/newsfirstlive-kannada/media/post_attachments/wp-content/uploads/2025/02/HOSPETE-CHEATING-CASE.jpg)
ಬಹುಕೋಟಿ ವಂಚನೆ ಪ್ರಕರಣದಲ್ಲಿ ತಲೆ ತಪ್ಪಿಸಿಕೊಂಡು ಹೋಗಿದ್ದ ಆರೋಪಿಗಳನ್ನು ಹೊಸಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸಪೇಟೆಯಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದ ಪ್ರಮುಖ ಆರೋಪಿ ಮುಮ್ತಾಜ್ ಬೇಗಂ ಸೇರಿ ಮೂವರನ್ನು ಗೋವಾದಲ್ಲಿ ಅರೆಸ್ಟ್ ಮಾಡಲಾಗಿದೆ.
ಮುಮ್ತಾಜ್ ಬೇಗಂ, ಆರೀಫಾ ಬೇಗಂ, ಜಾವೇದ್ ಎನ್ನುವವರನ್ನು ಗೋವಾದಲ್ಲಿ ಬಂಧಿಸಲಾಗಿದೆ. ಪ್ರಮುಖ ಆರೋಪಿ ಮುಮ್ತಾಜ್ ಬೇಗಂ ಹಾಗೂ ಮಗಳು ಮತ್ತು ಅಳಿಯನನ್ನು ಬಂಧಿಸಲಾಗಿದೆ. 10 ದಿನಗಳ ಬಳಿಕ ಪ್ರಮುಖ ಆಓಪಿ ಬಂಧಿಸುವಲ್ಲಿ ಹೊಸಪೇಟೆ ಪಟ್ಟಣ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಘೋರ ದುರಂತ.. ಕಳಸಾರೋಹಣ ವೇಳೆ ಕ್ರೇನ್ ಬಕೆಟ್ ಕಳಚಿ ಬಿದ್ದು ದೊಡ್ಡ ಅನಾಹುತ
ಒಟ್ಟು 8 ಆರೋಪಿಗಳ ಪೈಕಿ ಈಗ ಐವರ ಬಂಧನವಾಗಿದೆ. ಇನ್ನುಳಿದ ಮೂವರು ಆರೋಪಿಗಳಿಗೆ ತಲಾಷ್ ನಡೆಸಿದ್ದಾರೆ ಪೊಲೀಸರು. ಹೊಸಪೇಟೆ ಡಿವೈಎಸ್ಪಿ ಮಂಜುನಾಥ್, ಲಖನ್ ಮಸಗುಪ್ಪಿ, ಗ್ರಾಮೀಣ ಠಾಣೆ ಸಿಸಿಐ ಗುರುರಾಜ ಕಟ್ಟಿಮನಿ ನೇತೃತ್ವದಲ್ಲಿ ಮೂರು ತಂಡ ರಚನೆ ಮಾಡಲಾಗಿತ್ತು. ಈ ತಂಡದಿಂದ ಮೂವರು ಆರೋಪಿಗಳನ್ನು ಯಶಸ್ವಿಯಾಗಿ ಮೂವರನ್ನು ಬಂಧಿಸಲಾಗಿದೆ. ಬಂಧನಕ್ಕೊಳಗಾದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಹೆಚ್ಚಿನ ತನಿಖೆಗಾಗಿ ಕೋರ್ಟ್ನಿಂದ ಅನುಮತಿ ಪಡೆದು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ವಿಜಯನಗರ ಎಸ್.ಪಿ. ಹರಿಬಾಬು ಬಿ.ಎಲ್. ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ