Advertisment

ಕಮಲದ ಬೀಜಗಳು ಜಾಗತಿಕ ಸೂಪರ್ ಫುಡ್ ಆಗಿ ಬೆಳೆದಿದ್ದು ಹೇಗೆ?

author-image
Gopal Kulkarni
Updated On
ಕಮಲದ ಬೀಜಗಳು ಜಾಗತಿಕ ಸೂಪರ್ ಫುಡ್ ಆಗಿ ಬೆಳೆದಿದ್ದು ಹೇಗೆ?
Advertisment
  • ಬಜೆಟ್​ನಲ್ಲಿ ಬಿಹಾರದ ಮಖಾನಾ ಬೋರ್ಡ್​ ಸ್ಥಾಪಿಸಲು ಉದ್ದೇಶಿಸಲಾಗಿದೆ
  • ಜಾಗತಿಕವಾಗಿ ಕಮಲದ ಬೀಜಗಳಿಗೆ ಅಷ್ಟೊಂದು ಬೇಡಿಕೆ ಇರೋದು ಯಾಕೆ?
  • ಮಖಾನಾದಲ್ಲಿರುವ ಯಾವೆಲ್ಲಾ ಔಷಧೀಯ ಗುಣಗಳು ಇವೆ ಅಂತ ಗೊತ್ತಾ?

ಮೋದಿ ಸರ್ಕಾರದ 2025ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಕೆಲವು ಟ್ಯಾಕ್ಸ್ ರಿಲೀಫ್​ ನೀಡಿದರು. ಅದರ ಜೊತೆಗೆ ವಿಜ್ಞಾನ ಮತ್ತು ಅಭಿವೃದ್ಧಿಯ ಮೇಲೆಯೂ ಬಜೆಟ್ ಫೋಕಸ್ ಹಾಕಿತ್ತು.ಅದರಲ್ಲೂ ಬಿಹಾರಕ್ಕೆ ಹೆಚ್ಚಿನ ಗಮನಾರ್ಹ ಸಂಗತಿಯನ್ನು ನೀಡಿತು. ಬಿಹಾರ ಹಲವು ಪ್ರಯೋಜನೆಗಳನ್ನು ಈ ಬಜೆಟ್​ನಲ್ಲಿ ಪಡೆದಿದೆ.

Advertisment

ಅದರಲ್ಲೂ ಪ್ರಮುಖವಾಗಿ ಬಿಹಾರದಲ್ಲಿ ನಿರ್ಮಲಾ ಸೀತಾರಾಮನ್ ಮಖಾನ್ ಬೋರ್ಡ್ ಅಂದ್ರೆ ಕಮಲದ ಬೀಜಗಳ ಬೋರ್ಡ್ ಸ್ಥಾಪಿಸುವುದಾಗಿ ಬಜೆಟ್​​ನಲ್ಲಿ ಘೋಷಣೆ ಮಾಡಿದರು. ಈ ಒಂದು ಘೋಷಣೆ ಜನರ ಗಮನವನ್ನು ಸೆಳೆದಿತ್ತು. ಅದರಲ್ಲೂ ಕಮಲದ ಬೀಜಗಳು ಅಂದ್ರೆಡ ಮಖಾನಾ ಈ ಒಂದ ಧಾನ್ಯ ಅಡುಗೆ ವಸ್ತುಗಳ ಬಳಕೆಗೆ ಭಾರತೀಯರ ಮನಗೆದ್ದಿದೆ. ಈಗ ಬಿಹಾರದಲ್ಲಿ ಮಖಾನಾಬೋರ್ಡ್ ಸ್ಥಾಪನೆಯಿಂದಾಗಿ ಇದರ ಉತ್ಪಾದನೆಯನ್ನು ಹೆಚ್ಚು ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಅದರಲ್ಲೂ ಈ ವಿಶೇಷವಾದ ಬೀಜಗಳನ್ನು ಉತ್ಪಾದನೆ ಮಾಡುವಲ್ಲಿ ಭಾರತದಲ್ಲಿಯೇ ಬಿಹಾರ ಅತಿಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಇಡೀ ದೇಶಕ್ಕೆ ಶೇಕಡಾ 80 ರಷ್ಟು ಮಖಾನಾಅಂದ್ರೆ ಕಮಲದ ಬೀಜಗಳನ್ನು ಬಿಹಾರವೇ ಪೂರೈಕೆ ಮಾಡುತ್ತದೆ. ಇದನ್ನು ಜಾಗತಿಕ ಬೇಡಿಯನ್ನಾಗಿ ಮಡಬೇಕು ಎಂದು ಬಿಹಾರ ಹಲವು ವರ್ಷಗಳಿಂದ ಪರದಾಡುತ್ತಿದೆ.

publive-image

ಇತ್ತೀಚಿನ ವರ್ಷಗಳಲ್ಲಿ ಮಖಾನಾಅಂದ್ರೆ ಕಮಲದ ಬೀಜಗಳು ಹೆಚ್ಚು ಜನಪ್ರಿಯತೆಯನ್ನು ಪಡೆದಿವೆ. ಅದಕ್ಕೆ ಹಲವು ಕಾರಣಗಳು ಇವೆ. ಆದ್ರೆ ಇದರ ಖ್ಯಾತಿ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಪಾಶ್ಚಾತ್ಯ ರಾಷ್ಟ್ರಗಳು ಕೂಡ ಮಖಾನಾಕಡೆ ಹೆಚ್ಚು ಗಮನಕೊಡುತ್ತಿವೆ. ಭಾರತ ಮತ್ತು ಪಶ್ಚಿಮ ದೇಶಗಳಲ್ಲಿ ಕಮಲದ ಬೀಜಗಳ ಉತ್ಪಾದನೆ ಹೆಚ್ಚಿಸುವ ಬೇಡಿಕೆ ಒಂದೇ ರೀತಿಯಲ್ಲಿದೆ.

ಇದನ್ನೂ ಓದಿ:4 ವರ್ಷದ ಮೊಮ್ಮಗಳು ವಿಡಿಯೋ ಕಾಲ್ ಮಾಡಿ ಅಜ್ಜಿಗೆ ತೋರಿಸಿದ್ದೇನು! ಇದು ನಿಜಕ್ಕೂ ಬೆಚ್ಚಿ ಬೀಳಿಸುವ ಸ್ಟೋರಿ

Advertisment

ಇನ್ನು ಭಾರತ ಕಮಲದ ಬೀಜಗಳ ರಫ್ತಿನ ಬಗ್ಗೆ ನೋಡಿದರೆ. 2023-24ರಲ್ಲಿ ಸುಮಾರು 25.130 ಮೆಟ್ರಿಕ್ ಟನ್​ ಕಮಲದ ಬೀಜಗಳನ್ನು. ಭಾರತದಿಂದ ಅತಿಹೆಚ್ಚು ಕಮಲದ ಬೀಜಗಳನ್ನು ಆಮದು ಮಾಡಿಕೊಂಡಿರುವ ರಾಷ್ಟ್ರಗಳು ಅಂದ್ರೆ ಯುಎಸ್, ಕೆನಡಾ ಮತ್ತು ಆಸ್ಟ್ರೇಲಿಯಾ
ಸೂಪರ್ ಫುಡ್ ಫ್ಯಾಕ್ಟರ್ ಆಗಿದ್ದು ಹೇಗೆ ಮಖನಾ

ಇದನ್ನೂ ಓದಿ: ಯಾರಿದು ಮೋಹಿನಿ ಮೋಹನ್ ದತ್ತಾ..? ರತನ್ ಟಾಟಾ ಅವರ ಉಯಿಲ್​​​ನಿಂದ 500 ಕೋಟಿ ಬಂದಿದ್ದೇಕೆ?

ಕಮಲದ ಬೀಜಗಳಲ್ಲಿ ಇರುವ ಪ್ರಮುಖ ನ್ಯೂಟ್ರಿಷನಲ್ ಅಂಶಗಳೇ ಅದರ ಬೇಡಿಕೆಗೆ ಕಾರಣ. ತೂಕದ ಸಮತೋಲನ ಕಾಪಾಡಿಕೊಳ್ಳಲು ಇದರಲ್ಲಿರುವ ಫೈಬರ್ ಅಂಶ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಈ ಕಮಲದ ಬೀಜಗಳು ರಾಮಬಾಣ ಅಂತಲೇ ಹೇಳಲಾಗುತ್ತದೆ. ಇದು ಸಕ್ಕರೆ ಕಾಯಿಲೆಯನ್ನು ಕೂಡ ನಿಯಂತ್ರಣಕ್ಕೆ ತರುವ ಶಕ್ತಿಯನ್ನು ಹೊಂದಿದೆ. ಹಲವು ಔಷಧಿಯ ಗುಣಗಳು ಇದು ಹೊಂದಿರುವುದರಿಂದ ಇದಕ್ಕೆ ಜಾಗತಿಕವಾಗಿ ಬೇಡಿಕೆ ಹೆಚ್ಚಿದೆ. ಹೀಗಾಗಿ ಇದು ಇತ್ತೀಚೆಗೆ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment