/newsfirstlive-kannada/media/post_attachments/wp-content/uploads/2024/10/HEAD-MASSAGE.jpg)
ಅಭ್ಯಂಗಂ ಶಿರಸಹಿತ ದೇಹ ತೈಲಮರ್ಧನಮ್ ಎಂದು ಆಯುರ್ವೇದದಲ್ಲಿ ಎಂಬ ಸಂಸ್ಕೃತ ಉಲ್ಲೇಖವಿದೆ. ಅಂದ್ರೆ ಎಣ್ಣೆ ತಲೆಗೆ ಹಾಗೂ ದೇಹಕ್ಕೆ ಹಚ್ಚಿ ಮಸಾಜ್ ಮಾಡುವ ಮೂಲಕ ಸ್ನಾನ ಮಾಡಿದರೆ ಆಯಾಸ ಹೋಗುತ್ತದೆ ಎಂಬ ಅರ್ಥವಿದೆ.ಅದರಲ್ಲೂ ತಲೆ ಮಸಾಜ್ ಎಂಬುದು ಒಂದು ಸ್ವರ್ಗ ಸುಖದ ಅನುಭವ. ತಲೆಗೆ ಎಣ್ಣೆ ಹಚ್ಚಿ ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡಿದರೆ ಮೈ ಭಾರವೆಲ್ಲಾ ಇಳಿದ ಅದ್ಭುತ ಸುಖದ ಅನುಭವವಾಗುತ್ತದೆ. ಹೀಗೆ ವಾರಕ್ಕೊಮ್ಮೆಯಾದರೂ ಎಣ್ಣೆಯಿಂದ ತಲೆ ಮಸಾಜ್ ಮಾಡಿ ಸ್ನಾನ ಮಾಡುವುದರಿಂದ ಅನೇಕ ಆರೋಗ್ಯದ ಲಾಭಗಳಿವೆ.
ಸರಿಯಾದ ರಕ್ತ ಪರಿಚಲನೆ ಆಗುತ್ತದೆ.
ವಾರಕ್ಕೊಮ್ಮೆ ಅಥವಾ ಆಗಾಗ ಮಾಡುವ ಅಭ್ಯಂಗ ಸ್ನಾನ ಅಂದ್ರೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಸ್ನಾನ ಮಾಡುವುದರಿಂದ ರಕ್ತಪರಿಚಲನೆ ಸುಧಾರಿಸುವುದು. ಮಸಾಜ್ನಿಂದಾಗಿ ಮೆದುಳಿಗೆ ರಕ್ತದ ಸರಬರಾಜು ಸರಿಯಾಗಿ ಆಗುತ್ತದೆ. ಹೀಗೆ ರಕ್ತ ಸರಿಯಾಗಿ ಪೂರೈಕೆಯಾಗುವುದರಿಂದ ಅದರ ಜೊತೆ ಮೆದುಳಿಗೆ ಸರಿಯಾದ ಆಮ್ಲಜನಕ ಹಾಗೂ ನ್ಯೂಟ್ರಿಯಂಟ್ಸ್ಗಳು ಪೂರೈಕೆಯ ಪ್ರಮಾಣವೂ ಕೂಡ ಸುಧಾರಿಸುತ್ತದೆ. ಇದರಿಂದ ಏಕಾಗ್ರತೆ, ನೆನಪಿನ ಶಕ್ತಿಯಲ್ಲಿ ಸುಧಾರಣೆಯಾಗುತ್ತದೆ.
ಒತ್ತಡ ಆತಂಕದಿಂದ ಮುಕ್ತಿ
ಸದ್ಯ ನಮ್ಮ ಬದುಕು ಒತ್ತಡದ ಜಗತ್ತಿನ ನಡುವೆ ಹೊರಟಿದೆ. ಒತ್ತಡದ ಬದುಕು ಹಲವು ಆರೋಗ್ಯದ ಸಮಸ್ಯೆಗಳನ್ನು ತಂದೊಡ್ಡುತ್ತದೆ ಹೀಗಾಗಿ ವಾರಕ್ಕೆ ಒಮ್ಮೆಯಾದರು ನಾವು ಹೆಡ್ ಮಸಾಜ್ ಮಾಡಿಕೊಂಡು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಒತ್ತಡ ನಿವಾರಣೆ ಆಂಕ್ಸೈಟಿಯಂತಹ ಸಮಸ್ಯೆಗಳಿಂದ ದೂರವಾಗಬಹುದು. ಮಸಾಜ್ನಿಂದಾಗಿ ನಮ್ಮ ನರಮಂಡಲ ಆ್ಯಕ್ಟಿವ್ ಆಗುತ್ತದೆ. ದೇಹದ ನಿರಾಳವಾದಂತ ಭಾವ ಬರುತ್ತದೆ ಇಂತಹ ರೂಢಿಗಳು ಆಗಾಗ ಇದ್ದಲ್ಲಿ ಒತ್ತಡ ಹಾಗೂ ಆತಂಕಗಳಂತಹ ಮಾನಸಿಕ ಸಮಸ್ಯೆಗಳಿಂದ ದೂರಾಗಬಹುದು.
ಕೇಶದ ಆರೋಗ್ಯವೂ ಕೂಡ ಸುಧಾರಣೆ ಆಗುತ್ತದೆ
ಮೆದುಳಿನ ಜೊತೆ ಜೊತೆಗೆ ಹೆಡ್ ಮಸಾಜ್ನಿಂದ ನಮ್ಮ ಕೂದಲಿನ ಆರೋಗ್ಯವೂ ಕೂಡ ಸುಧಾರಿಸುತ್ತದೆ. ಆಗಾಗ ಹೆಡ್ ಮಸಾಜ್ ಮಾಡುವುದರಿಂದ ಹೊಸ ಕೂದಲಗಳು ಬೆಳೆಯಲು ಸಹಾಯವಾಗುತ್ತವೆ. ಬೋಳು ತಲೆ ಸಮಸ್ಯೆಯನ್ನು ಸಹ ನಾವು ದೂರ ಇಡಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ