ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ.. ಕರೀನಾ ಕಪೂರ್ ತಪ್ಪಿಸಿಕೊಂಡಿದ್ದು ಹೇಗೆ?

author-image
Veena Gangani
Updated On
ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ.. ಕರೀನಾ ಕಪೂರ್ ತಪ್ಪಿಸಿಕೊಂಡಿದ್ದು ಹೇಗೆ?
Advertisment
  • ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ಮಾಡಿದ ಖದೀಮ
  • ಮುಂಬೈನ ಬಾಂದ್ರಾದಲ್ಲಿರೋ ನಿವಾಸಕ್ಕೆ ಖದೀಮ ಬಂದಿದ್ದು ಹೇಗೆ?
  • ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾದ ಸೈಫ್ ಅಲಿ ಖಾನ್

ಬಾಲಿವುಡ್ ಸ್ಟಾರ್​ ನಟ ಸೈಫ್ ಅಲಿ ಖಾನ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಮುಂಬೈನ ಬಾಂದ್ರಾದಲ್ಲಿರೋ ನಿವಾಸಕ್ಕೆ ಬಂದ ಖದೀಮನೊನ್ನ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಬರೋಬ್ಬರಿ 6 ಬಾರಿ ನಟನ ಮೇಲೆ ದುಷ್ಕರ್ಮಿ ಹಲ್ಲೆ ಮಾಡಿ ಎಸ್ಕೇಪ್​ ಆಗಿದ್ದಾರೆ.

ಇದನ್ನೂ ಓದಿ:ಇದು ಮನೆಯಲ್ಲ ಅರಮನೆ..! ಚಾಕು ಇರಿತಕ್ಕೊಳಗಾದ ಸೈಫ್ ಅಲಿ ಖಾನ್ ಬಂಗಲೆ ಎಷ್ಟು ಕೋಟಿ ಬೆಲೆ ಬಾಳುತ್ತೆ?

publive-image

ಪರಿಣಾಮ ನಟ ಸೈಫ್ ಅಲಿ ಖಾನ್ ಅವರ ಕುತ್ತಿಗೆ, ಬೆನ್ನು ಹಾಗೂ ಎಡಗೈ ಗಂಭೀರ ಗಾಯವಾಗಿದೆ. ಕೂಡಲೇ ನಟ ಸೈಫ್ ಅಲಿ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿದ್ದ ನಟನಿಗೆ ಈಗಾಗಲೇ 2 ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿದೆ.

publive-image

ಇನ್ನೂ, ಈ ದಾಳಿ ವೇಳೆ ಸೈಫ್ ಅಲಿ ಖಾನ್ ಅವರು ಮನೆಯಲ್ಲಿ ಒಬ್ಬರೇ ಇದ್ದರು ಎಂದು ತಿಳಿದು ಬಂದಿದೆ. ಪತ್ನಿ ಕರೀನಾ ಕಪೂರ್ (ಜನವರಿ 15) ಬುಧವಾರ ರಾತ್ರಿ ಕರಿಷ್ಮಾ ಕಪೂರ್, ಸೋನಮ್ ಕಪೂರ್ ಮತ್ತು ರಿಯಾ ಕಪೂರ್ ಅವರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದರು.

publive-image

ಅಲ್ಲದೇ ಕರೀನಾ ಕಪೂರ್ ಕೂಡ ಪಾರ್ಟಿಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ 'ಗರ್ಲ್ಸ್ ನೈಟ್ ಇನ್' ಎಂಬ ಶೀರ್ಷಿಕೆ ನೀಡಲಾಗಿತ್ತು. ಹಾಗಾಗಿ ದಾಳಿ ನಡೆದಾಗ ಕರೀನಾ ಕಪೂರ್​ ಮನೆಯಲ್ಲಿ ಇರಲಿಲ್ಲ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸೈಫ್ ಅಲಿ ಖಾನ್ ಅವರ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment