Advertisment

ವೈದ್ಯೆ ರೇಪ್ & ಮರ್ಡರ್‌ ಕೇಸ್‌ಗೆ ಹೊಸ ಟ್ವಿಸ್ಟ್‌.. ಹಂತಕನ ಹಿಡಿದುಕೊಟ್ಟಿದ್ದೇ ಆ ವಸ್ತು! ಕೊಲೆ ರಹಸ್ಯ ಬಯಲು

author-image
Gopal Kulkarni
Updated On
ರೇಪ್ ಮಾಡಿ ಮುಖಕ್ಕೆ ಗುದ್ದಿದ.. ವೈದ್ಯೆಯ ಕಣ್ಣಿಗೆ ಹೊಕ್ಕ ಚಸ್ಮಾ ಗ್ಲಾಸ್; ಕೊಲ್ಕತ್ತಾ ಕಿರಾತಕನ ಮತ್ತಷ್ಟು ಕ್ರೌರ್ಯ ಬಯಲು
Advertisment
  • ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ
  • ಕೊಲೆಯಾದ ಜಾಗದಲ್ಲಿ ಏನೆಲ್ಲಾ ಬಿಟ್ಟು ಹೋಗಿದ್ದ ನೀಚ ಹಂತಕ?
  • ಸಿಸಿಟಿವಿಯಲ್ಲಿ ಓಡಾಡಿದ ಹೆಜ್ಜೆಯ ಜಾಡು ಹಿಡಿದು ಹೋದ ಪೊಲೀಸರು

ಕೋಲ್ಕತ್ತಾ: ಸರ್ಕಾರಿ ಆಸ್ಪತ್ರೆಯಲ್ಲಿ ಟ್ರೈನಿ ಡಾಕ್ಟರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಈಗಾಗಲೇ ಕೊಲ್ಕತ್ತಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕಳೆದ ದಿನವಷ್ಟೇ ಎಂಬಿಬಿಎಸ್ ಸ್ನಾತಕೋತ್ತರ ಪದವಿ ಕಲಿಯುತ್ತಿದ್ದ 31 ವರ್ಷದ ಯುವತಿಯನ್ನು ಬರ್ಬರವಾಗಿ ಅತ್ಯಾಚಾರ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಆ ಕೊಲೆಯ ವಿರುದ್ಧ ವಿದ್ಯಾರ್ಥಿ ಸಂಘಟನೆ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

Advertisment

ಈ ಘಟನೆ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಎತ್ತಿದೆ. ಯಾವಾಗ ವಿದ್ಯಾರ್ಥಿ ಪಡೆ ಬೀದಿಗಿಳಿದು ಆಕ್ರೋಶ ಹೊರಹಾಕಲು ಶುರು ಮಾಡಿತೋ, ಕೂಡಲೇ ಖಾಕಿ ಪಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ. ಹಂತಕ ಜಾಡು ಹಿಡಿದು ಹೊರಟರು. ಹಾಗೆ ಹಂತಕನ ಜಾಡು ಹಿಡಿದು ಹೊರಟ ಪೊಲೀಸರಿಗೆ ಮೊದಲ ಸಾಕ್ಷಿಯಾಗಿ ಸಿಕ್ಕಿದ್ದು ಒಂದು ಬ್ಲ್ಯೂಟೂತ್​.

ಇದನ್ನೂ ಓದಿ:ಬಾಯಿ, ಕಣ್ಣು, ಖಾಸಗಿ ಭಾಗದಲ್ಲಿ ರಕ್ತಸ್ರಾವ.. ಅರೆನಗ್ನ ಸ್ಥಿತಿಯಲ್ಲಿ ಶವ; ವೈದ್ಯೆ ರೇಪ್ & ಮರ್ಡರ್‌ ಘನಘೋರ!

ಹಂತಕರು ಎಷ್ಟೇ ಜಾಣತನದಿಂದ ತಪ್ಪಿಸಿಕೊಳ್ಳಬೇಕು ಎಂದು ಚಾಪೆಯ ಕೆಳಗೆ ತೂರಿಕೊಂಡರು, ಪೊಲೀಸ್ ಇಲಾಖೆ ರಂಗೋಲಿ ಕೆಳಗಡೆ ತೂರಿಕೊಂಡು ಹೋಗಿ ಅವರ ಕಳ್ಳ ಹೆಜ್ಜೆಯ ಒಂದೊಂದು ಗುರುತನ್ನು ಪತ್ತೆ ಮಾಡಿ ಬಿಡುತ್ತದೆ. ಎಷ್ಟೇ ಚಾಲಾಕಿ ಹಂತಕನೂ ಕೂಡ ಒಂದಿಲ್ಲೊಂದು ಸುಳಿವು ತನಗರಿವಿಲ್ಲದಂತೆ ಬಿಟ್ಟುಕೊಟ್ಟು ಬಂದಿರುತ್ತಾನೆ. ಸದ್ಯ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿ, ಸಂಜಯ್ ರಾಯ್​ ಕೂಡ ಇಂತಹದೇ ಒಂದು ಸುಳಿವನ್ನು ಕೊಲೆ ಮಾಡಿದ ಜಾಗದಲ್ಲಿ ಬಿಟ್ಟು ಬಂದಿದ್ದ

Advertisment

ಇದನ್ನೂ ಓದಿ:ಕಬ್ಬಿನ ಗದ್ದೆಗೆ ಹೋಗ್ತಿದ್ದ ಮಹಿಳೆಯರೇ ಟಾರ್ಗೆಟ್.. 9 ಕೊಲೆ ಮಾಡಿದ್ದ ವಿಕೃತ ಹಂತಕ; ಕಾರಣವೇನು?

publive-image

ಅತ್ಯಾಚಾರ ಮತ್ತು ಕೊಲೆ ನಡೆದ ಜಾಗದಲ್ಲಿ ಯುವತಿಯ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಕಂಡು ಬಂದಿತ್ತು. ಆಕೆಯ ಒಳ ಉಡುಪು ಹಾಗೂ ಜೀನ್ಸ್ ಪ್ಯಾಂಟ್ ಕೂಡ ಅವಳ ದೇಹದ ಪಕ್ಕದಲ್ಲಿ ಬಿದ್ದಿದ್ವು ಅವುಗಳ ಅಣತಿ ದೂರದಲ್ಲಿಯೇ ಬಿದ್ದಿತ್ತು ಒಂದು ಬ್ಲ್ಯೂಟೂಥ್. ಅದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಮತ್ತೊಂದು ಪ್ರಮುಖ ಸಾಕ್ಷಿಯಾಗಿ ಸಿಕ್ಕಿದ್ದು ಸಿಸಿಟಿವಿ ಫೂಟೇಜ್, ಕೊಲೆ ನಡೆದ ಹಾಗೂ ಅದಕ್ಕೂ ಮೊದಲು ಸಂಜಯ್​ ರಾಯ್ ಓಡಾಡಿದ್ದ ದೃಶ್ಯಗಳನ್ನು ನೋಡಿದ ಪೊಲೀಸರು ಹಂತಕನ ಹೆಡೆಮುರಿ ಕಟ್ಟಲು ಸಜ್ಜಾಗಿದ್ದರು. ಈ ಎರಡು ಪ್ರಮುಖ ಸಾಕ್ಷಿಗಳಿಂದಲೇ ಸಂಜಯ್ ರಾಯ್​ನನ್ನು ಬಲೆಗೆ ಕೆಡುವಲು ಸಾಧ್ಯವಾಗಿದ್ದು. ಸಂಜಯ್ ರಾಯ್​ ಒಬ್ಬ ಸ್ವಯಂಸೇವಕನಾಗಿ ಕಾರ್ಯ ನಿರ್ವಹಿಸು್ತಿದ್ದ ಎಂದು ಹೇಳಲಾಗಿದೆ.

ಅತ್ಯಾಚಾರಕ್ಕೂ ಮುನ್ನ ಆರೋಪಿ ವಿಪರೀತವಾಗಿ ಕುಡಿದಿದ್ದ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಅದು ಮಾತ್ರವಲ್ಲ, ಆಸ್ಪತ್ರೆಗೆ ಬರುವ ಮುನ್ನ ಆರೋಪಿ ಹಲವು ಪೋರ್ನ್​ ವಿಡಿಯೋಗಳನ್ನು ಕೂಡ ನೋಡಿದ್ದ ಎಂಬ ಅಂಶಗಳು ಸದ್ಯ ವಿಚಾರಣೆಯಲ್ಲಿ ಬೆಳಕಿಗೆ ಬಂದಿವೆ.

Advertisment

ಇನ್ನು ಕೊಲೆ ನೋಡಿ ಖುದ್ದು ಪೊಲೀಸರೇ ಬೆಚ್ಚಿ ಬಿದ್ದಿದ್ದರು. ಇದು ಸಾಧಾರಾಣ ಕೊಲೆಯಲ್ಲಿ ಅತ್ಯಂತ ಹೇಯವಾಗಿ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಆರೋಪಿಗೆ ಕಠಿಣಾತೀಕಠಿಣ ಶಿಕ್ಷೆಯಾಗಬೇಕು ಅನ್ನೋದೆ ನಮ್ಮ ಉದ್ದೇಶ, ಅವನ ವಿರುದ್ಧ ಈಗಾಗಲೇ ಬೇಕಾದ ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಮ್ಮನ್ನೂ ಕೂಡ ದುಃಖಕ್ಕೆ ಕೋಪಕ್ಕೆ ಈಡು ಮಾಡಿದೆ. ಅತ್ಯಂತ ಪಾರದರ್ಶಕ ತನಿಖೆಯೊಂದಿಗೆ ಆರೋಪಿಗೆ ಶಿಕ್ಷೆಯಾಗುವಂತೆ ನೋಡುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment