ಹೊಸ ತೊಡಕು ಸಂಭ್ರಮ.. ಮಟನ್ ಅಂಗಡಿ ಮುಂದೆ ಜನವೋ ಜನ..!

author-image
Ganesh
Updated On
ಹೊಸ ತೊಡಕು ಸಂಭ್ರಮ.. ಮಟನ್ ಅಂಗಡಿ ಮುಂದೆ ಜನವೋ ಜನ..!
Advertisment
  • ಯುಗಾದಿ ಹಬ್ಬದ ಹೊಸ ತೊಡಕು ಸಡಗರ
  • ಕಷ್ಟಗಳು ಬಾರದಿರಲೆಂದು ಹಾರೈಸುವ ಶುಭದಿನ
  • ಬೆಂಗಳೂರಿನ ಪಾಪಣ್ಣ ಮಟನ್ ಸ್ಟಾಲ್​ನಲ್ಲಿ ಭಾರೀ ಜನ

ಬೆಂಗಳೂರು: ಯುಗಾದಿ ಹಬ್ಬದ ಹೊಸ ತೊಡಕು ಸಡಗರ ರಾಜ್ಯದಲ್ಲಿ ಜೋರಾಗಿದೆ. ಬೆಳ್ಳಂಬೆಳಗ್ಗೆಯೇ ಮಟನ್ ಅಂಗಡಿಗಳ ಮುಂದೆ ಮಾಂಸಪ್ರಿಯರು ಸಾಲುಗಟ್ಟಿ ನಿಂತಿದ್ದಾರೆ. ಮುಂಜಾನೆ 4 ಗಂಟೆಯಿಂದಲೇ ಕ್ಯೂನಲ್ಲಿ ನಿಂತು ಮಾಂಸ ಖರೀದಿ ಮಾಡುತ್ತಿದ್ದಾರೆ. ಯಾವುದೇ ಅಡ್ಡಿ-ಆತಂಕ, ಕಷ್ಟಗಳು ಬಾರದಿರಲೆಂದು ಹಾರೈಸುವ ಶುಭದಿನವೇ ಹೊಸ ತೊಡುಕು.

publive-image

ಈ ಬಾರಿಯ ಯುಗಾದಿ ಭಾನುವಾರ ಬಂದಿತ್ತು. ಮಾರನೇಯ ದಿನ ಸೋಮವಾರ ಬಂದ ಹಿನ್ನೆಲೆಯಲ್ಲಿ ಮಾಂಸಹಾರಿಗಳು, ಇಂದು ಹೊಸ ತೊಡಕು ಆಚರಣೆ ಮಾಡುತ್ತಿದ್ದಾರೆ. ಇನ್ನು ಮಾಂಸಾಹಾರಿಗಳ ಮನೆಯಲ್ಲಿ ಮಾಂಸದ ಅಡುಗೆ ಮಾಡಿದ್ರೆ, ಸಸ್ಯಹಾರಿಗಳ ಮನೆಯಲ್ಲಿ ಪಾಯಸ, ಸಿಹಿ ಅಡುಗೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಹಾಲು, ಮೊಸರು, ಕರೆಂಟು, ಕಾರು.. ಇಂದಿನಿಂದ ಯಾವುದೆಲ್ಲಾ ದುಬಾರಿ; ಓದಲೇಬೇಕಾದ ಸ್ಟೋರಿ!

publive-image

ಇನ್ನು ಬೆಂಗಳೂರಿನಲ್ಲೂ ಈ ಹಬ್ಬ ವಿಶೇಷವಾಗಿ ನಡೆಯುತ್ತದೆ. ಮಧ್ಯರಾತ್ರಿಯೇ ಕೆಲವು ಮಾಂಸದ ಅಂಗಡಿಗಳು ತೆರೆದಿವೆ. ಮೈಸೂರು ರಸ್ತೆಯ ಪಾಪಣ್ಣ ಮಟನ್ ಸ್ಟಾಲ್​ ತುಂಬಾನೇ ಫೇಮಸ್​. ಈ ಅಂಗಡಿಗೆ ಮಾಂಸ ಖರೀದಿಸಲು ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ.

publive-image

ಅದರಂತೆ ಬೆಂಗಳೂರಿನ ಬನಶಂಕರಿ, ಜೆಪಿ ನಗರ, ಉತ್ತರಹಳ್ಳಿ, ರಾಜಾಜಿನಗರ ಸೇರಿದಂತೆ ಹಲವು ಭಾಗಗಳಿಂದ ಜನರು ಬಂದಿದ್ದಾರೆ. ಇಂದು ನಿರೀಕ್ಷೆಗೂ ಮೀರಿ ಮಾಂಸ ಮಾರಾಟ ಹಿನ್ನೆಲೆಯಲ್ಲಿ, ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬೆಂಗಳೂರಿಗೆ ಕುರಿ, ಮೇಕೆಗಳನ್ನು ತರಿಸಿಕೊಳ್ಳಲಾಗಿದೆ. ಸದ್ಯ ಒಂದು ಕೆಜಿಯ ಮಟನ್​​ಗೆ 800/900 ರುಪಾಯಿ ಇದೆ.

ಇದನ್ನೂ ಓದಿ: ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ? ಮಾಧ್ಯಮಗಳ ಪ್ರಶ್ನೆಗೆ ಸುನೀತಾ ವಿಲಿಯಮ್ಸ್ ಹೇಳಿದ್ದೇನು?

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment