ಬೆಂಗಳೂರಲ್ಲಿ ಅಮ್ಮನಿಗಾಗಿ ಮಿಡಿದ ಮಕ್ಕಳು.. ಡೆಮಾಲಿಷ್​​ ಮಾಡದೆ ಮನೆಯನ್ನೇ ಬೇರೆ ಕಡೆ ಶಿಫ್ಟ್​ ಮಾಡಿದರು..

author-image
Gopal Kulkarni
Updated On
ಬೆಂಗಳೂರಲ್ಲಿ ಅಮ್ಮನಿಗಾಗಿ ಮಿಡಿದ ಮಕ್ಕಳು.. ಡೆಮಾಲಿಷ್​​ ಮಾಡದೆ ಮನೆಯನ್ನೇ ಬೇರೆ ಕಡೆ ಶಿಫ್ಟ್​ ಮಾಡಿದರು..
Advertisment
  • ಮಳೆಗಾಲ ಬಂದರೆ ಸಾಕು ಜಲಾವೃತವಾಗುತ್ತಿತ್ತು ಈ ಮನೆ
  • ಮನೆಯನ್ನು ಡೆಮಾಲಿಷ್ ಮಾಡಲು ಮುಂದಾಗಿದ್ದ ಮಕ್ಕಳು
  • ತಾಯಿ ಬೇಸರದಿಂದ 100 ಅಡಿ ಹಿಂದಕ್ಕೆ ಶಿಫ್ಟಿಂಗ್​​ಗೆ ಮುಂದು

ಮನೆ, ಜಮೀನು ಸ್ವಂತ ಊರು ಇವೆಲ್ಲವೂ ಮನುಷ್ಯನೊಂದಿಗೆ ಭಾವನಾತ್ಮಕವಾಗಿ ಅಂಟಿಕೊಂಡಿರುವ ನಂಟುಗಳು. ಅವುಗಳನ್ನು ಅಷ್ಟು ಸರಳವಾಗಿ ಬಿಟ್ಟುಕೊಡಲು ಆಗುವುದಿಲ್ಲ. ತಾಯಿಯ ಈ ಒಂದು ಭಾವನತ್ಮಕ ನಂಟನ್ನು ಗೌರವಿಸಿದ ಮಕ್ಕಳು ನೂರು ಅಡಿಯಷ್ಟು ಮನೆಯನ್ನು ಶಿಫ್ಟಿಂಗ್ ಮಾಡಲು ಮುಂದಾಗಿದ್ದಾರೆ. ಮಹಾದೇವಪುರ ವಿಧಾನಸಭಾ ಕ್ಷೇತ್ರದ ಬಿಇಎಂಎಲ್ ಲೇಔಟ್ ನಲ್ಲಿರುವ ಮನೆಯನ್ನ 100 ಅಡಿಯಷ್ಟು ಹಿಂದಕ್ಕೆ ಶಿಫ್ಟ್ ಮಾಡಲು ಸಿದ್ಧತೆ ನಡೆಯತ್ತಿದೆ.

ಇದನ್ನೂ ಓದಿ:ವಿಬ್​ಗಯಾರ್ ಸ್ಕೂಲ್ ವಿರುದ್ಧ ಹೈಟೆಕ್​ ಬಡ್ಡಿ ದಂಧೆ ಆರೋಪ; ಫೀಸ್ ಕಟ್ಟದಿದ್ರೆ ಶೇ. 3ರಷ್ಟು ಬಡ್ಡಿ..?

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಎರಡು ಅಂತಸ್ತಿನ ಮನೆಯನ್ನು ಶಿಫ್ಟಿಂಗ್​ ಮಾಡಲಾಗ್ತಿದೆ.ಬೇರೆ ಬೇರೆ ರಾಜ್ಯದಲ್ಲಿ ಮನೆಗಳನ್ನು ಹೀಗೆ ಶಿಫ್ಟ್ ಮಾಡಿದ ಉದಾಹರಣೆಗಳು ಇವೆ. ಈಗ ಬೆಂಗಳೂರಿನಲ್ಲಿ ಶ್ರೀರಾಮ್​ ಹೌಸ್ ಲಿಫ್ಟಿಂಗ್​ ಆ್ಯಂಡ್​ ಶಿಫ್ಟಿಂಗ್ ಕಂಪನಿಯಿಂದ ಈ ಕಾರ್ಯ ನಡೆಯುತ್ತಿದೆ. ಬಿಇಎಂಎಲ್​ ಲೇಔಟ್​​ನಲ್ಲಿ ನಿರ್ಮಾಣವಾಗಿರುವ ಮನೆಯನ್ನು ಹಿಂದೆ ನೂರು ಅಡಿ ಜಾಗವಿದ್ದ ಕಾರಣ ಮನೆಯನ್ನು ಹಿಂದಕ್ಕೆ ಶಿಫ್ಟ್ ಮಾಡಲಾಗುತ್ತಿದೆ

ಒಟ್ಟು 13 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮನೆಯನ್ನು ನಿರ್ಮಾಣ ಮಾಡಲಾಗಿತ್ತು. ಇಂದು ಈ ಮನೆಯನ್ನು ನಿರ್ಮಾಣ ಮಾಡಬೇಕು ಅಂದ್ರೆ 70 ಲಕ್ಷ ರೂಪಾಯಿ ಬೇಕಾಗುತ್ತದೆ. ಸದ್ಯ ಮನೆಯನ್ನು 15 ಅಡಿ ಹಿಂದಕ್ಕೆ ಶಿಫ್ಟ್ ಮಾಡಲಾಗಿದ್ದು. ಇನ್ನೂ 85 ಅಡಿ ಹಿಂದಕ್ಕೆ ಶಿಫ್ಟ್​ ಆಗಲಿದೆ. 30 ದಿನಗಳಲ್ಲಿ ಈ ಒಂದು ಕಾರ್ಯ ಮುಗಿಯಲಿದೆ ಎಂದು ಹೇಳಲಾಗುತ್ತಿದೆ.

publive-image

ಈ ಮನೆಯನ್ನು ಶಿಫ್ಟ್​ ಮಾಡಲು ಸುಮಾರು 200 ಕಬ್ಬಿಣದ ಜಾಕ್ ಮತ್ತು 100 ಕಬ್ಬಿಣದ ರೋಲರ್​​ಗಳನ್ನು ಬಳಕೆ ಮಾಡಲಾಗಿದೆ. ಈ ಮನೆ ಮಳೆಗಾಲ ಬಂದರೆ ಸಾಕು ಜಲಾವೃತವಾಗುತ್ತಿತ್ತು. ಎರಡರಿಂದ ಮೂರು ಅಡಿಯಷ್ಟು ಮಳೆ ನೀರು ಮನೆಯೊಳಗೆ ತುಂಬಿಕೊಳ್ಳುತ್ತಿತ್ತಂತೆ. ಹೀಗಾಗಿ ಮನೆಯನ್ನು ಡೆಮಾಲಿಷ್ ಮಾಡಲು ಮಕ್ಕಳು ಮುಂದಾಗಿದ್ದರು. ಇದರಿಂದ ಬೇಸರಗೊಂಡ ತಾಯಿ ಯಲ್ಲಮ್ಮ, ನಾನು, ನಿಮ್ಮ ತಂದೆ ತುಂಬಾ ಕಷ್ಟಪಟ್ಟು ಈ ಮನೆಯನ್ನು ಕಟ್ಟಿದ್ದೇವೆ ದಯವಿಟ್ಟು ಒಡೆಯಬೇಡಿ ಎಂದು ಕೇಳಿಕೊಂಡಿದ್ದರಂತೆ. ತಾಯಿಯ ಆಸೆಯಂತೆ ಮನೆಯನ್ನು ಡೆಮಾಲಿಷ್ ಮಾಡದದೇ 100 ಅಡಿಯಷ್ಟು ಹಿಂದಕ್ಕೆ ಶಿಫ್ಟ್ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment