0 ರನ್​, 2 ವಿಕೆಟ್​​..! ಗೆದ್ದೇ ಬಿಟ್ವಿ ಅನ್ನೋ ಆಂಗ್ಲರ ಸೊಕ್ಕನ್ನ ಗಿಲ್ ಮುರಿದ್ದೇ ರೋಚಕ..

author-image
Ganesh
Updated On
0 ರನ್​, 2 ವಿಕೆಟ್​​..! ಗೆದ್ದೇ ಬಿಟ್ವಿ ಅನ್ನೋ ಆಂಗ್ಲರ ಸೊಕ್ಕನ್ನ ಗಿಲ್ ಮುರಿದ್ದೇ ರೋಚಕ..
Advertisment
  • ಶುಭ್​ಮನ್​ ತಾಳ್ಮೆಯ ಉತ್ತರಕ್ಕೆ ಆಂಗ್ಲರು ಸುಸ್ತು
  • ಶತಕದ ಸರದಾರನಿಂದ ಮತ್ತೊಂದು ಸೆಂಚುರಿ ಬೇಟೆ
  • ಪ್ರವಾಸದಲ್ಲಿ 4ನೇ ಶತಕ ಸಿಡಿಸಿದ ಶುಭ್​ಮನ್​ ಗಿಲ್​

ಮ್ಯಾಂಚೆಸ್ಟರ್​ ಟೆಸ್ಟ್​ ಈಗ ಮುಗಿದ ಅಧ್ಯಾಯ. ಸೋಲಿನ ಸಂಕಷ್ಟಕ್ಕೆ ಸಿಲುಕಿದ್ದ ಟೀಮ್​ ಇಂಡಿಯಾ ಕೆಚ್ಚೆದೆಯ ಹೋರಾಟ ನಡೆಸಿ ಡ್ರಾ ಸಾಧಿಸಿದೆ. ಗೆದ್ದೇ ಬಿಟ್ವಿ ಅನ್ನೋ ಆಂಗ್ಲರ ಸೊಕ್ಕನ್ನ ಹುಟ್ಟಡಗಿಸಿ, ಸರಣಿಯನ್ನ ಜೀವಂತವಾಗಿಸಿಕೊಂಡಿದೆ. ಇಂಗ್ಲೆಂಡ್​​ನ ಬಲಿಷ್ಠ ಬೌಲಿಂಗ್​ ದಾಳಿಯನ್ನ ಹಿಮ್ಮೆಟ್ಟಿಸಿ ಸಾಧಿಸಿದ ಈ ಡ್ರಾ ಗೆಲುವಿಗಿಂತ ದೊಡ್ಡದು. ಈ ಕೆಚ್ಚೆದೆಯ ಹೋರಾಟಕ್ಕೆ ಮುನ್ನುಡಿ ಬರೆದಿದ್ದು ಕ್ಯಾಪ್ಟನ್​ ಶುಭ್​ಮನ್​ ಗಿಲ್​.

0 ರನ್​, 2 ವಿಕೆಟ್​​.. ಮೊದಲ ಓವರ್​​ನಲ್ಲೇ ಸಂಕಷ್ಟ

ಟೀಮ್​ ಇಂಡಿಯಾ ಬೌಲರ್​​ಗಳ ಕಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ ಗಳಿಸಿದ್ದು ಬರೋಬ್ಬರಿ 669 ರನ್​​. 311 ರನ್​​​ಗಳ ಹಿನ್ನಡೆಯೊಂದಿಗೆ ಹೋರಾಟಕ್ಕಿಳಿದ ಭಾರತ ತಂಡ ಮೊದಲ ಓವರ್​ನಲ್ಲೇ ಹಿನ್ನಡೆ ಅನುಭವಿಸಿತು. ಯಶಸ್ವಿ ಜೈಸ್ವಾಲ್​​, ಸಾಯಿ ಸುದರ್ಶನ್​ ಬ್ಯಾಕ್​ ಟು ಬ್ಯಾಕ್​​ ಪೆವಿಲಿಯನ್​ ಸೇರಿದ್ರು. ಟೀಮ್​ ಇಂಡಿಯಾದ ಅಕೌಂಟ್​ ಇನ್ನೂ ಓಪನ್ನೇ ಆಗಿರಲಿಲ್ಲ ಆಗಲೇ ಇಬ್ಬರು ಪ್ರಮುಖ ಬ್ಯಾಟರ್ಸ್​ ಪೆವಿಲಿಯನ್​ ಸೇರಿದ್ರು.

ಇದನ್ನೂ ಓದಿ: ಕೆಟ್ಟದಾಗಿ ಕಮೆಂಟ್ ಮಾಡಿದವ್ರಿಗೆ ಪುಕಪುಕ.. ರಮ್ಯಾ ಒಬ್ಬರಿಂದಲೇ ಅಲ್ಲ, ಬಿತ್ತು ಮತ್ತೊಂದು ಕೇಸ್..!

publive-image

ಟೀಮ್​ ಇಂಡಿಯಾಗೆ ಸಂಕಷ್ಟಹರ’ನಾದ ಗಿಲ್

ಶೂನ್ಯಕ್ಕೆ 2 ವಿಕೆಟ್​ ಕಳೆದಕೊಂಡ ಬೆನ್ನಲ್ಲೇ ಟೀಮ್​ ಇಂಡಿಯಾ ಹೀನಾಯ ಸೋಲಿಗೆ ಶರಣಾಗುತ್ತೆ ಅನ್ನೋ ನಿರ್ಧಾರ ಕ್ರಿಕೆಟ್​ ಲೋಕ ಮಾಡಿತ್ತು. ಅದನ್ನ ಸುಳ್ಳಾಗಿಸಿದ್ರು ಕ್ಯಾಪ್ಟನ್​ ಶುಭ್​ಮನ್​ ಗಿಲ್​. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗಿಲ್​​ ಓಲ್ಡ್​ ಟ್ರಾಫರ್ಡ್​ ಅಂಗಳದಲ್ಲಿ ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ್ರು.

​ತಾಳ್ಮೆಯ ಉತ್ತರಕ್ಕೆ ಆಂಗ್ಲರು ಸುಸ್ತು

ತಂಡ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಟೀಮ್​ ಇಂಡಿಯಾ ಪಾಲಿಗೆ ಸಂಕಷ್ಟ ಹರನಾಗಿದ್ದು ನಾಯಕ ಶುಭ್​​ಮನ್​ ಗಿಲ್​. ನಾಯಕನಾಗಿ ಜವಾಬ್ದಾರಿ ಮರೆದ ಶುಭ್​ಮನ್​, ಇಡೀ ತಂಡಕ್ಕೆ ಬ್ಯಾಟಿಂಗ್​ ಪಾಠ ಮಾಡಿದ್ರು. ಇಂಗ್ಲೆಂಡ್​​ನ ಬಲಿಷ್ಠ ಬೌಲಿಂಗ್​ ದಾಳಿಗೆ ತಾಳ್ಮೆಯ ಆಟದಿಂದಲೇ ಆನ್ಸರ್​ ಕೊಟ್ರು.

ಶತಕದ ಸರದಾರನಿಂದ ಮತ್ತೊಂದು ಸೆಂಚುರಿ ಬೇಟೆ

4ನೇ ದಿನದಾಟದಲ್ಲಿ ಕನ್ನಡಿಗ ರಾಹುಲ್​ ಜೊತೆಗೂಡಿ ಅದ್ಭುತ ಜೊತೆಯಾಟವಾಡಿದ ಗಿಲ್​, ದಿನದ ಅಂತ್ಯಕ್ಕೆ 78 ರನ್​ಗಳಿಸಿದ್ರು. ಅಂತಿಮ ದಿನದಾಟದಲ್ಲೂ ಅದೇ ಹೋರಾಟವನ್ನ ಮುಂದುವರೆಸಿದ ಗಿಲ್​, 228 ಎಸೆತಗಳಲ್ಲಿ ಶತಕ ಸಿಡಿಸಿದ್ರು. ಈ ಪ್ರವಾಸದಲ್ಲಿ ಶುಭ್​ಮನ್​ ಸಿಡಿಸಿದ 4ನೇ ಶತಕವಿದು.

ಇದನ್ನೂ ಓದಿ: ರಮ್ಯಾ ಪರ ಒಳ್ಳೆ ಹುಡುಗ ಬ್ಯಾಟ್; ದರ್ಶನ್ ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು..?

publive-image

ಮೊದಲ ಪ್ರವಾಸದಲ್ಲೇ ಟೀಕೆಗಳಿಗೆ ನಾಯಕನ ಉತ್ತರ

ಈ ಇಂಗ್ಲೆಂಡ್​ ಪ್ರವಾಸಕ್ಕೂ ಮುನ್ನ ವಿದೇಶದಲ್ಲಿ ಗಿಲ್ ಕಳಪೆ ದಾಖಲೆ ಹೊಂದಿದ್ರು. ಹೀಗಾಗಿ ನಾಯಕತ್ವ ನೀಡಿದಾಗ ಟೀಕೆಗಳು ಎದ್ದಿದ್ವು. ಆ ಟೀಕೆಗಳಿಗೆ ಗಿಲ್​ ಬ್ಯಾಟ್​ನಿಂದ ಆನ್ಸರ್​ ಕೊಟ್ಟಿದ್ದಾರೆ. 4 ಟೆಸ್ಟ್​ ಪಂದ್ಯಗಳಲ್ಲೇ 700ಕ್ಕೂ ಅಧಿಕ ರನ್​ಗಳಿಸಿ ಸಾಮರ್ಥ್ಯ ನಿರೂಪಿಸಿದ್ದಾರೆ. ಮ್ಯಾಂಚೆಸ್ಟರ್​​ನಲ್ಲಿ ಶತಕ ಸಿಡಿಸಿ ಹಲವು ದಾಖಲೆಗಳನ್ನೂ ತನ್ನದಾಗಿಸಿಕೊಂಡಿದ್ದಾರೆ.

ಗಿಲ್​ ದಾಖಲೆಯ ಆಟ

  • ನಾಯಕನಾಗಿ ಮೊದಲ ಸರಣಿಯಲ್ಲೇ 4 ಶತಕ ಸಿಡಿಸಿದ ಮೊದಲಿಗ
  • 47 ವರ್ಷದ ಬಳಿಕ ವಿದೇಶದ 1 ಸರಣಿಯಲ್ಲಿ 4 ಶತಕ ಸಿಡಿಸಿದ ನಾಯಕ
  • ಒಂದು ಟೆಸ್ಟ್​ ಸರಣಿಯಲ್ಲಿ 4 ಶತಕ ಸಿಡಿಸಿದ ವಿಶ್ವದ 3ನೇ ನಾಯಕ
  • ಒಂದು ಟೆಸ್ಟ್​ ಸರಣಿಯಲ್ಲಿ 4 ಶತಕ ಸಿಡಿಸಿದ ಭಾರತದ 3ನೇ ಬ್ಯಾಟರ್​
  • ಇಂಗ್ಲೆಂಡ್​​ನಲ್ಲಿ 1 ಸರಣಿಯಲ್ಲಿ ಹೆಚ್ಚು ರನ್​ಗಳಿಸಿದ ಭಾರತದ 2ನೇ ಬ್ಯಾಟರ್​

ನಾಯಕತ್ವದ ಜವಾಬ್ದಾರಿ ಹೊತ್ತ ಮೊದಲ ಟೆಸ್ಟ್​ ಸರಣಿಯಲ್ಲೇ ಗಿಲ್​ ಜಬರ್ದಸ್ತ್​ ಪರ್ಫಾಮೆನ್ಸ್​ ನೀಡಿದ್ದಾರೆ. ಈ ಮೂಲಕ ನಾಯಕತ್ವ ನನ್ನ ಬ್ಯಾಟಿಂಗ್​​ ಮೇಲೆ ಯಾವುದೇ ಒತ್ತಡ ಬೀರಲ್ಲ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಕೆಚ್ಚೆದೆಯ ಹೋರಾಟದಿಂದ ತನ್ನ ಬ್ಯಾಟಿಂಗ್​ ಸಾಮರ್ಥ್ಯ ಏನು ಅನ್ನೋದನ್ನೂ ನಿರೂಪಿಸಿದ್ದಾರೆ. ಇದೇ ಆಟವನ್ನ ಗಿಲ್​ ಮುಂದುವರೆಸಲಿ.

ಇದನ್ನೂ ಓದಿ: ಕಾಲಾಯ ತಸ್ಮೈ ನಮಃ..! ಡಿ ಬಾಸ್ ಫ್ಯಾನ್ಸ್​ ಪೇಜ್​ನಿಂದ ಅಭಿಮಾನಿಗಳಿಗೆ ಎಚ್ಚರಿಕೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment