newsfirstkannada.com

WATCH: ಕುಸಿದ ಮನೆಗಳು, ಕೊಚ್ಚಿ ಹೋಗುವ ಜನರು.. ಭಯಾನಕ ದೃಶ್ಯ ಕಂಡು ಬೆಚ್ಚಿ ಬಿದ್ದ ಹಿಮಾಚಲ ಪ್ರದೇಶ ಸಿಎಂ

Share :

16-08-2023

    ಪ್ರಶಾಂತವಾಗಿದ್ದ ಶಿಮ್ಲಾದಲ್ಲಿ ಸಾಲು, ಸಾಲು ಪ್ರಕೃತಿ ವಿಕೋಪ

    ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ವೈಮಾನಿಕ ಸಮೀಕ್ಷೆ

    ದೇವಭೂಮಿಯಲ್ಲಿ ಅಪಾಯದಲ್ಲಿ ಸಿಲುಕಿದ ಹಲವಾರು ಜನ

ಹಿಮದ ನಾಡು, ಪ್ರವಾಸಿಗರ ಸ್ವರ್ಗ ಹಿಮಾಚಲ ಪ್ರದೇಶ ನಿಜಕ್ಕೂ ಅಪಾಯದಲ್ಲಿ ಸಿಲುಕಿದೆ. ರಭಸವಾಗಿ ಹರಿಯುವ ಪ್ರವಾಹ, ಭಯಾನಕ ಭೂಕುಸಿತ ಕ್ಷಣ, ಕ್ಷಣಕ್ಕೂ ಆತಂಕವನ್ನು ಹೆಚ್ಚಿಸುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಮನೆಗಳು ಕುಸಿಯುತ್ತಿರುವ ದೃಶ್ಯಗಳನ್ನ ನೋಡಿದ್ರೆ, ಇನ್ನೂ ಹಲವು ಮನೆಗಳು ಯಾವಾಗ ಬೇಕಾದ್ರೂ ಕೊಚ್ಚಿ ಕೊಂಡು ಹೋಗಬಹುದು ಎನ್ನಲಾಗಿದೆ. ಕೇವಲ 2 ದಿನದಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹಿಮಾಚಲ ಪ್ರದೇಶದ ಜನರಂತೂ ಜೀವ ಕೈಯಲ್ಲಿ ಹಿಡಿದು ಕೂತಿದ್ದಾರೆ.

ಪ್ರಕೃತಿಯ ಸೌಂದರ್ಯದಲ್ಲಿ ಪ್ರಶಾಂತವಾಗಿದ್ದ ಶಿಮ್ಲಾ ನೋಡ, ನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿದೆ. ವರುಣ ದೇವನ ಕೋಪಕ್ಕೆ ದೇವಭೂಮಿಯ ಜನಜೀವನ ಅಸ್ತವ್ಯಸ್ತವಾಗಿದೆ. ಅಬ್ಬರಿಸಿದ ಮಳೆ ರಭಸಕ್ಕೆ ಗುಡ್ಡ-ಬೆಟ್ಟಗಳು, ಭೂಕುಸಿತವಾಗಿ ಮನೆಗಳು ಕೊಚ್ಚಿ ಹೋಗಿವೆ. ಗುಡ್ಡಗಾಡಿನಲ್ಲಿರುವ ಮನೆಗಳಂತೂ ಮಕ್ಕಳಾಡುವ ಜಾರು ಬಂಡೆಯಲ್ಲಿ ಜಾರಿ ಹೋದಂತೆ ಜಾರಿ ಹೋಗಿವೆ. ಹಿಮಾಚಲ ಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರು ಸೋಷಿಯಲ್ ಮೀಡಿಯಾದಲ್ಲಿ ಮನೆಗಳು ಕುಸಿಯೋ ವಿಡಿಯೋ ಹಂಚಿಕೊಂಡು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಸಿಎಂ ಸುಖ್ವಿಂದರ್ ಸಿಂಗ್ ಸುಖು ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಶಿಮ್ಲಾದ ಸಮ್ಮರ್ ಹಿಲ್ ಭಾಗದಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಎಂಟರಿಂದ ಹತ್ತು ಮನೆಗಳಲ್ಲಿದ್ದ ಜನರು ಕಣ್ಮರೆಯಾಗಿದ್ದಾರೆ. ಇಲ್ಲಿಯವರೆಗೆ 13 ಜನರ ಮೃತ ದೇಹಗಳು ಪತ್ತೆಯಾಗಿದೆ. ಸ್ಥಳಿಯರು ಮಾಹಿತಿ ನೀಡಿರುವ ಪ್ರಕಾರ ಒಟ್ಟು 21 ಜನ ನಾಪತ್ತೆಯಾಗಿದ್ದಾರಂತೆ. ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಉಳಿದವರ ಪತ್ತೆ ಕಾರ್ಯ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ನಮ್ಮ ತಂಡದಲ್ಲಿ NDRF, SDRF, ಸೇನೆ, ಸ್ಥಳೀಯ ಪೋಲೀಸ್ ಮತ್ತು ಹೋಮ್ ಗಾರ್ಡ್ ಇದ್ದಾರೆ ಎನ್ನಲಾಗಿದೆ.

ಹಿಮಾಚಲ ಪ್ರದೇಶದ ಪ್ರವಾಹದಲ್ಲಿ ಸಿಲುಕಿದ 800ಕ್ಕೂ ಹೆಚ್ಚು ಜನರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗಿದೆ. ಭಾರೀ ಮಳೆಯಿಂದ ಪಾಂಗ್ ಅಣೆಕಟ್ಟಿನಲ್ಲಿ ಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಅಣೆಕಟ್ಟಿನ ಕೆಳ ಭಾಗದಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇತ್ತ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ 2 ದಿನಗಳಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ನೆರೆಯಲ್ಲಿ ಸಿಲುಕಿದ್ದವರನ್ನ ಸುರಕ್ಷಿತವಾಗಿ ಏರ್ ಲಿಫ್ಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಪ್ರವಾಹ ಪೀಡಿತರನ್ನ ಕರೆತರಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಕುಸಿದ ಮನೆಗಳು, ಕೊಚ್ಚಿ ಹೋಗುವ ಜನರು.. ಭಯಾನಕ ದೃಶ್ಯ ಕಂಡು ಬೆಚ್ಚಿ ಬಿದ್ದ ಹಿಮಾಚಲ ಪ್ರದೇಶ ಸಿಎಂ

https://newsfirstlive.com/wp-content/uploads/2023/08/Himachala-Pradesh.jpg

Load More