ನೀವು ಮನೆಯಲ್ಲೇ ಮಹಾಕುಂಭದ ಪುಣ್ಯ ಸ್ನಾನ ಮಾಡಬಹುದು.. ಪವಿತ್ರ ನೀರು ಪಡೆಯೋದು ಹೇಗೆ..?

author-image
Ganesh
Updated On
ಒಂದೂವರೆ ಕೋಟಿ ಭಕ್ತರ ಸ್ನಾನ.. ಮಹಾಕುಂಭ ಮೇಳದ ಮೊದಲ ದಿನ ಹೇಗಿತ್ತು? ಇಲ್ಲಿದೆ ಕಂಪ್ಲೀಟ್ ಮಾಹಿತಿ
Advertisment
  • ನಂಬಿಕೆಯ ದೊಡ್ಡ ಹಬ್ಬವೆಂದರೆ ಮಹಾಕುಂಭ ಮೇಳ
  • ಪವಿತ್ರ ಸ್ನಾನಕ್ಕಾಗಿ ಕೋಟ್ಯಾಂತರ ಭಕ್ತರು ಬರುತ್ತಾರೆ
  • ಮಹಾಕುಂಭಕ್ಕೆ ಹೋಗಲು ಸಾಧ್ಯವಾಗದಿದ್ರೆ ಇದೆ ಅವಕಾಶ

ನಂಬಿಕೆಯ ದೊಡ್ಡ ಹಬ್ಬವೆಂದರೆ ಮಹಾಕುಂಭ ಮೇಳ. ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನ ಮಹಾ ಸಂಗಮದಲ್ಲಿ ನಡೆಯಲಿರುವ ಹಬ್ಬದಲ್ಲಿ ಪ್ರತಿಯೊಬ್ಬರೂ ಸ್ನಾನ ಮಾಡಲು ಬಯಸುತ್ತಾರೆ. ಮಹಾಕುಂಭ ಸ್ನಾನಕ್ಕೆ ವಿಶೇಷ ಮಹತ್ವ ಇದೆ. ಕುಂಭದಲ್ಲಿ ಸ್ನಾನ ಮಾಡೋದ್ರಿಂದ ನಿಮ್ಮ ಅನೇಕ ಜನ್ಮಗಳ ಪಾಪಗಳು ತೊಳೆದು ಹೋಗುತ್ತವೆ ಎಂಬ ನಂಬಿಕೆ ಇದೆ.

ದೇವರು ಮತ್ತು ದೇವತೆಗಳ ಆಶೀರ್ವಾದ ಸಿಗುತ್ತದೆ. ಕುಂಭದಲ್ಲಿ ಸ್ನಾನ ಮಾಡಿದ ನಂತರ ದಾನ ಮಾಡಿದ್ರೆ ಪೂರ್ವಜರ ಆಶೀರ್ವಾದವೂ ಸಿಗುತ್ತದೆ. ಹೀಗಾಗಿ ಎಲ್ಲರೂ ಜೀವನದಲ್ಲಿ ಒಮ್ಮೆ ಕುಂಭಮೇಳದಲ್ಲಿ ಸ್ನಾನ ಮಾಡಲು ಬಯಸುತ್ತಾರೆ. ಕಾರಣಾಂತರಗಳಿಂದ ಮಹಾಕುಂಭಕ್ಕೆ ಹೋಗಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಕುಳಿತುಕೊಂಡು ಸಕಲ ಪುಣ್ಯಗಳನ್ನು ಪಡೆಯಬಹುದು.

ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ 45 ಕೋಟಿ ಭಕ್ತರು.. ಬೆಳಗ್ಗೆ 8 ಗಂಟೆಯೊಳಗೆ 65 ಲಕ್ಷ ಮಂದಿ ಪವಿತ್ರ ಸ್ನಾನ

publive-image

ನೀವು ಕುಂಭ ಸ್ನಾನಕ್ಕೆ ಹೋಗಲು ಸಾಧ್ಯವಾಗದಿದ್ರೆ ಸಂಬಂಧಿಕರು ಅಥವಾ ನೆರೆಹೊರೆಯವರಿಂದ ಕುಂಭ ನೀರನ್ನು ಕೇಳಿ. ನಿಮ್ಮ ಸ್ನಾನದ ನೀರಿಗೆ ಆ ನೀರನ್ನು ಸೇರಿಸಿ ಸ್ನಾನ ಮಾಡಿ. ಆಗ ನೀವು ಕೂಡ ಕುಂಭ ಸ್ನಾನ ಮಾಡಿದಂತೆಯೇ ಆಗುತ್ತದೆ. ಕೆಲವು ಶುಭ ದಿನದಂದು, ಕುಂಭದಿಂದ ತಂದ ನೀರಿನಿಂದ ಸ್ನಾನ ಮಾಡಿ ಎಂದು ಜ್ಯೋತಿರ್ಮಠ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಜೀ ಹೇಳಿದ್ದಾರೆ.

ನೀರನ್ನು ಹೇಗೆ ಆರ್ಡರ್ ಮಾಡಬಹುದು?

ನಿಮಗೆ ತಿಳಿದಿರುವ ಯಾರಾದರೂ ಮಹಾಕುಂಭದಲ್ಲಿ ಸ್ನಾನ ಮಾಡಲು ಹೋದರೆ ಅವರಿಂದ ನೀರನ್ನು ತರಿಸಿಕೊಳ್ಳಿ. ಅನೇಕ ಎನ್‌ಜಿಒಗಳು ಮಹಾಕುಂಭದ ನೀರು ಮತ್ತು ಪ್ರಸಾದವನ್ನು ಕಳುಹಿಸುವ ಕೆಲಸ ಮಾಡುತ್ತಿವೆ. ನೀರು ಮತ್ತು ಪ್ರಸಾದವನ್ನು ಉಚಿತವಾಗಿ ಕಳುಹಿಸುವ ಸೇವೆಯನ್ನು ಒದಗಿಸುತ್ತಿವೆ. ಎನ್​ಜಿಓಗಳಲ್ಲಿ ನೀವು ನೊಂದಾಯಿಸಿಕೊಂಡು ನೀವು ಮಹಾಕುಂಭ ನೀರನ್ನು ಪಡೆಯಬಹುದು. ‘ತ್ರಿವೇಣಿ ಸಂಗಮ ವಾಟರ್ ಡೆಲಿವರಿ ಸರ್ವಿಸ್’ ನೇರವಾಗಿ ನಿಮ್ಮ ಮನೆಗೆ ನೀರು ತಲುಪಿಸುವ ಸೇವೆ ಒದಗಿಸುತ್ತಿದೆ.

ಗಂಗಾಜಲದಿಂದ ಸ್ನಾನ

ಒಂದು ವೇಳೆ ನಿಮಗೆ ಮಹಾಕುಂಭದ ನೀರು ಸಿಗದಿದ್ದರೆ ಮನೆಯಲ್ಲಿಯೇ ಗಂಗಾಜಲದಲ್ಲಿ ಸ್ನಾನ ಮಾಡಿ. ಇದರಿಂದಲೂ ಮಹಾಕುಂಭದಲ್ಲಿ ಸ್ನಾನ ಮಾಡಿದ ಲಾಭವೇ ಸಿಗಲಿದೆ. ಪುಣ್ಯ ಸ್ನಾನದ ಯಾವುದೇ ದಿನದಂದು ಗಂಗಾಜಲದಿಂದ ಸ್ನಾನ ಮಾಡಬಹುದು.

ಇದನ್ನೂ ಓದಿ: ಮಹಾ ಕುಂಭಮೇಳ ಕೇವಲ ಒಂದು ಉತ್ಸವವಲ್ಲ; ಇದರ ಆದಾಯ ಬರೋಬ್ಬರಿ 25,000 ಕೋಟಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment