ಟೀ ಕುಡಿಯುವಾಗ ನಿಮಗೆ ಕಡ್ಡಾಯವಾಗಿ ಸಿಗರೇಟ್​ ಬೇಕೇ ಬೇಕಾ? ಹಾಗಾದ್ರೆ ತಪ್ಪದೇ ಈ ಸ್ಟೋರಿ ಓದಿ

author-image
Gopal Kulkarni
Updated On
ಟೀ ಕುಡಿಯುವಾಗ ನಿಮಗೆ ಕಡ್ಡಾಯವಾಗಿ ಸಿಗರೇಟ್​ ಬೇಕೇ ಬೇಕಾ? ಹಾಗಾದ್ರೆ ತಪ್ಪದೇ ಈ ಸ್ಟೋರಿ ಓದಿ
Advertisment
  • ಒಂದು ಕಪ್ ಚಹಾದ ಜೊತೆ ಸಿಗರೇಟ್ ಸೇದುವ ಅಭ್ಯಾಸವಿದೆಯಾ?
  • ಈ ಒಂದು ಅಭ್ಯಾಸ ತಂದಿಡುವ ಆಪತ್ತುಗಳು ಏನು ಅಂತ ಗೊತ್ತಿದೆಯಾ?
  • ಟೀ ಮತ್ತು ಸಿಗರೇಟ್ ಎರಡು ಸೇರಿದರೆ ಕಾದಿದೆ ಅಪಾಯ, ಇಂದೇ ಬಿಟ್ಟುಬಿಡಿ!

ಮಲಬದ್ಧತೆ ಎನ್ನುವುದು ಕರುಳಿನ ಭಾಗಕ್ಕೆ ತುಂಬಾ ಹಾನಿ ಮಾಡುವ ಒಂದು ಲಕ್ಷಣ. ಈ ಮಲಬದ್ಧತೆ ಸೃಷ್ಟಿಯಾಗಲು ನಾವು ಮಾಡಿಕೊಳ್ಳುವ ಹಲವು ಅಭ್ಯಾಸಗಳು ಕೂಡ ಕಾರಣ. ಕೆಲವರಿಗೆ ವಿಚಿತ್ರ ಚಟವಿರುತ್ತೆ. ಚಹಾ ಕುಡಿಯುವಾಗ ಸದಾ ಸಿಗರೇಟ್​ ಸೇದಿ ಹೊಗೆ ಬಿಡುವ ಚಟ. ಇದು ತುಂಬಾ ಅಪಾಯಕಾರಿ ಎನ್ನುತ್ತಾರೆ ವೈದ್ಯರು. ಚಹಾ ಕುಡಿಯುವಾಗ ಸಿಗರೇಟ್ ಸೇದುವ ರೂಢಿಯಿದ್ದರೆ ಅದನ್ನು ಈಗಲೇ ಬಿಟ್ಟುಬಿಡಿ. ಇಲ್ಲವಾದಲ್ಲಿ ಮುಂದೆ ಮಲಬದ್ಧತೆ ಹಾಗೂ ಜೀರ್ಣಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ಬೆಳಗೆದ್ದು ಬಿಸಿ ಬಿಸಿ ಚಹಾದೊಂದಿಗೆ ಸಿಗರೇಟ್ ಸೇದುವುದು ನಿಮಗೆ ಆ ಕ್ಷಣಕ್ಕೆ ಹಿತವೆನಿಸಬಹುದು. ಆದ್ರೆ, ಅದು ಮಾಡುವ ಪರಿಣಾಮ ತುಂಬಾ ಗಂಭೀರ. ನಿಮ್ಮ ತಿಳುವಳಿಕೆಗೂ ಮೀರಿ ಪಚನಕ್ರಿಯೆಯ ವ್ಯವಸ್ಥೆಗೆ ಭಯಂಕರ ಘಾಸಿ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.

ಚಹಾ ಪ್ರಮುಖವಾಗಿ ಕಪ್ಪು ಚಹಾ ಟನ್ನಿನ್ಸ್ ಹಾಗೂ ಕಾಫಿನ್ ಎಂಬ ಅಂಶಗಳನ್ನು ಹೊಂದಿರುತ್ತವೆ. ಇದು ಕರುಳಿನ ಆರೋಗ್ಯದ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಬೀರಲಿದೆ. ಟೆನ್ನಿನ್ಸ್ ಕರುಳನ್ನು ಡ್ರೈ ಮಾಡುತ್ತವೆ. ಹೀಗಾಗಿ ಪಚನಕ್ರಿಯೆಯ ವೇಗದ ಮೇಲೆ ಇದು ಪರಿಣಾಂ ಬೀರುತ್ತದೆ. ಅದು ಮಾತ್ರವಲ್ಲ ವಿಪರೀತ ಕಫೇನ್​ ಸೇವಿಸುವುದರಿಂದ ನಿರ್ಜಲೀಕರಣ (ಡಿ ಹೈಡ್ರೇಷನ್)​ನಂತಹ ಸಮಸ್ಯೆಗಳು ಹುಟ್ಟುತ್ತವೆ. ಇದು ಮಲಬದ್ಧತೆಗೆ ಅತಿದೊಡ್ಡ ಕಾರಣವಾಗಿ ನಿಲ್ಲುತ್ತದೆ.

ಡಾ ಮನೀಶ್ ಮಿತ್ತಲ್ ಹೇಳುವ ಪ್ರಕಾರ ಡಿಹೈಡ್ರೇಷನ್ ದೇಹದಲ್ಲಿ ನೀರಿನ ಅಂಶವನ್ನು ಕಡಿಮೆ ಮಾಡುತ್ತದೆ. ಇದು ಮಲಬದ್ಧತೆಗೆ ಮತ್ತಷ್ಟು ಸಮಸ್ಯೆಯನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ. ಇದನ್ನು ತಪ್ಪಿಸಲು ಸಾಕಷ್ಟು ನೀರು ಕುಡಿಯಬೇಕು. ಆದ್ರೆ ಕೆಲವು ಜನರು ಹಾಲು ಮತ್ತು ಟೀಯನ್ನು ಕುಡಿಯುತ್ತಾರೆ. ಹಾಲು ಕೂಡ ನಮ್ಮ ಜೀರ್ಣಕ್ರಿಯೆಯ ವೇಗವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಒಂದು ಲೀಟರ್​ ಕೆಮಿಕಲ್​​ನಿಂದ 500 ಲೀಟರ್​ ಹಾಲು! ಬೆಳ್ಳಗೆ ಇರೋದೆಲ್ಲ ಹಾಲಲ್ಲ.. ಎಚ್ಚರ..!

ಇನ್ನೂ ಸಿಗರೇಟ್​ ವಿಚಾರಕ್ಕೆ ಬರುವುದಾದ್ರೆ, ಸಿಗರೇಟ್​ನಲ್ಲಿ ನಿಕೋಟಿನ್ ಅಂಶವಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇದು ಜೀರ್ಣಾಂಗವ್ಯೂಹದ ಕಾರ್ಯಕ್ಷಮತೆಯ ಮೇಲೆ ವಿಪರೀತ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಜೀರ್ಣಾಂಗವ್ಯೂಹದ ನರಗಳನ್ನು ಹಾಗೂ ಸ್ನಾಯುಗಳಿಗೆ ಹಾನಿ ಮಾಡುತ್ತಿದೆ. ಸಿಗರೇಟ್ ಸೇದುವುದು ರಕ್ತ ಪರಿಚಲನೆಯ ಮೇಲೆಯೂ ಕೂಡ ಪರಿಣಾಮ ಬೀರುವುದರಿಂದ ಗಂಭೀರ ಆರೋಗ್ಯದ ಸಮಸ್ಯೆಗಳು ಸೃಷ್ಟಿಯಾಗುತ್ತವೆ.

ಇದನ್ನೂ ಓದಿ:ಚಳಿಗಾಲದಲ್ಲಿ ಖಿನ್ನತೆ (Depression) ಆವರಿಸುವುದು ನಿಜವಾ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ.?

ಹೀಗಾಗಿ ಟೀ ಮತ್ತು ಸಿಗರೇಟ್ ಸೇವನೆ ಏಕಕಾಲಕ್ಕೆ ಆದಲ್ಲಿ ಮತ್ತು ಅದು ನಿತ್ಯ ಅಭ್ಯಾಸವಾಗಿ ಹೋದಲ್ಲಿ ಪಚನಕ್ರಿಯೆಯ ಮೇಲೆ ಭಾರೀ ಪರಿಣಾಮವನ್ನುಂಟು ಮಾಡುತ್ತದೆ. ಎರಡು ಅಭ್ಯಾಸಗಳು ದೇಹದಲ್ಲಿ ಡಿ ಹೈಡ್ರೇಷನ್ ಸೃಷ್ಟಿಸುತ್ತವೆ. ಒಂದು ಕಪ್ ಟೀ ಜೊತೆ ಒಂದು ಸಿಗರೇಟ್ ನಿಮಗೆ ಆ ಕ್ಷಣಕ್ಕೆ ಆಹಾ ಎನಿಸುವ ನೆಮ್ಮದಿಯನ್ನು ತರಬಹುದು. ಆದ್ರೆ ಅದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ. ಅದರಲ್ಲೂ ಪ್ರಮುಖವಾಗಿ ಜೀರ್ಣಕ್ರಿಯೆಯ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಇದರಿಂದಾಗಿ ಪಿತ್ತ, ವಾಂತಿ ಬಂದಂತೆ ಆಗುವುದು, ಊಟ ಸೇರದೇ ಹೋಗುವಂತಹ ಲಕ್ಷಣಳು ನಮ್ಮಲ್ಲಿ ಕಾಣಲು ಶುರುವಾಗುತ್ತವೆ. ಒಂದು ವೇಳೆ ಅಂತಹ ಲಕ್ಷಣಗಳು ಕಂಡ ಬಂದಲ್ಲಿ ಕೂಡಲೇ ಸಿಗರೇಟ್ ಸೇವನೆಯನ್ನು ನಿಲ್ಲಿಸಬೇಕು. ಫೈಬರ್ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸಲು ಶುರು ಮಾಡಬೇಕು. ನಿತ್ಯ ಒಂದು ಅರ್ಧಗಂಟೆಗಳ ಕಾಲವಾದರೂ ನೀವು ವ್ಯಾಯಾಮ ಮಾಡಬೇಕು.ಇದೆಲ್ಲ ಮಾಡಿಯೂ ಸಮಸ್ಯೆಗಳು ಹಾಗೆ ಉಳಿದಲ್ಲಿ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಬಹುದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment