3ನೇ ಟೆಸ್ಟ್ ಮಳೆಯಿಂದ ರದ್ದು ಆದ್ರೆ ಟೀಮ್ ಇಂಡಿಯಾಕ್ಕೆ ಲಾಭ-ನಷ್ಟಗಳೇನು.. ಫೈನಲ್​ಗೆ ಭಾರತ ಏನು ಮಾಡಬೇಕು?

author-image
Bheemappa
Updated On
3ನೇ ಟೆಸ್ಟ್ ಮಳೆಯಿಂದ ರದ್ದು ಆದ್ರೆ ಟೀಮ್ ಇಂಡಿಯಾಕ್ಕೆ ಲಾಭ-ನಷ್ಟಗಳೇನು.. ಫೈನಲ್​ಗೆ ಭಾರತ ಏನು ಮಾಡಬೇಕು?
Advertisment
  • ಮಳೆಯಿಂದ 3ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಸ್ಟಾಪ್
  • ಆಸಿಸ್​-ಭಾರತ ನಡುವಿನ ಟೆಸ್ಟ್ ನಾಳೆ ನಡೆಯುತ್ತಾ, ನಡೆಯಲ್ವಾ?
  • ರ್ಯಾಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ಯಾವ ಸ್ಥಾನದಲ್ಲಿದೆ?

ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಆದರೆ ಈ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರೀ ಪ್ರಮಾಣದಲ್ಲಿ ಮಳೆ ಬೀಳುತ್ತಿರುವ ಕಾರಣ ಮ್ಯಾಚ್ ಅನ್ನು ನಿಲ್ಲಿಸಲಾಗಿದೆ. ಇನ್ನೇನಿದ್ದರೂ ನಾಳೆಯೇ ಆಡಲಿದ್ದಾರೆ. ಒಂದು ವೇಳೆ ಈ ಪಂದ್ಯ ರದ್ದು ಆದರೆ ಭಾರತಕ್ಕೆ ಲಾಭ-ನಷ್ಟಗಳೇನು ಎನ್ನುವ ಮಾಹಿತಿ ಇಲ್ಲಿದೆ.

ಇಂದು ಗಬ್ಬಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಆಸಿಸ್​ ಓಪನರ್ಸ್ ಬ್ಯಾಟಿಂಗ್ ಮಾಡಲು ಕ್ರೀಸ್​ಗೆ ಬಂದರು. ಆದರೆ ವರುಣ ಕಾಟ ತಾಳಲಾರದೇ ಜಾಸ್ತಿ ಹೊತ್ತು ಆಡಲು ಆಗಲಿಲ್ಲ. ಹೀಗಾಗಿ ಮೊದಲ ದಿನದ ಪಂದ್ಯವನ್ನು 28 ರನ್​ಗೆ ನಿಲ್ಲಿಸಲಾಗಿದೆ. ರೋಹಿತ್ ನೇತೃತ್ವದ ಭಾರತ ತಂಡ ಈ ಮೂರನೇ ಟೆಸ್ಟ್ ಪಂದ್ಯ ಗೆಲ್ಲಬೇಕಾದ ಅನಿವಾರ್ಯ ಇದೆ. ಏಕೆಂದರೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಹಾದಿ ಸುಲಭವಾಗಬೇಕು ಎಂದರೆ ಈ ಪಂದ್ಯ ಬಹುಮುಖ್ಯ.

ಇದನ್ನೂ ಓದಿ:Match Fixing: ಕ್ರಿಕೆಟ್ ಲೋಕದಲ್ಲಿ ಮತ್ತೆ ಸಂಚಲನ.. ಫ್ರಾಂಚೈಸಿ ಮಾಲೀಕ ಅರೆಸ್ಟ್..!

publive-image

ಈ ಟೆಸ್ಟ್​ ಪಂದ್ಯ ಮಳೆಯಿಂದ ಡ್ರಾ ಆದರೆ ಟೀಮ್ ಇಂಡಿಯಾದ ಸ್ಥಾನವೇನು ಬದಲಾಗುವುದಿಲ್ಲ. ಆದರೆ ನಷ್ಟ ಆಗುವುದೇ ಹೆಚ್ಚು. ಒಂದು ವೇಳೆ ರೋಹಿತ್ ಪಡೆ ಮಂಡಿಯೂರಿದರೆ ಫೈನಲ್ ಹಾದಿ ದುರ್ಗಮವಾಗಲಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗೆ ಹೋಗಬೇಕು ಎಂದರೆ ಈ ಪಂದ್ಯ ಸೇರಿದಂತೆ ಇನ್ನೂ ಎರಡು ಮ್ಯಾಚ್​ಗಳನ್ನ ಭಾರತ ಗೆಲ್ಲಲೇಬೇಕು. ಈ ಮೂರನ್ನು ಗೆದ್ದರೆ ರ್ಯಾಕಿಂಗ್ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಿಂದ ಮೊದಲ ಸ್ಥಾನ ತಲುಪಲಿದೆ. ಇದರಿಂದ ಫೈನಲ್ ಕಾದಾಟ ಫಿಕ್ಸ್ ಆಗಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗಬ್ಬಾ ಟೆಸ್ಟ್ ಮಳೆಯಿಂದ ಡ್ರಾ ಆದರೆ, ಪಾಯಿಂಟ್ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಲ್ಲ. ಆದರೆ ಮುಂದಿನ 2 ಟೆಸ್ಟ್‌ಗಳನ್ನು ಭಾರತ ಗೆಲ್ಲಲೇಬೇಕು. ಇದರ ಜೊತೆಗೆ ಬೇರೆ ತಂಡಗಳ ಫಲಿತಾಂಶ ಕೂಡ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮೂರರಲ್ಲಿ ಭಾರತ ಪರಭಾವಗೊಂಡುರೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಕನಸು ಕೈಬಿಡಬೇಕಾಗುತ್ತದೆ.

ರ್ಯಾಕಿಂಗ್ ಪಟ್ಟಿ ಹೀಗಿದೆ

ಸೌತ್ ಆಫ್ರಿಕಾ- 10 ಪಂದ್ಯ, 6 ಗೆಲುವು, 76 ಪಾಯಿಂಟ್ಸ್, ಶೇಕಡಾ 63.33
ಆಸ್ಟ್ರೇಲಿಯಾ- 14 ಪಂದ್ಯ, 9 ಗೆಲುವು, 102 ಪಾಯಿಂಟ್ಸ್, ಶೇಕಡಾ 60.71
ಭಾರತ- 16 ಪಂದ್ಯ, 9 ಗೆಲುವು, 110 ಪಾಯಿಂಟ್ಸ್, ಶೇಕಡಾ 57. 29
ಶ್ರೀಲಂಕಾ- 11 ಪಂದ್ಯ, 5 ಗೆಲುವು, 60 ಪಾಯಿಂಟ್ಸ್, ಶೇಕಡಾ 45. 45

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment