newsfirstkannada.com

ಸ್ವಲ್ಪ ಯಾಮಾರಿದ್ರೂ ಡಿಜಿಟಲ್ ಅರೆಸ್ಟ್ ಆಗ್ತೀರಿ ಹುಷಾರ್​.. ನಿಮ್ಮ ಮೆದುಳು ಕೂಡ ಹೈಜಾಕ್ ಆಗುತ್ತೆ ಜೋಕೆ..!

Share :

Published August 13, 2024 at 6:12pm

Update August 15, 2024 at 6:59am

    ನಿಮಗೆ ‘ಡಿಜಿಟಲ್ ಅರೆಸ್ಟ್’ ಅಂದರೆ ಏನು ಗೊತ್ತಾ..?

    ಸೈಬರ್ ವಂಚನೆ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು ಈ ವಿಚಾರ

    ಕಾಲ ಬದಲಾಗಿದೆ, ಕಳ್ಳರ ಕರಾಮತು ಕೂಡ ಅಪ್​​ಡೇಟ್ ಆಗಿದೆ

ಹೆಸರು ಪ್ರಬೀರ್​. ಛತ್ತೀಸ್​ಗಢದ ರಾಯ್​ಗಢ ನಿವಾಸಿ. ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿದ್ದ ಅವರಿಗೆ ಶಾಕ್ ಒಂದು ಕಾದಿತ್ತು. ವಾಟ್ಸ್​​ಆ್ಯಪ್ ಮೂಲಕ ಅಪರಿಚಿತ ನಂಬರ್​ನಿಂದ ಕರೆಯೊಂದು ಬರುತ್ತದೆ. ಯಾರು ಅಂತಾ ಅನುಮಾನಗೊಂಡ ಪ್ರಬೀರ್.. ಎತ್ತಬೇಕೋ? ಬೇಡವೋ? ಅನ್ನೋ ಗೊಂದಲದಲ್ಲಿ ಇರುವಾಗಲೇ ಎರಡು ಬಾರಿ ಕರೆ ಬಂದು ಕಟ್ ಆಗಿತ್ತು. ಮೂರನೇ ಬಾರಿಗೆ ರಿಂಗ್ ಆದಾಗ ಹಲೋ ಎಂದಿದ್ದರಷ್ಟೇ! ಆದರೆ, ಆ ಕಡೆಯಿದ ಯಾವುದೇ ವ್ಯಕ್ತಿಯ ಮುಖ ಕಾಣಿಸಲಿಲ್ಲ. ಬ್ಲಾಂಕ್​​ ತೋರಿಸುತ್ತಿತ್ತು. ಮುಂದೆ ಆಗಿದ್ದು ನೀವು ಊಹೆ ಕೂಡ ಮಾಡಿರಲಿಕ್ಕಿಲ್ಲ!

ಆ ಕಪ್ಪು ಜಾಗದಲ್ಲಿ ಮಹಿಳೆಯ ನಗ್ನ ಫೋಟೋ..!
ಇದ್ದಕ್ಕಿದ್ದ ಹಾಗೇ ಫೋನ್ ಕಟ್ ಆಗುತ್ತದೆ. ಕೆಲವೇ ಸೆಕೆಂಡ್​ಗಳಲ್ಲಿ ಅವರು ನಿರೀಕ್ಷೆಯೂ ಮಾಡಿರದ ಆಘಾತವೊಂದು ನಡೆದುಬಿಡುತ್ತದೆ. ವಾಟ್ಸ್​ಆ್ಯಪ್ ಕಟ್ ಆದ ಕೆಲವೇ ನಿಮಿಷಗಳಲ್ಲಿ ಪ್ರಬೀರ್​ ಮೊಬೈಲ್​ಗೆ ಒಂದು ಫೋಟೋ ಬರುತ್ತದೆ. ಅದು, ಎಡಿಟೆಡ್ ಸ್ಕ್ರೀನ್​ಶಾಟ್. ಆಗಷ್ಟೇ ರಿಸೀವ್ ಮಾಡಿದ್ದ ಕರೆಯ ಫೋಟೋ ಅದಾಗಿತ್ತು. ಕರೆ ಸ್ವೀಕರಿಸಿದಾಗ ಬ್ಲಾಂಕ್ ಇದ್ದ ಜಾಗದಲ್ಲಿ ಮಹಿಳೆಯ ನಗ್ನ ಫೋಟೋ ಎಡಿಟ್ ಮಾಡಿ ಕಳುಹಿಸಿದ್ದರು. ಈ ಫೋಟೋ ಶೇರ್ ಮಾಡಿದ್ದ ಕಿಡಿಗೇಡಿಗಳು 15 ಲಕ್ಷ ರೂಪಾಯಿ ನೀಡಿ. ಇಲ್ಲದಿದ್ದರೆ ಅದನ್ನು ಎಲ್ಲಾ ಕಡೆ ಶೇರ್ ಮಾಡೋದಾಗಿ ಹೆದರಿಸಿದ್ದರು. ಆ ಮೂಲಕ ಪ್ರಬೀರ್ ಸೈಬರ್ ವಂಚನೆಗೆ ಒಳಗಾಗಿದ್ದರು.

ಇದನ್ನೂ ಓದಿ:‘ಅಪ್ಪ, ಅಮ್ಮ ಕ್ಯಾನ್ಸರ್​ನಿಂದ ತೀರಿ ಹೋದರು..’ ಕುಗ್ಗಲಿಲ್ಲ ಛಲ ಬಿಡದೇ IAS ಅಧಿಕಾರಿಯಾದ ಛಲಗಾರ್ತಿ..!

ಕಳ್ಳರೂ ಅಪ್​ಡೇಟ್ ಆಗವ್ರೆ..!

ಜನರ ವಂಚಿಸಿ ಲಾಭ ಪಡೆಯೋದು ಮನುಷ್ಯ ನಾಗರಿಕತೆಯಷ್ಟೇ ಹಳೆಯದು. ಇಂದು ಡಿಜಿಟಲ್ ಯುಗ! ಮೋಸ ಮಾಡುವ ದಾರಿಗಳು ಕೂಡ ಬದಲಾಗಿವೆ. ಅಷ್ಟೇ ಅಪ್​ಡೇಟ್​ ಆಗಿವೆ. ಇಂದು ಜನ ವಾಸಿಸುವ ಸ್ಥಳದಲ್ಲಿಯೇ ಮೋಸ ಹೋಗ್ತಾರೆ. ಅಂದು ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ಜನ ವಾಸಿಸುತ್ತಿದ್ದರು. ಆದರೆ ಇಂದು ಕೆಲವರು ಮೊಬೈಲ್​​ನಲ್ಲೇ ವಾಸಿಸುತ್ತಿದ್ದಾರೆ. ಅಂದರೆ ಅಷ್ಟರ ಮಟ್ಟಿಗೆ ಮೊಬೈಲ್ ಬದುಕಿನ ಒಂದು ಭಾಗವಾಗಿದೆ. ಹೀಗಾಗಿ ಸೈಬರ್ ವಂಚನೆ ಬಗ್ಗೆ ಹುಷಾರಾಗಿರಬೇಕು ಎಂದು ದೆಹಲಿ ಸೈಬರ್ ಅಧಿಕಾರಿ ಹೇಮಂತ್ ತಿವಾರಿ ಎಚ್ಚರಿಕೆ ನೀಡುತ್ತಿದ್ದಾರೆ. ಸೈಬರ್​ ವಂಚಕರು ನಮ್ಮನ್ನು ಹೆಂಗೆಲ್ಲ ಮೋಸ ಮಾಡ್ತಿದ್ದಾರೆ ಅನ್ನೋ ವಿವರವನ್ನು ತಜ್ಞರು ವಿವರಿಸಿದ್ದಾರೆ.

ಡಿಜಿಟಲ್ ಅರೆಸ್ಟ್​..!

ತಂತ್ರಜ್ಞಾನಗಳು ಅಪ್​ಡೇಟ್ ಆದಂತೆ ಕಳ್ಳರ ಕರಾಮತುಗಳು ಕೂಡ ಅಪ್​​ಡೇಟ್​ ಆಗಿವೆ. ‘ಡಿಜಿಟಲ್ ಅರೆಸ್ಟ್​’ ಅನ್ನೋ ಗುಮ್ಮ ಎಲ್ಲರನ್ನೂ ಕಾಡಲು ಶುರುಮಾಡಿದೆ. ಆದರೆ ಕಾನೂನಿನ ಪರಿಭಾಷೆಯಲ್ಲಿ ಈ ಪದವೇ ಇಲ್ಲ. ಇಲ್ಲಿ ಸೈಬರ್ ವಂಚಕರು ನಿಮ್ಮನ್ನು ‘ಡಿಜಿಟಲ್ ಅರೆಸ್ಟ್’ ಮಾಡುತ್ತಾರೆ. ಹಾಗಾಗಿ ನಾವು ಜಾಗರೂಕರಾಗಿರಬೇಕು. ಅಂದರೆ, ನಿಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿಕೊಳ್ಳುವುದು. ನಂತರ ಆನ್​ಲೈನ್​ ಮೂಲಕ ನಿಮ್ಮನ್ನ ಟ್ರಾಪ್ ಮಾಡೋದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ವಿಚಾರವನ್ನು ಬಹಿರಂಗ ಮಾಡ್ತೀನಿ. ಹಾಗೆಲ್ಲ ಆಗಬಾರದು ಅಂದರೆ ಹಣ ನೀಡಿ ಅಂತಾ ಬ್ಲ್ಯಾಕ್ ಮೇಲ್ ಮಾಡುವುದು. ಹಣ ನೀಡಲ್ಲ ಎಂದಾಗ ಬೇರೆ ರೀತಿಯಲ್ಲಿ ಬೆದರಿಕೆ ಹಾಕೋದು. ಕೊನೆಗೆ ಹಣ ವರ್ಗಾವಣೆ ಆಗೋವರೆಗೂ ನೀವು ಆನ್​ಲೈನ್​​​ನಲ್ಲೇ ಇರುವಂತೆ ನಿಮ್ಮನ್ನು ಹೆದರಿಸಿ, ಬೆದರಿಸಿ ಟ್ರ್ಯಾಪ್ ಮಾಡಿಟ್ಟುಕೊಂಡಿರುತ್ತಾರೆ. ಇದೇ ಡಿಜಿಟಲ್ ಅರೆಸ್ಟ್!

ಇದನ್ನೂ ಓದಿ:ಬೂಮ್ರಾ ಮೇಲೆ ಪ್ರೀತಿಯ ಬಾಣ ಎಸೆದ ಬಾಲಿವುಡ್ ಬ್ಯೂಟಿ.. ಯಾರ್ಕರ್ ಕಿಂಗ್​ಗೆ ಈಕೆ ಬೋಲ್ಡ್ ಆಗಿದ್ದೇಗೆ..?

ಬ್ರೈನ್ ಹೈಜಾಕ್..!

ಬ್ರೈನ್ ಹೈಜಾಕ್​ಗೆ ಸಂಬಂಧಿಸಿ 2024ರಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಡಿಜಿಟಲ್ ಅರೆಸ್ಟ್​ ಮುಂದುವರಿದ ಭಾಗ ಇದಾಗಿದೆ. ಡಿಜಿಟಲ್ ಅರೆಸ್ಟ್​ ಮೂಲಕ ಬ್ರೈನ್ ಹೈಜಾಕ್ ತಿಂಗಳುಗಳವರೆಗೆ ನಡೆಯುತ್ತದೆ. ತಮ್ಮನ್ನು ತನಿಖಾ ಅಧಿಕಾರಿಗಳು (ಸಿಬಿಐ, ಸಿಐಡಿ, ಇಡಿ) ಎಂದು ಬಿಂಬಿಸಿಕೊಳ್ಳುವ ಸೈಬರು ಖದೀಮರು, ನಿಮ್ಮ ಬ್ಯಾಂಕ್ ವಿವರ, ನಿಮ್ಮ ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿ ಪಡೆದು ದೋಚಲು ನಿಮ್ಮನ್ನು ತುಂಬಾ ದಿನಗಳವರೆಗೆ ಕಾಡುತ್ತಾರೆ. ಆನ್​ಲೈನ್​​ ಮೂಲಕ ಆಗಾಗ ಕರೆ ಮಾಡಿ, ನಿಜವಾಗಿಯೂ ಇವರು ಅಧಿಕಾರಿಗಳೇ ಅನ್ನೋ ರೀತಿಯಲ್ಲಿ ನಂಬಿಸುತ್ತಾರೆ. ಕೊನೆಗೆ ಒಂದು ದಿನ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡು, ನಿಮ್ಮ ಕೈಯಾರೆ ಹಣ ವರ್ಗಾವಣೆ ಮಾಡಿಸಿಕೊಂಡು ನಾಪತ್ತೆ ಆಗುತ್ತಾರೆ.

‘ಡಿಜಿಟಲ್ ಬಂಧನ’ಕ್ಕಾಗಿ ನಕಲಿ ಠಾಣೆ..!

ನಿಮ್ಮ ಬಳಿ ಹಣ ಇದೆ ಎಂದು ಗೊತ್ತಾದರೆ ಸೈಬರ್ ಖದೀಮರು ಪಕ್ಕಾ ಪ್ಲಾನ್ ಮಾಡ್ತಾರೆ. ನಂಬಿಸಿ ಕುತ್ತಿಗೆ ಕೂಯ್ಯಲು ನಕಲಿ ಕಚೇರಿಗಳನ್ನೇ ಸೃಷ್ಟಿಸಿಬಿಡುತ್ತಾರೆ. ಅಂತೆಯೇ ದೆಹಲಿ ಮೂಲದ 36 ವರ್ಷದ ಮಹಿಳೆಯನ್ನು ಬರೋಬ್ಬರಿ 13 ಗಂಟೆಗಳ ಕಾಲ ವೀಡಿಯೊ ಕರೆಯಲ್ಲಿ ಹಿಡಿದಿಟ್ಟುಕೊಂಡಿದ್ದರು. ಕೊನೆಗೆ ಆಕೆ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:ನೀರಜ್ ಚೋಪ್ರಾ ಕೋಟಿ ಕೋಟಿ ಆಸ್ತಿ ಒಡೆಯ.. ಚಿನ್ನ ಗೆದ್ದ ನದೀಮ್ ಬಳಿ ಎಷ್ಟು ಕೋಟಿ ಆಸ್ತಿ ಇದೆ..?

ಅದೇ ರೀತಿ ಇನ್ನೊಂದು ಕೇಸ್​ನಲ್ಲಿ ದೆಹಲಿಯ ಸಿಆರ್​ ಪಾರ್ಕ್​ನಿಂದ ಕೃಷ್ಣ ದಾಸ್ ಗುಪ್ತಾ ಅನ್ನೋರಿಗೆ ಕರೆ ಮಾಡಿ ಮೋಸ ಮಾಡಲಾಗಿದೆ. ಇವರಿಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಧ್ವನಿಮುದ್ರಿತ ಫೇಕ್ ಸಂದೇಶದೊಂದಿಗೆ ಬಲೆ ಬೀಸಲಾಗಿತ್ತು. ನೀವು ಅಶ್ಲೀಲ ಮೆಸೇಜ್ ಹಂಚಿಕೊಳ್ಳೋದ್ರಿಂದ ನಿಮ್ಮ ನಂಬರ್ ಬ್ಲಾಕ್ ಮಾಡ್ತೇವೆ ಎಂದು ಕರೆ ಮಾಡಿದ್ದರು. ಇಲ್ಲಿಂದ ಆರಂಭವಾಗಿದ್ದ ಖದೀಮರ ಮೋಸದ ಜಾಲ.. ನಕಲಿ ಎಫ್​ಐಆರ್, ನಕಲಿ ಸಿಬಿಐ ಅಧಿಕಾರಿಗಳು ಸೃಷ್ಟಿಯಾಗಿದ್ದವು. ಸಿಬಿಐ ಅಧಿಕಾರಿ ಎಂದು ಹೇಳಿ ಕರೆ ಮಾಡಿದ್ದ ಕಿಡಿಗೇಡಿಗಳು ಬರೋಬ್ಬರೋರಿ 13 ಗಂಟೆಗಳ ಕಾಲ ನಕಲಿ ವಿಚಾರಣೆ ನಡೆದಿದೆ. 13 ಗಂಟೆಗಳ ಕಾಲ ನಡೆದ ಸುದೀರ್ಘ ವಿಡಿಯೋ ಕಾನ್ಫರೆನ್ಸ್ ಮುಗಿದಾಗ ಕೃಷ್ಣ 83 ಲಕ್ಷ ರೂಪಾಯಿ ಕಳೆದುಕೊಂಡಿದ್ದರು!

ದೇಶದಲ್ಲಿ ಹೇಗಿದೆ ಕ್ರೈ ಕೇಸ್..?

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ ಮಾಹಿತಿ ಪ್ರಕಾರ, 2019ರಲ್ಲಿ 26,049 ಪ್ರಕರಣಗಳು ದಾಖಲಾಗಿದ್ದವು. 2020ರಲ್ಲಿ 2,57,777 ಪ್ರಕರಣಗಳು ದಾಖಲಾಗಿದ್ದವು. ಅಂದರೆ 2019-202ರ ನಡುವೆ ಪ್ರಕರಣಗಳ ಸಂಖ್ಯೆ ಶೇಕಡಾ 891.0 ರಷ್ಟಕ್ಕೆ ಏರಿಕೆ ಆಗಿದ್ದವು. 2021ರಲ್ಲಿ ಒಟ್ಟು 4,52, 414 ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ 9,66,790 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 15,56,218 ಕೇಸ್​ಗಳು ದಾಖಲಾಗಿವೆ. 2024ರಲ್ಲಿ (ಕೇವಲ 4 ತಿಂಗಳಲ್ಲಿ) 7,40,957 ಸೈಬರ್ ಪ್ರಕರಣಗಳು ದಾಖಲಾಗಿವೆ.

ಮೋಸ ಮಾಡ್ತಿರೋದು ಯಾರು?

ದೇಶದ ಬಹುತೇಕ ಭಾಗಗಳಲ್ಲಿ ಸೈಬರ್ ವಂಚನೆಗಳು ನಡೆಯುತ್ತಿವೆ ಅಂತಾ ತಜ್ಞರು ನಂಬಿದ್ದಾರೆ. ಹರಿಯಾಣದ ನುಹ್ ಮತ್ತು ಮೇವಾತ್​​​ನಲ್ಲಿ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳು ದಾಖಲಾಗಿವೆ. ಭಾರತದ ಆಗ್ನೇಯ ಭಾಗಗಳಿಗೆ ಉದ್ಯೋಗ ಅರಸಿ ಬಂದು ಮೋಸ ಮಾಡಲಾಗುತ್ತಿದೆ. ನಕಲಿ ತನಿಕಾಧಿಕಾರಿಗಳಾಗಿ ವಂಚಿಸುತ್ತಿರುವ ಇವರು, ಹಲವು ಪ್ರಕರಣಗಳಲ್ಲಿ ಬಳಕೆ ಮಾಡಿರುವ ಸಿಮ್​​ ಕಾರ್ಡ್​​ಗಳ ಬಗ್ಗೆ ಮಾಹಿತಿಯೇ ಸಿಗುತ್ತಿಲ್ಲ. ಹೀಗಾಗಿ ಸೈಬರ್ ಸ್ಕ್ಯಾಮರ್​​ಗಳನ್ನು ಪತ್ತೆ ಹಚ್ಚೋದೇ ದೊಡ್ಡ ಸಮಸ್ಯೆ ಆಗಿದೆ ಎಂದು ಡಿಸಿಪಿ ತಿವಾರಿ ಹೇಳಿದ್ದಾರೆ.

ಮೋಸ ಹೋಗೋರು ಯಾರು?

ನಿರ್ಧಿಷ್ಟ ಪ್ರೊಫೈಲ್​ಗಳನ್ನು ಮಾತ್ರ ವಂಚಕರು ಟಾರ್ಗೆಟ್ ಮಾಡ್ತಾರೆ. ಅವರಲ್ಲಿ ಹೆಚ್ಚಾಗಿ ವಯಸ್ಸಾದವರೇ ಹೆಚ್ಚು ಮೋಸ ಹೋಗುತ್ತಿದ್ದಾರೆ. ಆರ್ಥಿಕವಾಗಿ ಮೇಲ್ಮಧ್ಯಮ ವರ್ಗದವರು. ವಿದ್ಯಾವಂತರು ಹಾಗೂ 50 ರಿಂದ 60 ವರ್ಷದೊಳಗಿನವರು ಮೋಸ ಹೋಗ್ತಿದ್ದಾರೆ.

ಇದನ್ನೂ ಓದಿ:ದ್ರಾವಿಡ್ ಯಾವತ್ತೂ ಇವರನ್ನು ಬೇಸರಗೊಳಿಸಿಲ್ಲ.. ಮತ್ತೊಮ್ಮೆ ಹೃದಯಗೆದ್ದ ಸಿಂಪಲ್​ ಮ್ಯಾನ್..!

ಮೇಲಿನ ಪ್ರಬೀರ್ ಪ್ರಕರಣದಲ್ಲಿ ಮಾಧ್ಯಮವೊಂದಕ್ಕೆ ಅವರೇ ಹೇಳಿರುವಂತೆ.. ಅವರಿಗೆ (ಪ್ರಬೀರ್) ಮಾತ್ರವಲ್ಲ, ಕುಟುಂಬದ ಸದಸ್ಯರಿಗೂ ಅಪಾಯ ಮಾಡುವ ಬೆದರಿಕೆ ಹಾಕಿದ್ದರು. ಪ್ರಬೀರ್ ಕುಟುಂಬ ದೆಹಲಿಯಲ್ಲಿ ವಾಸವಿತ್ತು. ಈ ವಿಚಾರವನ್ನು ವಂಚಕರು ತಿಳಿದುಕೊಂಡಿದ್ದರು. ಇದರಿಂದಾಗಿ ನಾನು ಹಣವನ್ನು ವಂಚಕರಿಗೆ ಕಳುಹಿಸಲು ನಿರ್ಧರಿಸಿದ್ದೆ. ಅವರ ಬೇಡಿಕೆಯಂತೆ ನನ್ನ ಕುಟುಂಬದ ಸದಸ್ಯರ ಸುರಕ್ಷತೆಗಾಗಿ 15 ಲಕ್ಷ ರೂಪಾಯಿ ನೀಡಲು ಒಪ್ಪಿಕೊಂಡೆ ಎಂದಿದ್ದಾರೆ. ವಂಚಕರು ಟಾರ್ಗೆಟ್ ಮಾಡುವ ವ್ಯಕ್ತಿಯ ಕುಲ, ಗೋತ್ರವನ್ನು ತಿಳಿದುಕೊಂಡೇ ಪಕ್ಕಾ ಪ್ಲಾನ್ ಮಾಡಿ ಮೋಸ ಮಾಡ್ತಿದ್ದಾರೆ ಅನ್ನೋದು ತಜ್ಞರ ಅನುಭವದ ಮಾತಾಗಿದೆ.

ಬಚಾವ್ ಆಗೋದೇಗೆ..?
ಸೈಬರ್ ಕ್ರೈಂನ ಡಿಜಿಟಲ್ ಬಂಧನ ವಿರುದ್ಧ ನಾವು ತುರ್ತಾಗಿ ಜಾಗೃತರಾಗಬೇಕು ಎಂದು ಸೈಬರ್​ ತಜ್ಞ ಅಧಿಕಾರಿ, ಡಿಸಿಪಿ ಸುಮನ್ ನಲ್ವಾ ಅಭಿಪ್ರಾಯಪಟ್ಟಿದ್ದಾರೆ. ಇಂದು ಸೈಬರ್ ಕ್ರೈಂ ವ್ಯಕ್ತಿಗಳು ಮತ್ತು ಅವರ ವ್ಯವಹಾರಗಳು ಸರ್ಕಾರಗಳಿಗೆ, ಜನರಿಗೆ ದೊಡ್ಡ ಥ್ರೆಟ್. ಸೈಬರ್ ಕ್ರೈಂ ಬಗ್ಗೆ ಎಲ್ಲರಿಗೂ ಮಾಹಿತಿ ತುತ್ತಾಗಿ ಬೇಕಿದೆ. ಜಾಗೃತೆಯಿಂದ ನಾವು ಎಚ್ಚೆತ್ತುಕೊಳ್ಳಬೇಕಿದೆ. ಅಪರಿಚಿತರು ಫೋನ್ ಕರೆ ಮಾಡಿ ಹಣ ಕೇಳುತ್ತಿದ್ದರೆ ನೀವು ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಬಹುತೇಕ ಪ್ರಕರಣಗಳಲ್ಲಿ ಫೋನ್ ಮಾಡಿ ಹಣ ಕೇಳಿದಾಗಲೇ ಮೋಸ ಹೋಗಿದ್ದಾರೆ. ಈ ಬಗ್ಗೆ ತಿಳಿದುಕೊಂಡಿರುವ ಜನರು ಜಾಗೃತಗೊಳಿಸಬೇಕು. ಡಿಜಿಟಲ್ ಬಂದನ, ವಂಚನೆ ಬಗ್ಗೆ ಮಾಹಿತಿ ನೀಡಬೇಕು ಎನ್ನುತ್ತಿದ್ದಾರೆ ತಜ್ಞರು.

ಇದನ್ನೂ ಓದಿ:ವಿನೇಶ್ ಫೋಗಟ್​ ಬಳಿ ಕೋಟಿ ಕೋಟಿ ಆಸ್ತಿ.. ಕಾರಿನ ಮೇಲೆ ಭಾರೀ ಕ್ರೇಜ್.. ಎಷ್ಟು ಕೋಟಿ ಒಡತಿ ಗೊತ್ತೇ..?

ಸೈಬರ್ ಸ್ಕ್ಯಾಮ್ ಕರೆ ಬಂದರೆ..

  • ಕರೆಯನ್ನು ಸ್ವೀಕರಿಸಬೇಡಿ, ಕಟ್ ಮಾಡಿ.. ಅವರು ಮತ್ತೆ ಮತ್ತೆ ಮಾಡುತ್ತಾರೆ
  • ಪದೇ ಪದೆ ಫೋನ್ ಬಂದಾಗ ಸ್ವೀಕರಿಸಿ ಮಾತನಾಡಿ, ಯಾರೆಂದು ವಿಚಾರಿಸಿ
  • ಕರೆ ಸ್ವೀಕರಿಸಿದ ಬೆನ್ನಲ್ಲೇ ಅವರು ಮಾತನಾಡುವ ವೇ ಗಮನಿಸಿಕೊಳ್ಳಿ
  • ಮಾತನಾಡಿದ ನಂತರ ಅವರು ತಮ್ಮನ್ನು ತನಿಖಾಧಿಕಾರಿಗಳು ಎಂದು ಹೇಳಿಕೊಳ್ತಾರೆ
  • ಸಿಬಿಐ, ಸಿಐಡಿ, ಇಡಿ ಅಧಿಕಾರಿಗಳೆಂದು ನಂಬಿಸಿ ನಿಮ್ಮನ್ನು ಆನ್​​ಲೈನ್​​ನಲ್ಲೇ ಬಂಧಿಸಲು ಮುಂದಾಗುತ್ತಾರೆ
  • ಆನ್​ಲೈನ್​ನಲ್ಲಿ ನಿಮ್ಮನ್ನು ಅರೆಸ್ಟ್ ಮಾಡಿ ಹಣ ಕೇಳಲು ಪ್ರಯತ್ನಿಸುತ್ತಾರೆ
  • ಹಣ ನೀಡಿ ಎಂದು ಹೇಳಿದರೆ ಖಂಡಿತ ಅದು ಸೈಬರ್ ವಂಚಕರ ಕೆಲಸ ಅನ್ನೋದು ದೃಢ

ಮುಂದೆ ಏನು ಮಾಡಬೇಕು..?

  • ಮೋಸ ಹೋಗುವ ಅನುಮಾನ ಬಂದರೆ ಸ್ಥಳೀಯ ಠಾಣೆಗೆ ಕರೆ ಮಾಡಿ
  • ನಿಮಗೆ ಕರೆ ಮಾಡಿದವರು ನಿಜವಾಗಿಯೂ ಅಧಿಕಾರಿಗಳಾ? ವಂಚಕರಾ ಎಂದು ಪೊಲೀಸರು ತಿಳಿಸುತ್ತಾರೆ
  • ಈ ವೇಳೆ ನೀವು ಪೊಲೀಸರಿಗೆ ಸರಿಯಾದ ಮಾಹಿತಿಗಳನ್ನು ನೀಡಿ
  • ಕೊನೆಗೆ ನಿಮಗೆ ಕರೆ ಮಾಡುತ್ತಿರೋರಿಗೆ ಆನ್​​ಲೈನ್​ನಲ್ಲಿ ಹಣ ನೀಡಲ್ಲ ಎಂದು ಹೇಳಿ
  • ನಾನು ದಾಖಲೆಗಳನ್ನು ನೋಡಬೇಕು, ಕಚೇರಿಯಲ್ಲಿ ಭೇಟಿಯಾಗುತ್ತೇನೆ ಎಂದು ತಿಳಿಸಿ
  • ನೀವು ಈ ರೀತಿ ಎಚ್ಚೆತ್ತುಕೊಂಡರೆ ಸ್ಕ್ಯಾಮರ್​​ಗಳು ನಿಮ್ಮನ್ನು ವಂಚಿಸಲು ಯತ್ನಿಸಲ್ಲ

ಆನ್​​ಲೈನ್​​ನಲ್ಲಿ, ಫೋನ್​​ನಲ್ಲಿ ಬೇರೆಯವರೊಂದಿಗೆ ವ್ಯವಹಾರ ಮಾಡುವಾಗ ಒಮ್ಮೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಇದರಿಂದ ನಿಮ್ಮ ಕುಟುಂಬ ಹಾಗೂ ನಿಮ್ಮ ಪ್ರೀತಿಪಾತ್ರರರೂ ಕೂಡ ಸೈಬರ್ ವಂಚನೆಯಿಂದ ಆಗುವ ಪರಿಣಾಮ ತಪ್ಪುತ್ತದೆ. ಅಪರಿಚಿತ ವ್ಯಕ್ತಿಗಳ ಜೊತೆಗೆ ಮಾತನಾಡುವಾಗ ಜಾಗೃತರಾಗಿ, ಎಚ್ಚರಿಕೆಯಿಂದ ಮಾತನಾಡಿ, ಪ್ರಶ್ನೆಗಳನ್ನು ಕೇಳಿ. ವಾಸ್ತವದಲ್ಲಿ ಕಾನೂನು ಪರಿಭಾಷೆಯಲ್ಲಿ ಡಿಜಿಟಲ್ ಬಂದನ ಅನ್ನೋ ಪರಿಕಲ್ಪನೆ ಅಸ್ತಿತ್ವದಲ್ಲಿ ಇಲ್ಲ. ಯಾವುದೇ ತನಿಖಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಣ ಕೇಳುವುದಿಲ್ಲ, ಬಂಧಿಸುವುದೂ ಇಲ್ಲ. ವಂಚಕರಿಂದ ಪಾರಾಗಲು ನಾವು ನಮ್ಮ ಮೆದುಳನ್ನು ದೊಡ್ಡ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು. ಮೋಸ ಹೋಗಲು ನಾವು ಬಿಡಬಾರದು!

ಇದನ್ನೂ ಓದಿ:ವಿದೇಶಿ IPL ಆಟಗಾರರ ವಿರುದ್ಧ ರೊಚ್ಚಿಗೆದ್ದ ಅಶ್ವಿನ್.. ದುಬಾರಿ ಆಟಗಾರರ ಅಸಲಿ ತಂತ್ರ ರಿವೀಲ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ವಲ್ಪ ಯಾಮಾರಿದ್ರೂ ಡಿಜಿಟಲ್ ಅರೆಸ್ಟ್ ಆಗ್ತೀರಿ ಹುಷಾರ್​.. ನಿಮ್ಮ ಮೆದುಳು ಕೂಡ ಹೈಜಾಕ್ ಆಗುತ್ತೆ ಜೋಕೆ..!

https://newsfirstlive.com/wp-content/uploads/2024/08/CYBER.jpg

Load More