/newsfirstlive-kannada/media/post_attachments/wp-content/uploads/2024/12/ISHWARYA-1.jpg)
9 ಕೋಟಿ ಗೋಲ್ಡ್​ ಖರೀದಿಸಿ ವಂಚನೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಐಶ್ವರ್ಯ ಅಲಿಯಾಸ್ ನವ್ಯಶ್ರೀಯ ಬದುಕನ್ನು ಕೆದುಕುತ್ತಾ ಹೋದಂತೆ ದಿನಕ್ಕೊಂದು ಅಚ್ಚರಿಯ ಮಾಹಿತಿಗಳು ಆಚೆ ಬರುತ್ತಿವೆ. ಐಶ್ವರ್ಯ ಮೂಲತಃ ಮಂಡ್ಯದ ಕಿರುಗಾವಲು ಗ್ರಾಮದವಳು. ಬೆಂಗಳೂರು ಮಾತ್ರವಲ್ಲದೇ ಈಕೆಯ ಮೇಲೆ ಮಂಡ್ಯದಲ್ಲಿಯೂ ಹಲವು ವಂಚನೆ ಆರೋಪಗಳಿವೆ. ಬಡ್ಡಿಗೆ ದುಡ್ಡು, ಒಡವೆ ಪಡೆದು ವಾಪಸ್ಸು ನೀಡದ ಆರೋಪವನ್ನು ಈ ಹಿಂದೆ ಈ ಐಶ್ವರ್ಯಗೌಡ ಎದುರಿಸಿದ್ದಾಳೆ. ಎಫ್​ಐಆರ್ ದಾಖಲಿಸುವ ಹಂತಕ್ಕೆ ಹೋಗಿ ಕೊನೆ ರಾಜಿ ಸಂಧಾನದಲ್ಲಿ ಮುಗಿದುಕೊಂಡಿವೆ.
ಪೊಲೀಸರ ಸಮ್ಮುಖದಲ್ಲಿಯೇ ಅನೇಕ ಪ್ರಕರಣಗಳು ಇತ್ಯರ್ಥಗೊಂಡಿವೆ. ಕೆಲ ವರ್ಷಗಳ ಹಿಂದೆ ಬೆಂಗಳೂರು ಸೇರಿದ್ದ ಐಶ್ವರ್ಯ ಅಲಿಯಾಸ್ ನವ್ಯಶ್ರೀಯ ತಂದೆ ತಾಯಿ ಹಾಗೂ ಸಹೋದರ ಈಗಲೂ ಕಿರುಗಾವಲಿನಲ್ಲೇ ವಾಸವಿದ್ದಾರೆ. ಬೆಂಗಳೂರು ಸೇರಿದ ಬಳಿಕ ನವ್ಯಶ್ರಿ ಬದುಕೇ ಬದಲಾಗಿ ಹೋಯ್ತು. ಮಧ್ಯಮವರ್ಗದ ಕುಟುಂಬದಲ್ಲಿ ಜನಸಿದ್ದರೂ ಕೂಡ ಐಶ್ವರ್ಯ ಐಶ್ವರ್ಯವಂತರಂತೆ ಐಷಾರಾಮಿ ಜೀವನ ಸಾಗಿಸುತ್ತಿದ್ದಳು.
ಇದನ್ನೂ ಓದಿ:ಡಿ.ಕೆ ಸುರೇಶ್ ತಂಗಿ ಎಂದ ಐಶ್ವರ್ಯ ಕೋಟಿ, ಕೋಟಿ ಪಂಗನಾಮ? ನಟ ಧರ್ಮೇಂದ್ರಗೂ ಬಿಗ್ ಶಾಕ್!
ಮೈತುಂಬ ಒಡವೆ, ಭವ್ಯ ಬಂಗಲೆ, ಲಕ್ಷುರಿ ಲೈಫು ಇವಳದಾಗಿತ್ತು. ಕೋಟಿ ರೂಪಾಯಿ ಖರ್ಚು ಮಾಡಿ ಅಣ್ಣಮ್ಮ ತಾಯಿ ಉತ್ಸವ ಮಾಡಿದ್ದಳು ಐಶ್ವರ್ಯ ಎಂಬ ಸುದ್ದಿಗಳು ಕೂಡ ಈಗ ಬರುತ್ತಿವೆ. ಖಾಸಗಿ ಇವೆಂಟ್ ರೀತಿ ಅದ್ದೂರಿಯಾಗಿ ದೇವರ ಉತ್ಸವ ಮಾಡಿದ್ದಳು. ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಮತೆ ಹಲವರು ಈ ಉತ್ಸವಕ್ಕೆ ಬಂದು ಹೋಗಿದ್ದರು ಎಂದು ಕೂಡ ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us