ರೇಣುಕಾ ಮೇಲೆ ಲಾಠಿಯಿಂದ ಹಲ್ಲೆ ಮಾಡಿದ್ದ ಡಿ-ಗ್ಯಾಂಗ್
ಅಂದು ಹಲ್ಲೆಗೆ ಬಳಸಿದ್ದು ಪೊಲೀಸ್ ಪೇದೆಯೊಬ್ಬರ ಲಾಠಿ!
ಕಳೆದ ಫೆ.15ರಂದು ಕಳೆದುಹೋದ ಲಾಠಿ ಜೂನ್.11ಕ್ಕೆ ಪತ್ತೆ
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳು ಹೊರ ಬರ್ತಿವೆ. ಇದೀಗ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಬಳಸಿದ್ದ ಪೊಲೀಸ್ ಲಾಠಿ ಹಿಂದಿನ ಅಸಲಿ ಸತ್ಯ ರಿವೀಲ್ ಆಗಿದೆ.
ಒಂದು ಲಾಠಿಯ ಕತೆ..!
ಪಟ್ಟಣಗೆರೆ ಶೆಡ್ಗೆ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಹಲ್ಲೆ ವೇಳೆ ಪೊಲೀಸ್ ಅಧಿಕಾರಿ ಒಬ್ಬರ ಲಾಠಿಯನ್ನು ಬಳಸಲಾಗಿತ್ತು. ತನಿಖೆ ವೇಳೆ ಸಿಕ್ಕಿದ್ದ ಲಾಠಿಯನ್ನು ಪೊಲೀಸರು ಸಾಕ್ಷಿಯಾಗಿ ಬಳಸಿದ್ದಾರೆ. ಅದನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದ್ದು, ಶೆಡ್ಗೆ ಲಾಠಿ ಬಂದಿದ್ದು ಹೇಗೆ ಅನ್ನೋ ವಿಚಾರವನ್ನು ಬಹಿರಂಗ ಮಾಡಿದ್ದಾರೆ.
ಈ ಲಾಠಿ ಹಿಂದೆ ರೋಚಕ ಕತೆ ಇದೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ರವೀಂದ್ರ ಬಳಸುತ್ತಿದ್ದ ಲಾಠಿ ಅದಾಗಿದೆ. ಫೆಬ್ರವರಿ 16 ರಂದು ದರ್ಶನ್ ಅವರ ಬರ್ತ್ಡೇ. ಬರ್ತ್ಡೇ ಹಿನ್ನೆಲೆಯಲ್ಲಿ ಫೆಬ್ರವರಿ 15ರಂದು ದರ್ಶನ್ ನಿವಾಸಕ್ಕೆ ಭದ್ರತೆ ನೀಡಲು ಕಾನ್ಸ್ಟೇಬಲ್ ರವೀಂದ್ರ ಬಂದಿದ್ದರು.
ಇದನ್ನೂ ಓದಿ:ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು 3 ವರ್ಷದ ಮಗುವನ್ನೇ ಮಾರಿದ ಪತಿ; ಕರುಳು ಹಿಂಡುವ ಕೆಲಸ
ದರ್ಶನ್ ಬರ್ತ್ ಡೇ ಹಿಂದಿನ ರಾತ್ರಿ ಬಂದೋಬಸ್ತ್ ವೇಳೆ ರವೀಂದ್ರ ಯಡವಟ್ಟು ಮಾಡಿಕೊಂಡಿದ್ದರು. ಮರ ಒಂದರ ಬಳಿ ಕೂತಿದ್ದ ಅವರು, ಲಾಠಿಯನ್ನು ಮರೆತು ಠಾಣೆಗೆ ಹೋಗಿದ್ದರು. ಬೆಳಗ್ಗೆ ಬಂದು ನೋಡಿದಾಗ ಲಾಠಿ ಮಾಯವಾಗಿತ್ತು. ಬರ್ತ್ ಡೇ ದಿನದಂದು ದರ್ಶನ್ ಮನೆ ಬಳಿ ಜನಸಾಗರ ಸೇರಿತ್ತು. ಜನ ಜಂಗುಳಿ ಮಧ್ಯೆ ಎಷ್ಟೇ ಹುಡುಕಿದರೂ ಲಾಠಿ ಸಿಕ್ಕಿರಲಿಲ್ಲ.
ಕೊನೆಗೆ ನೋಡಿದ್ರೆ ಆ ಲಾಠಿಯನ್ನು ದರ್ಶನ್ ಮನೆಯ ಕೆಲಸಗಾರರು ತೆಗೆದುಕೊಂಡು ಹೋಗಿದ್ದರು. ಜೂನ್ 8 ರಂದು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಇದೇ ಲಾಠಿ ಬಳಸಲಾಗಿದೆ. ದರ್ಶನ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ಹೊಡೆತಕ್ಕೆ ಲಾಠಿ ಮುರಿದು ಹೋಗಿತ್ತು. ದರ್ಶನ್ ಬಂಧನ ಬಳಿಕ ಪೊಲೀಸರು ಜೂನ್ 11 ರಂದು ಲಾಠಿಯನ್ನು ಸೀಜ್ ಮಾಡಿದ್ದರು. ಕೊನೆಗೆ ಲಾಠಿ ಯಾರದ್ದು ಅನ್ನೋದನ್ನು ಪತ್ತೆ ಹಚ್ಚಿ ರವೀಂದ್ರಗೆ ನೋಟಿಸ್ ನೀಡಿದ್ದರು. ಅಂತೆಯೇ ಕಾನ್ಸ್ಟೇಬಲ್ ರವೀಂದ್ರ ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ. ಪೊಲೀಸರು ಆ ಹೇಳಿಕೆಯನ್ನು ದಾಖಲಿಸಿ ಚಾರ್ಜ್ಶೀಟ್ನಲ್ಲೂ ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ: ಖಾಸಗಿ ವಿಡಿಯೋ, ಫೋಟೋ ಇಟ್ಕೊಂಡು ದರ್ಶನ್ಗೆ ಬ್ಲ್ಯಾಕ್ಮೇಲ್ -ಪವಿತ್ರಗೌಡಳ ತಂತ್ರ ಬಿಚ್ಚಿಟ್ಟ ವಿಜಯಲಕ್ಷ್ಮೀ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ