ಸ್ಪಾಟ್​. ಹಾಗಾಗಿ ಬೆಂಗಳೂರಲ್ಲಿ ಇನ್ವೆಸ್ಟ್​​ಮೆಂಟ್​​ಗೆ ಇರೋವಷ್ಟು ಅವಕಾಶ ಬೇರೆ ಯಾವ ಸಿಟಿಯಲ್ಲೂ ಇಲ್ಲಂತಲೇ ಹೇಳಬಹುದು. ನೀವೇನಾದ್ರೂ ಒಂದೊಳ್ಳೆ ಸೈಟ್ ಖರೀದಿ ಮಾಡ್ಬೇಕು, ಬೆಸ್ಟ್ ಅಪಾರ್ಟ್​​ಮೆಂಟ್​ ಪರ್ಚೇಸ್ ಮಾಡೋ ಪ್ಲ್ಯಾನ್ ಮಾಡ್ತಿದ್ರೆ ಮಾಹಿತಿ ಇಲ್ಲಿದೆ. ಅದ್ರಲ್ಲೂ ಮೈಸೂರು ರೋಡ್​ಗೆ ಹೊಂದಿಕೊಂಡೆ ಇರೋ ಹೊಸಕೆರೆಹಳ್ಳಿ ಇನ್ವೆಸ್ಟ್​ ಮಾಡೋಕೆ ದಿ ಬೆಸ್ಟ್ ಏರಿಯಾ.

ಬನಶಂಕರಿ, ಔಟರ್​ ರಿಂಗ್​ರೋಡ್​, ಮೈಸೂರು ರೋಡ್​ಗೆ ಹೊಂದಿಕೊಂಡಿರುವ ಹೊಸಕೆರೆಹಳ್ಳಿ, ದಕ್ಷಿಣ ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ಒಂದು. ಜೆಪಿ ನಗರ, ಜಯನಗರ, ರಾಜರಾಜೇಶ್ವರಿ ನಗರ, ಪದ್ಮನಾಭನಗರ, ಚಿಕ್ಕಲಸಂದ್ರ, ಗಟ್ಟಿಗೆರೆ ಮತ್ತು BEML ಲೇಔಟ್‌ನಂತಹ ಏರಿಯಾ ಹೊಸಕೆರೆಹಳ್ಳಿ ಸುತ್ತಮುತ್ತ ಇವೆ.

publive-image

M Square Heights, ಮಾರ್ಸ್ ಮೌಂಟ್, ಟಾಟಾ ದಿ ಪ್ರೋಮೋಂಟ್ ಮತ್ತು ಬ್ರೋಕೇಡ್ ವಿಸ್ಟಾದಂತಹ ಲಕ್ಸುರಿ ಹೌಸಿಂಗ್​ ಸ್ಕೀಮ್ಸ್​ ಕೂಡ ಹೊಸಕೆರೆಹಳ್ಳಿಯಲ್ಲಿದೆ. ಎಲೆಕ್ಟ್ರಾನಿಕ್ ಸಿಟಿ ಕನೆಕ್ಟ್ ​ಆಗಲು ನೈಸ್​ ರಸ್ತೆ ಕೂಡ ಹತ್ತಿರದಲ್ಲಿದೆ. ಇನ್ನೂ NH-44 ಕೂಡ ಸಮೀಪದಲ್ಲೇ ಇದ್ದು ಇದ್ರಿಂದ ಇಲ್ಲಿ ರಿಯಲ್ ಎಸ್ಟೇಟ್​ ಸಿಕ್ಕಾಪಟ್ಟೆ ಬೂಮ್ ಆಗ್ತಿದೆ.

ಇನ್ನೂ, ಹೊಸಕೆರೆಹಳ್ಳಿಯಲ್ಲಿ ಯಾಕ್ ಹೂಡಿಕೆ ಮಾಡಬೇಕು? ಮನೆ, ಸೈಟ್​​, ಅಪಾರ್ಟ್​ಮೆಂಟ್​ ಖರೀದಿ ಮಾಡಲು ಬೆಸ್ಟ್​ ಪ್ಲೇಸ್​ ಯಾಕೆ? ಈ ಏರಿಯಾದಲ್ಲಿ ಏನೆಲ್ಲಾ ಸೌಲಭ್ಯಗಳು ಇಲ್ಲಿವೆ? ಅನ್ನೋ ಕಂಪ್ಲೀಟ್​​ ಡೀಟೈಲ್ಸ್​ ಇಲ್ಲಿದೆ.

ಮೊದಲಿಗೆ ಹೊಸಕೆರೆಹಳ್ಳಿ ಸ್ಟ್ರೆಂಥ್ ಹೇಗಿದೆ?

ಹೊಸಕೆರೆಹಳ್ಳಿಯ ಪ್ರಮುಖ ಸ್ಟ್ರೆಂಥ್​ ಅಂದ್ರೆ ಕನೆಕ್ಟಿವಿಟಿ. ಹೊಸಕೆರೆಹಳ್ಳಿಗೆ ಸಿಟಿಯ ಇತರೆ ಭಾಗಗಳಿಂದ ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ಮೈಸೂರು ರಸ್ತೆ ಮೆಟ್ರೋ ನಿಲ್ದಾಣ 15 ನಿಮಿಷ ದೂರದಲ್ಲಿದ್ದು. ನಾಯಂಡಹಳ್ಳಿ ರೈಲು ನಿಲ್ದಾಣವು 4.3 ಕಿಮೀ ದೂರದಲ್ಲಿದ್ದು 10 ನಿಮಿಷಗಳಲ್ಲಿ ರೀಚ್​ ಆಗಬಹುದು. ಇನ್ನು ಔಟರ್​ ರಿಂಗ್​ ರೋಡ್​ ಇಲ್ಲಿನ ಬಿಗ್ಗೆಸ್ಟ್​ ಸ್ಟ್ರೆಂಥ್​ ಆಗಿದ್ದು ಹೊಸಕೆರೆಹಳ್ಳಿ ಪಕ್ಕದಲ್ಲೇ ಹಾದು ಹೋಗುತ್ತದೆ. ಹೊಸಕೆರೆಹಳ್ಳಿಯಿಂದ ಅಕ್ಕಪಕ್ಕದ ಎಲ್ಲಾ ಸ್ಥಳಗಳಿಗೆ ಪ್ರಯಾಣಿಸಲು ಬಿಎಂಟಿಸಿ ಬಸ್ಸುಗಳು ಸಹ ಲಭ್ಯವಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊಸಕೆರೆಹಳ್ಳಿಯಿಂದ ಸುಮಾರು 43 ಕಿಮೀ ದೂರದಲ್ಲಿದೆ, ಇದನ್ನು ಬಳ್ಳಾರಿ ರಸ್ತೆಯ ಮೂಲಕ ತಲುಪಬಹುದು. ಇನ್ನು ಬೆಂಗಳೂರು-ಮೈಸೂರು ಎಕಾನಾಮಿಕ್​ ಕಾರಿಡಾರ್​ನಿಂದ ಇಲ್ಲಿ ಭೂಮಿ ಬೆಲೆ ಗಗನಕ್ಕೇರುತ್ತಿದೆ. ಹತ್ತಿರದಲ್ಲೇ ನಂದಿ ನೈಸ್​ ಕಾರಿಡಾರ್​ ಇದ್ದು ತುಮಕೂರು ರಸ್ತೆ, ಎಲೆಕ್ಟ್ರಾನಿಕ್​ ಸಿಟಿಗೆ ಈಸೀ ಆಕ್ಸೆಸ್​ ಸಿಗುತ್ತೆ. ಪ್ರತಿಷ್ಠಿತ ಬಡಾವಣೆಗಳಾದ ಬನಶಂಕರಿ, ವಿಜಯನಗರ, ಜಯನಗರ ಬಡಾವಣೆಗಳಿಂದ ಸುತ್ತುವರೆದಿದೆ.

publive-image

ಹೊಸಕೆರೆಹಳ್ಳಿ ಬಡಾವಣೆಯ ವೀಕ್ನೆಸ್ ಹೇಗಿದೆ?

ಈ ಬಡಾವಣೆ ಈಗಾಗಲೇ ಡೆವಲಪ್​ ಆಗಿರುವ ಬಡಾವಣೆ ಅಗಿರೋದರಿಂದ ಹೊಸ ಪ್ರಾಪರ್ಟಿ ಖರೀದಿಗೂ ಅವಕಾಶ ಇದೆ. ಹೊಸಕೆರೆಹಳ್ಳಿ Residential Area ಆಗಿರೋದರಿಂದ ಪ್ರೀಮಿಯಂ & ಅಫೋರ್ಡಬಲ್ ಪ್ರಾಪರ್ಟಿಗಳು ಇಲ್ಲಿ ಸಿಗುತ್ತೆ. ಆದರೆ ಈ ಏರಿಯಾಗೆ ಈಗಾಗ್ಲೇ ಡಿಮಾಂಡ್​ ಹೆಚ್ಚಿರೋದರಿಂದ ಸೈಟ್​ ಬೆಲೆ ಗಗನಕ್ಕೇರಿದೆ. ಇದನ್ನ ಹೊರತುಪಡಿಸಿ ಹೊಸಕೆರೆಹಳ್ಳಿ ಫ್ಲೈ ಓವರ್​ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಟ್ರಾಫಿಕ್​ ಸಮಸ್ಯೆ ತಲೆಬಿಸಿ ತರಿಸುತ್ತೆ. ಗಾರ್ಬೆಜ್​ ಸಮಸ್ಯೆ ಕೂಡ ಇದ್ದು, ಇಲ್ಲಿ ರೋಡ್​ಗಳು ಸ್ವಲ್ಪ ಇಕ್ಕಟಾಗಿವೆ. ಹೀಗಾಗಿ ಕಾರಿದ್ದವರಿಗೆ ತುಸು ಪಾರ್ಕಿಂಗ್​ ಸಮಸ್ಯೆ ಕಾಡಬಹುದು. ಇನ್ನು ಕುಡಿಯುವ ನೀರು ಇಲ್ಲಿನ ಮತ್ತೊಂದು ಸಮಸ್ಯೆಯಾಗಿದ್ದು ಹೊಸಕೆರೆಹಳ್ಳಿ ಕೆರೆ ಮಲೀನ ಆಗಿರೋದರಿಂದ ಇಲ್ಲಿನ ಜನಕ್ಕೆ ಶುದ್ಧ ಕುಡಿಯುವ ನೀರು ಸಿಗ್ತಿಲ್ಲ.

ಹೂಡಿಕೆಗೆ ಏಕೆ ಬೆಸ್ಟ್​ ಪ್ಲೇಸ್​ ಎಂದು ನೋಡೋದಾದ್ರೆ!

ಹೊಸಕೆರೆಹಳ್ಳಿಯಿಂದ ಮೈಸೂರು ರಸ್ತೆಯ ಮೂಲಕ ಮಾನ್ಯತಾ ಟೆಕ್ ಪಾರ್ಕ್ ತಲುಪಲು ಸುಮಾರು 1.5 ಗಂಟೆಗಳ ಡ್ರೈವ್ ತೆಗೆದುಕೊಳ್ಳುತ್ತದೆ. ಐಟಿ ಹಬ್‌ಗಳಿಗೆ ಸುಲಭವಾದ ಸಂಪರ್ಕವು ಹೊಸಕೆರೆಹಳ್ಳಿಯನ್ನು ಐಟಿ ಉದ್ಯೋಗಿಗಳ ಆದ್ಯತೆಯ ಸ್ಥಳವನ್ನಾಗಿಸಿದೆ. ಉದಾಹರಣೆಗೆ, ಒಬ್ಬರು 45 ನಿಮಿಷಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ಐಟಿ ಹಬ್ ಅನ್ನು ತಲುಪಬಹುದು. ಜೊತೆಗೆ ಈಶ್ವರಿ ಇಂಗ್ಲಿಷ್ ಸ್ಕೂಲ್​, ನರಗುಂದ​​ ಕಾಲೇಜ್​​ ಆಫ್​ ಫಾರ್ಮಾ, ಶ್ರೀ ದತ್ತಾತ್ರೇಯ ಕಾಲೇಜ್​, ಕಿಡ್ಸೋ ಮಾಂಟೇಸ್ಸಾರಿ ಇತ್ಯಾದಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿದ್ದು ವೀಕೆಂಡ್​ ಚಿಲ್​ ಮಾಡೋದಕ್ಕೆ ಗೋಪಾಲನ್​ ಆರ್ಕೆಡ್​ ಮಾಲ್​, ಕೆಲಸಕ್ಕೆ ಗ್ಲೋಬಲ್​ ವಿಲೇಜ್​ ಟೆಕ್​ ಹಬ್​ ಇದೆ. ಇನ್ನು 1 BHK ಮನೆ 8-10 ಸಾವಿರ , 2 bhk 13 to 20 ಸಾವಿರಕ್ಕೆ ಲಭ್ಯವಿದೆ.

ಮನೆ, ಸೈಟ್​ ರೇಟ್​ ಹೇಗಿದೆ ಅಂತಾ ನೋಡೋದಾದ್ರೆ!

ಹೊಸಕೆರೆಹಳ್ಳಿ ಸ್ವಲ್ಪ ಕಾಸ್ಟ್ಲಿ ಏರಿಯಾ ಯಾಕಂದ್ರೆ, ನಿಮಗೆ ಒಂದು 3 BHK ಅಪಾರ್ಟ್​​ಮೆಂಟ್​ 48.8 ಲಕ್ಷದಿಂದ 3.20 ಕೋಟಿ ರೂವರೆಗೂ ಸಿಗುತ್ತೆ. ಇನ್ನೂ 2 BHK ಅಪಾರ್ಟ್​ಮೆಂಟ್ 27.9 ಲಕ್ಷದಿಂದ 2.09 ಕೋಟಿತನಕ ರೇಂಜ್ ಇದೆ. ರೆಂಟ್​ ನೋಡೋದಾದ್ರೆ, 3 BHK ಮನೆ 22 ಸಾವಿರದಿಂದ ಶುರುವಾದ್ರೆ, 2 BHK 12 ಸಾವಿರಕ್ಕೆಲ್ಲ ಸಿಗುತ್ತೆ. ಮನೆ ಬೇಡ ಸೈಟ್​ ಖರೀದಿ ಮಾಡ್ತೀನಿ ಅಂದ್ರೆ, ಒಂದು ಸ್ಕ್ವಾರ್ ಫೀಟ್​ಗೆ 600 ರೂಪಾಯಿಂದ 13,700 ರೂಪಾಯಿವರೆಗೂ ಇದೆ.

publive-image

ಇನ್ನೂ Health and Education

ಇಲ್ಲಿ ಮನೆ ಮಾಡಿದ್ರೆ ಮಕ್ಕಳ ಎಜುಕೇಷನ್ ಹೇಗಪ್ಪ ಅಂತ ಯೋಚನೆ ಬೇಡ. ನಿಮಗೆ ಹತ್ತಿರದಲ್ಲೇ ಈಶ್ವರಿ ಇಂಗ್ಲೀಷ್ ಸ್ಕೂಲ್ ಇದೆ. ನರಗುಂದ ಫಾರ್ಮಸಿ ಕಾಲೇಜ್​ ಕೂಡ ಇದೆ. ಕಿಡ್ಜೋ ಮಾಂಟೇಸರಿ ಬೆಸ್ಟ್ ಚಾಯ್ಸ್ ಅಂತಲೇ ಹೇಳಬಹುದು. ಹತ್ತಿರದಲ್ಲಿ ದೊಡ್ಡ ಆಸ್ಪತ್ರೆಗಳು ಯಾವುದು ಇಲ್ಲ. ಹೀಗಾಗಿ ಎಮರ್ಜೆನ್ಸಿ ಟೈಮ್​ನಲ್ಲಿ ರಿಸ್ಕ್​ ಆಗಬಹುದು.

ಇರೋ ಸಮಸ್ಯೆಗಳೇನು?

ಹೊಸಕೆರೆಹಳ್ಳಿ ಡೆವಲಪ್ ಆಗಿರೋ ಏರಿಯಾಗಿದ್ರೂ.. ಇನ್ನೂ ಚರಂಡಿ ಸಮಸ್ಯೆ ಹಾಗೇ ಉಳಿದಿದೆ.. ಗಾರ್ಬೆಜ್ ಸಮಸ್ಯೆ ಕೂಡ ಇದ್ದು ರೋಡ್​ಗಳು ಕೂಡ ಸಿಕ್ಕಾಪಟ್ಟೆ ಚಿಕ್ಕದಾಗಿವೆ. ಪಾರ್ಕಿಂಗ್ ಸಮಸ್ಯೆ ಇದೆ. ಕುಡಿಯೋ ನೀರಿಗೂ ಇಲ್ಲಿ ಸಮಸ್ಯೆ ಇದೆ. ಈ ಪ್ರಾಬ್ಲಂಗಳು ಓಕೆ ಅಂತಾದ್ರೆ ನೀವು ಹೊಸಕರೆಹಳ್ಳಿಯಲ್ಲಿ ಆರಾಮಾಗಿ ಇನ್ವೆಸ್ಟ್ ಮಾಡಬಹುದು.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment