newsfirstkannada.com

VIDEO: ಹೋಟೆಲ್​ ಬ್ಲಾಸ್ಟ್​​ ವಿಡಿಯೋ ನ್ಯೂಸ್​ಫಸ್ಟ್​ಗೆ ಲಭ್ಯ; ಮಾಸ್ಟರ್​ ಮೈಂಡ್​ ಯಾರು? ಆಗಿದ್ದೇನು?

Share :

Published March 1, 2024 at 6:50pm

Update March 1, 2024 at 6:51pm

  ಪ್ರಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಭಾರೀ ಪ್ರಮಾಣದ ನಿಗೂಢ ಸ್ಫೋಟ

  ಮಧ್ಯಾಹ್ನ 1 ಗಂಟೆ ಸುಮಾರಿಗೆ ಭಾರೀ ಜನರಿದ್ದ ಸಂದರ್ಭದಲ್ಲೇ ಬ್ಲಾಸ್ಟ್​​!

  ಬ್ಲಾಸ್ಟ್​ಗೆ ಬೆಚ್ಚಿಬಿದ್ದ ಸಿಲಿಕಾನ್​ ಸಿಟಿ ಬೆಂಗಳೂರು, ಪೊಲೀಸರಿಂದ ತನಿಖೆ

ಬೆಂಗಳೂರು: ಸಿಲಿಕಾನ್​ ಸಿಟಿ ಐಟಿಪಿಎಲ್‌ ಮುಖ್ಯ ರಸ್ತೆಯ ಕುಂದಲಹಳ್ಳಿಯಲ್ಲಿರೋ ಪ್ರಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಭಾರೀ ಪ್ರಮಾಣದ ನಿಗೂಢ ಸ್ಫೋಟ ಸಂಭವಿಸಿದೆ. ವೈಟ್‌ ಫೀಲ್ಡ್‌ ಬಳಿ ಇರೋ ಈ ಹೋಟಲ್‌ನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಭಾರೀ ಜನರಿದ್ದ ಸಂದರ್ಭದಲ್ಲೇ ಈ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ.

ಇನ್ನು, ಬ್ಲಾಸ್ಟ್​ ಆದ ವಿಡಿಯೋ ಕ್ಯಾಮೆರಾದಲ್ಲಿ ರೆಕಾರ್ಡ್​ ಆಗಿದೆ. ವಿಡಿಯೋ ನೋಡಿದ್ರೆ ಮೈ ಜುಮ್​ ಎನ್ನಿಸುತ್ತದೆ. ಅಷ್ಟೇ ಅಲ್ಲ ಬ್ಲಾಸ್ಟ್​ ಆದ ಕೂಡಲೇ ಪ್ರಾಣ ಉಳಿಸಿಕೊಳ್ಳಲು ಜನ ಓಡಿ ಹೋಗಿದ್ದಾರೆ. ಹೋಟೆಲ್​​ನಲ್ಲಿದ್ದ ಗ್ರಾಹಕರು, ಸಿಬ್ಬಂದಿ ಕೂಡ ಚೆಲ್ಲಾಪಿಲ್ಲಿಯಾಗಿದ್ದಾರೆ.

ಹೋಟೆಲ್​​ ಹೊರಗಡೆ ಬ್ಲಾಸ್ಟ್​ ಆದ ಕಾರಣ ಸಣ್ಣಪುಟ್ಟ ಗಾಯಗಳಾಗಿವೆ. ಬ್ಲಾಸ್ಟ್​ ಆಗಿದ್ದು ನೋಡಿ ಮಹಿಳೆ ಒಬ್ಬರು ಆಯತಪ್ಪಿ ಬಿದ್ದಿದ್ದಾರೆ. ಇನ್ನೂ ಹಲವರು ಓಡಿ ಹೋಗಿದ್ದಾರೆ. ಸದ್ಯ ಪೊಲೀಸ್ರು ತನಿಖೆ ಶುರು ಮಾಡಿದ್ದಾರೆ. ಸಂಜೆ 7.30ಕ್ಕೆ ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್​​ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಯಾರೋ ಕಿಡಿಗೇಡಿ ಭಾರೀ ಪ್ರಮಾಣದ ಸ್ಫೋಟ ಇರೋ ಬ್ಯಾಗ್​ ತಂದಿಟ್ಟು ಹೋಗಿದ್ದ ವಿಡಿಯೋ ಲಭ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹೋಟೆಲ್​ ಬ್ಲಾಸ್ಟ್​​ ವಿಡಿಯೋ ನ್ಯೂಸ್​ಫಸ್ಟ್​ಗೆ ಲಭ್ಯ; ಮಾಸ್ಟರ್​ ಮೈಂಡ್​ ಯಾರು? ಆಗಿದ್ದೇನು?

https://newsfirstlive.com/wp-content/uploads/2024/03/Blast-Video.jpg

Load More