newsfirstkannada.com

ರಾತ್ರಿ ಮಲಗಿದ್ದ ವೇಳೆ ಭಾರೀ ದುರಂತ.. ಅಂಬಲಪಾಡಿ ಶೆಟ್ಟಿ ಬಾರ್ ಮಾಲೀಕ ಸಾವು

Share :

Published July 15, 2024 at 11:21am

    ಹೆಂಡತಿ, ಮಕ್ಕಳನ್ನು ಕಾಪಾಡಿ ಆಸ್ಪತ್ರೆಗೆ ದಾಖಲು ಮಾಡಿದ ಸ್ಥಳೀಯರು

    ತಡರಾತ್ರಿಯಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸುಟ್ಟು ಕರಕಲಾದ ಮನೆ

    ಅಂಬಲಪಾಡಿಯಲ್ಲಿ ನಡೆದ ಭಯಾನಕ ಅಗ್ನಿ ಅವಘಡದಲ್ಲಿ ವ್ಯಕ್ತಿ ಸಾವು

ಉಡುಪಿ: ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಬಾರ್ ಮಾಲೀಕರೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಂಬಲಪಾಡಿಯಲ್ಲಿ ನಡೆದಿದೆ.

ಇದನ್ನೂ ಓದಿ: ಅಧಿವೇಶನದಲ್ಲಿ ಕಾಡಲಿದೆ 4 ಮಾಜಿ ಸಿಎಂಗಳ ಅನುಪಸ್ಥಿತಿ.. BSY, HDK ಸ್ಥಾನ ತುಂಬುತ್ತಾರಾ ಅಶೋಕ್, ವಿಜಯೇಂದ್ರ?

ಅಂಬಲಪಾಡಿಯ ಶೆಟ್ಟಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ್ ಶೆಟ್ಟಿ ಮೃತಪಟ್ಟಿದ್ದಾರೆ. ನಿನ್ನೆ ತಡರಾತ್ರಿ ರಮಾನಂದ್ ಶೆಟ್ಟಿ ಅವರ ಮನೆಗೆ ಬೆಂಕಿ ಹೊತ್ತಿಕೊಂಡು ಧಗ ಧಗ ಹೊತ್ತಿ ಉರಿದಿದೆ. ಈ ವೇಳೆ ಮನೆ ಒಳಗೆ ಮಲಗಿದ್ದ ಕುಟುಂಬ ಸದಸ್ಯರ ಪೈಕಿ ಅಗ್ನಿ ಅವಘಡದಲ್ಲಿ ಬಾರ್ ಮಾಲೀಕ ಗಂಭೀರವಾಗಿ ಗಾಯಗೊಂಡಿದ್ದರು. ಆದರೂ ರಕ್ಷಣೆ ಮಾಡಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇವರ ಪತ್ನಿ ಶಾಲಿನಿ ಹಾಗೂ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು ಇವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ಮಳೆ ನೀರಲ್ಲಿ ನಿಂತ ಇಡೀ ಗ್ರಾಮ.. ಭಾರತೀಯ ಕದಂಬ ನೌಕಾನೆಲೆ ಇದಕ್ಕೆ ಕಾರಣವಾಯ್ತಾ?

ಇನ್ನು ಬೆಂಕಿಯಿಂದ ಮನೆಯೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಒಳಗಿದ್ದ ವಸ್ತುಗಳೆಲ್ಲ ನಾಶವಾಗಿವೆ. ಮನೆಗೆ ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂಬುದು ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಈ ಅಗ್ನಿ ಅವಘಡಕ್ಕೆ ಶಾರ್ಟ್​ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಶಂಕಿಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾತ್ರಿ ಮಲಗಿದ್ದ ವೇಳೆ ಭಾರೀ ದುರಂತ.. ಅಂಬಲಪಾಡಿ ಶೆಟ್ಟಿ ಬಾರ್ ಮಾಲೀಕ ಸಾವು

https://newsfirstlive.com/wp-content/uploads/2024/07/UDP_MAN_DEAD.jpg

Load More