/newsfirstlive-kannada/media/post_attachments/wp-content/uploads/2024/08/badam-health-story.jpg)
ದೇಹಕ್ಕೆ ಪೋಷಕಾಂಶಗಳ ಅಗತ್ಯ ಇದೆ. ಪೋಷಕಾಂಶಗಳು ಇರುವ ಆಹಾರ ಹಾಗೂ ಧಾನ್ಯಗಳ ಸೇವನೆಯಿಂದ ಮನುಷ್ಯನ ಆರೋಗ್ಯ ಸದೃಢ ಆಗುತ್ತದೆ. ಅದರಲ್ಲೂ ಬಾದಾಮ್​ ನ್ಯೂಟ್ರೀಷನ್​ಗಳ ಪವರ್​ ಹೌಸ್. ನಿತ್ಯ ಬಾದಾಮ್ ಸೇವನೆ ಮಾಡಿದಲ್ಲಿ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಹಾಗೆಯೇ ಬಾದಾಮ್​ ಬೇಕಾಬಿಟ್ಟಿ ತಿಂದ್ರೂ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ.
ಕೇವಲ 23 ಬಾದಾಮ್​ ಮಾತ್ರ ತಿನ್ನಬೇಕು
ದಿನಕ್ಕೆ 23 ಬಾದಾಮ್ ತಿನ್ನುವುದರಿಂದ ದೇಹಕ್ಕೆ ಉತ್ತಮ ಪೋಷಕಾಂಶ ಸಿಗಲಿದೆ. ಕೇವಲ 23 ಅನ್ನೋದಕ್ಕೆ ಒಂದು ಲಾಜಿಕ್​ ಇದೆ. ಕಾರಣ ನಮ್ಮ ದೇಹಕ್ಕೆ ಬೇಕಾಗಿರೋ ಅಷ್ಟು ಪೋಷಕಾಂಶ 23 ಬಾದಾಮ್​ನಿಂದ ಸಿಗುತ್ತದೆ. ಇದಕ್ಕಿಂತಲೂ ಹೆಚ್ಚು ಸೇವನೆ ಮಾಡಿದಲ್ಲಿ ಆರೋಗ್ಯ ಕೆಡಲಿದೆ. ದಿನಕ್ಕೆ ಕನಿಷ್ಠ 30 ಗ್ರಾಮ್​ ಬಾದಾಮ್​ ತಿನ್ನುವುದು ಯೋಗ್ಯ ಎಂದು ಹೇಳಲಾಗುತ್ತದೆ. ಒಟ್ಟು 23 ಬಾದಾಮ್​ಗಳು 30 ಗ್ರಾಮ್​ಗೆ ಸಮವಾಗುತ್ತವೆ ಎನ್ನುತ್ತಾರೆ ನ್ಯೂಟ್ರೂಷಿಯನಿಷ್ಟ್​ಗಳು.
/newsfirstlive-kannada/media/post_attachments/wp-content/uploads/2024/08/badam-health-story-1.jpg)
ಬಾದಾಮ್​​ ನೇರವಾಗಿ ತಿನ್ನಬಾರದು!
ಹಿಂದಿನ ದಿನ ರಾತ್ರಿ ನೀರಿನಲ್ಲಿ ನೆನೆಯಿಟ್ಟು ಬಾದಾಮ್​​ ತಿನ್ನಬೇಕು. ಯಾವುದೇ ಕಾರಣಕ್ಕೂ ನೇರ ಬಾದಾಮ್​ ತಿನ್ನಬಾರದು. ಕಾರಣ ಬಾದಾಮ್​​ ಸಖತ್​ ಹೀಟ್​. ಇದರಿಂದ ಅಜೀರ್ಣ, ಊರಿಯೂತ ಹೀಗೆ ಹಲವು ಸಮಸ್ಯೆಗಳು ಎದುರಾಗುತ್ತವೆ.
ನೆನೆಯಿಟ್ಟು ಬಾದಾಮ್​ ತಿನ್ನಿ. ನೇರವಾಗಿ ಬಾದಾಮ್ ಸೇವನೆ ಮಾಡುವುದರಿಂದ ನ್ಯೂಟ್ರಿಷನ್ ಇನ್ನೂ ಹೆಚ್ಚು ಸಿಗಬಹುದು. ಅದರಲ್ಲೂ ಹುರಿದು ತಿನ್ನುವುದಿಂದ ಹೆಚ್ಚು ಆರೋಗ್ಯಕರ ಕೂಡ ಹೌದು. ಆದರೆ, ನಮ್ಮಲ್ಲಿ ಇರುವುದು ನೆನೆಯಿಟ್ಟು ತಿನ್ನುವ ಪದ್ಧತಿ. ಹೀಗಾಗಿ ಹೇಗೆ ತಿಂದರೂ ಬಾದಾಮ್ ಆರೋಗ್ಯದ ವಿಷಯದಲ್ಲಿ ಹೆಚ್ಚು ಲಾಭಕರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us