ಐದು ಜಿಲ್ಲೆಯ ಪೊಲೀಸರಿಂದ ಹೊಟ್ಟೆ ಮಂಜುಗಾಗಿ ತೀವ್ರ ತಲಾಶ್
ಮಂಜು ಬೈಕ್ ಟ್ರಾಕ್ ಮಾಡ್ತಿದ್ದ ಬೆಂಗಳೂರು ಟಿಎಂಸಿ ಅಧಿಕಾರಿಗಳು
ಮನೆಯೊಂದರಲ್ಲಿ ಕಳ್ಳತನ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದ ಮಂಜು
ಬೆಂಗಳೂರು: ಬರೋಬ್ಬರಿ 40 ಕೇಸ್ಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಹೊಟ್ಟೆ ಮಂಜು ಕೊನೆಗೂ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಈತನ ಬಂಧನದ ಬಗ್ಗೆ ತಲೆಕೆಡಿಸಿಕೊಂಡಿದ್ದ ಜಿಲ್ಲೆಯ ಬಹುತೇಕ ಪೊಲೀಸರು ಕೊನೆಗೂ ಬೆಂಗಳೂರಿನ ಸದಾಶಿವನಗರ ಟ್ರಾಫಿಕ್ ಜಂಕ್ಷನ್ ಬಳಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ‘13 ವರ್ಷದ ಹಿಂದೆಯೇ ಸತ್ತ ನನ್ನ ಗಂಡನಿಂದ ಗರ್ಭಿಣಿಯಾದೆ’- ಮಹಿಳೆ ಶಾಕಿಂಗ್ ಹೇಳಿಕೆ
ಮಂಜೇಶ್ ಅಲಿಯಾಸ್ ಹೊಟ್ಟೆ ಮಂಜು ಬಂಧಿತ ಆರೋಪಿ. ಈ ಹೊಟ್ಟೆ ಮಂಜುನನ್ನು ಸಿನಿಮೀಯ ರೀತಿಯಲ್ಲಿ ಬೈಕ್ ಅಡ್ಡಗಟ್ಟಿದ ಪೊಲೀಸರು ಲಾಕ್ ಮಾಡಿದ್ದಾರೆ. ಆರೋಪಿ ಮಂಜು ಚಿನ್ನಾಭರಣ ಧರಿಸಿರುವ ವೃದ್ಧೆಯರನ್ನೆ ಟಾರ್ಗೆಟ್ ಮಾಡ್ತಿದ್ದ. ಪಿಂಚಣಿ, ವೃದ್ದಾಪ್ಯಾವೇತನ, ಪೋಸ್ಟ್ಆಫೀಸ್ಗಳಲ್ಲಿ ಹಣ ಬರೋ ಹಾಗೆ ಮಾಡ್ತೀನಿ ಅಂತ ನಂಬಿಸ್ತಿದ್ದ. ಸರಿ ಆಯ್ತು ಅಂತ ಇವನ ಬೈಕ್ಗೆ ಹತ್ತಿದ್ರೆ ಕಥೆ ಮುಗೀತು. ಮಾರ್ಗ ಮಧ್ಯೆದಲ್ಲಿ ಬೈಕ್ ನಿಲ್ಲಿಸಿ ಒಂದು ಮಸಲತ್ತು ಮಾಡ್ತಿದ್ದ. ಚಿನ್ನಾಭರಣವನ್ನ ಬಿಚ್ಚಿ ನನ್ನ ಕೈಯಲ್ಲಿ ಕೊಡಿ ಎಂದು ನಂಬಿಸ್ತಿದ್ದ. ಕೈಗೆ ಚಿನ್ನಾಭರಣ ಸಿಕ್ಕಿದ್ದೆ ತಡ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗ್ತಿದ್ದ. ಈ ಸಂಬಂಧ ಕೊರಟಗೆರೆ, ಮಧುಗಿರಿ, ಹೆಬ್ಬೂರು, ಕೋಳಾಲ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಬಳ್ಳಾಪುರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೊಬ್ಬರಿ 40 ಕೇಸ್ಗಳು ಈತನ ಮೇಲಿವೆ.
ಈತನ ಖತರ್ನಾಕ್ ಪ್ಲಾನ್ ತಿಳಿದ ಪೊಲೀಸರು, ಕಳ್ಳ ಮಂಜು ಹಿಂದೆ ಬೆನ್ನಬಿದ್ದಿದ್ದರು. ಒಂದೂವರೆ ತಿಂಗಳಿಂದ ಹುಡುಕಾಡಿ ಹೈರಾಣಾಗಿದ್ರು. ಮೊನ್ನೆ ಮೊನ್ನೆ ಕೊರಟಗೆರೆ ಮನೆಯೊಂದಕ್ಕೆ ಕನ್ನ ಹಾಕಿದ್ದ ಈ ಕಳ್ಳ ಮಂಜು ಬೆಂಗಳೂರಿಗೆ ಬಂದಿದ್ದ. ಇದು ಕೊರಟಗೆರೆ ಪೊಲೀಸರಿಗೆ ಗೊತ್ತಾಗಿತ್ತು ಅಷ್ಟೇ. ಕೊರಟಗೆರೆ ಠಾಣೆ ಕ್ರೈಂ ಸಿಬ್ಬಂದಿ ದೊಡ್ಡಲಿಂಗಯ್ಯ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ಸಿಗ್ನಲ್ ಬಳಿ ಪ್ರಾಣ ಪಣಕ್ಕಿಟ್ಟು ಖದೀಮನನ್ನು ರೋಚಕವಾಗಿ ಲಾಕ್ ಮಾಡಿದ್ದಾರೆ.
ಇದನ್ನೂ ಓದಿ: ‘ನಾನು ಸೋತಿದ್ದೇನೆ, ಆದರೆ..’ ನೋವಿನಲ್ಲೇ ಕುಸ್ತಿಗೆ ವಿದಾಯ.. ಫೋಗಟ್ ಭಾವುಕ ಪೋಸ್ಟ್ನಲ್ಲಿ ಏನಿದೆ..?
ಮೊಬೈಲ್ ಟವರ್ ಲೋಕೇಷನ್ ಆಧರಿಸಿ ಬೇಟೆಗೆ ಇಳಿದಿದ್ದ ದೊಡ್ಡಲಿಂಗಯ್ಯ, ಮತ್ತಿಕೆರೆ ಕಡೆಯಿಂದ ಸದಾಶಿವನಗರ ಠಾಣೆ ಸಿಗ್ನಲ್ ಕಡೆ ಬರ್ತಿದ್ದ ಬಿಳಿ ಬಣ್ಣದ ಆಕ್ಟಿವ್ ಹೊಂಡಾ ತಡೆದಿದ್ರು. ತಪ್ಪಿಸಿಕೊಳ್ಳಲು ಯತ್ನಿಸಿದ ಮಂಜು ಕಾಲನ್ನ ಗಟ್ಟಿಯಾಗಿ ಹಿಡಿದು ನೆಲಕ್ಕೆ ಬೀಳಿಸಿದ್ರು. ಆ ಬಳಿಕ ಪೊಲೀಸರು ಮತ್ತು ಸಾರ್ವಜನಿಕರು ಹಿಡಿದು ಧರ್ಮದೇಟು ಕೊಟ್ಟಿದ್ರು. ಒಟ್ಟಿನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳನನ್ನ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸೆರೆಹಿಡಿದ ಕಾನ್ಸ್ಟೇಬಲ್ ದೊಡ್ಡಲಿಂಗಯ್ಯನ ಕರ್ತವ್ಯಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ