ಒಂದು ಲೋಟ ಬಿಸಿ ನೀರು ಕುಡಿಯೋದರಿಂದ ಈ ಕಾಯಿಲೆಗಳು ಮಾಯ; ನೀವು ಓದಲೇಬೇಕಾದ ಸ್ಟೋರಿ

author-image
Ganesh Nachikethu
Updated On
ಒಂದು ಲೋಟ ಬಿಸಿ ನೀರು ಕುಡಿಯೋದರಿಂದ ಈ ಕಾಯಿಲೆಗಳು ಮಾಯ; ನೀವು ಓದಲೇಬೇಕಾದ ಸ್ಟೋರಿ
Advertisment
  • ಆಹಾರ ಜೀರ್ಣವಾಗಬೇಕು ಅಂದರೆ ಬಿಸಿ ನೀರು ಕುಡಿಯಬೇಕಾ?
  • ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ
  • ಹಾಟ್​ ವಾಟರ್​ ಕುಡಿಯುವುದರಿಂದ ದೇಹಕ್ಕೆ ಆಗೋ ಲಾಭವೇನು?

ಈಗಿನ ಜನ ಗಂಟೆಗಟ್ಟಲೇ ಕುಳಿತಲ್ಲೇ ಕುಳಿತು ಕೆಲಸ ಮಾಡುವುದರಿಂದ ತಿಂದಿರುವ ಆಹಾರ ಹೊಟ್ಟೆಯಲ್ಲಿ ಕರಗುವುದು ತುಂಬಾ ಕಡಿಮೆ. ಇದು ನೇರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕು ಎಂದರೆ ಒಂದು ಕಪ್​ ಬಿಸಿ ನೀರು ಸಾಕು. ಬಿಸಿ ನೀರು ಜೀರ್ಣಕಾರಿ ಸಮಸ್ಯೆಗಳನ್ನ ನಿವಾರಿಸುತ್ತದೆ. ನಿತ್ಯ ಬಿಸಿ ನೀರು ಕುಡಿದರೆ ಯಾವುದೇ ಆಹಾರ ಬೇಗ ಜೀರ್ಣವಾಗುತ್ತದೆ.

ದೇಹ ಫಿಟ್ ಮತ್ತು ಆರೋಗ್ಯಕರ ಇರಲು ಬಿಸಿನೀರು ಪ್ರಮುಖ ಪಾತ್ರ ವಹಿಸುತ್ತದೆ. ಬೆಚ್ಚಗಿನ ನೀರನ್ನು ಕುಡಿಯುವುದು ತೂಕವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದು ದೇಹದ ಚಯಾಪಚಯವನ್ನು ಸುಧಾರಿಸಲು ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹಕ್ಕೆ ಒಳ್ಳೆಯದೆ ಆಗಲಿದೆ.

publive-image

ಶೀತ ಅಥವಾ ನೆಗಡಿ ಆಗಿದ್ದರೆ ಬಿಸಿನೀರಿನ ಉಗಿಯಲ್ಲಿ ಮುಖವನ್ನಿಟ್ಟು ಉಸಿರಾಡುವುದರಿಂದ ಮೂಗಿನಲ್ಲಿನ ಸಮಸ್ಯೆ ದೂರವಾಗುತ್ತದೆ. ಶೀತಗಳು, ಸೀನುವುದು ಮತ್ತು ಅಲರ್ಜಿಯಂತ ಲಕ್ಷಣಗಳು ಮಾಯಾವಾಗುತ್ತಾವೆ. ಬಿಸಿನೀರು ಬೆವರುವಿಕೆಯನ್ನು ಹೆಚ್ಚಿಸುವ ಮೂಲಕ ಮತ್ತು ಮೂತ್ರ ವಿಸರ್ಜನೆಯನ್ನು ಉತ್ತೇಜಿಸುವ ಮೂಲಕ ದೇಹದಿಂದ ಕೆಟ್ಟ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ.

ಬಿಸಿನೀರನ್ನು ಕುಡಿಯುವುದರಿಂದ ಕರುಳಿನ ಚಲನೆಗೆ ಸಹಾಯವಾಗಿ ಹೊಟ್ಟೆಯ ಒಳಗೆ ಮಲ ಮತ್ತು ಮೂತ್ರ ವಿಸರ್ಜನೆ ಸರಾಗವಾಗಿ ಹೊರ ಬರಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯನ್ನು ನಿವಾರಿಸಲು ಮತ್ತು ಕ್ರಮಬದ್ಧತೆಯನ್ನು ಉತ್ತೇಜಿಸಲು ಬಿಸಿನೀರು ಕುಡಿಯುವುದು ಒಳ್ಳೆಯದು.

publive-image

ಬಿಸಿನೀರನ್ನು ಕುಡಿಯುವುದರಿಂದ ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ದೇಹದ ವಿವಿಧ ಭಾಗಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ಸರಿಯಾಗಿ ಸಾಗುತ್ತದೆ. ಸ್ನಾಯುಗಳ ಒತ್ತಡ ಮತ್ತು ಸ್ನಾಯುಗಳ ಸಡಿಲಿಕೆಯನ್ನು ಬಿಸಿನೀರು ನಿವಾರಿಸುತ್ತದೆ. ಸ್ನಾಯುಗಳು, ಸಂಧಿವಾತ ನೋವು ಮತ್ತು ಮಹಿಳೆಯರಲ್ಲಿ ಮುಟ್ಟಿನಂತವಕ್ಕೆ ಬಿಸಿನೀರು ಪರಿಹಾರ ನೀಡುತ್ತದೆ.

ಮನುಷ್ಯ ಬಿಸಿನೀರನ್ನು ಕುಡಿಯುವುದರಿಂದ ದೇಹದ ಚಯಾಪಚಯ ಸರಿಯಾಗಿ ನಡೆಯುತ್ತೆ. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮದೊಂದಿಗೆ ಸಂಯೋಜಿಸಿದಾಗ ತೂಕ ನಷ್ಟ ಪ್ರಯತ್ನಗಳಲ್ಲಿ ಹಾಟ್ ವಾಟರ್ ಮುಖ್ಯ ಪಾತ್ರ ವಹಿಸುತ್ತದೆ.

ಇದನ್ನೂ ಓದಿ:ಚಾಂಪಿಯನ್ಸ್​ ಟ್ರೋಫಿ ಬೆನ್ನಲ್ಲೇ KL ರಾಹುಲ್​ಗೆ ಬಿಗ್​ ಶಾಕ್​​; ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment