newsfirstkannada.com

ಶ್ರೀರಾಮನ ಮೂರ್ತಿ ಕೆತ್ತಲು ಶಿಲ್ಪಿ, ಶಿಲೆಯ ಆಯ್ಕೆ ಹೇಗಾಯ್ತು? ನ್ಯೂಸ್​ಫಸ್ಟ್​ಗೆ ಪೇಜಾವರಶ್ರೀ ಇಂಟ್ರಸ್ಟಿಂಗ್​ ಮಾಹಿತಿ

Share :

Published January 19, 2024 at 11:20am

Update January 19, 2024 at 11:21am

    ಮೂರು ಪ್ರತಿಮೆಗಳ ನಿರ್ಮಾಣಕ್ಕಾಗಿ ನಡೆಯಿತು ಚರ್ಚೆ

    ಶ್ರೀರಾಮನ ಮೂರ್ತಿ ಕೆತ್ತಿದವರಲ್ಲಿ ಕರ್ನಾಟಕದವರು ಇಬ್ಬರಿದ್ದರು

    ಯೋಗ್ಯ ಶಿಲೆಯ ಆಯ್ಕೆ ಹೇಗಾಯ್ತು? ಉಳಿದ 2 ಮೂರ್ತಿಯನ್ನು ಏನ್ಮಾಡ್ತಾರೆ?

ಅಯೋಧ್ಯೆಯಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ನಡೆಯುತ್ತಿದೆ. ಕರ್ನಾಟಕ ಮೂಲದ ಶಿಲ್ಪಿ ಮತ್ತು ಶಿಲೆಯಿಂದ ಕೆತ್ತಿದ ರಾಮ ಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತಿದೆ. ಆದರೆ ಅದಕ್ಕೂ ಮುನ್ನ ರಾಮ ಭಕ್ತರಿಗೆ ಕುತೂಹಲ ಕೆರಳಿಸಿರುವ ಶಿಲ್ಪಿಯ ಆಯ್ಕೆ ಹೇಗಾಯ್ತು? ಕಲ್ಲಿನ ಆಯ್ಕೆ ಹೇಗೆ ನಡೆಯಿತು? ಎಂಬ ಬಗ್ಗೆ ನ್ಯೂಸ್​ ಫಸ್ಟ್​ಗೆ ಈಗ ಉತ್ತರ ಸಿಕ್ಕಿದೆ. ಉಡುಪಿಯ ಪೇಜಾವರ ಶ್ರೀಯವರು ರಾಮ ಲಲ್ಲಾ ಮೂರ್ತಿಯ ಆಯ್ಕೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಶಿಲೆ ಮತ್ತು ಶಿಲ್ಪಿಯ ಆಯ್ಕೆ ಹೇಗೆ?

ರಾಮ ಮಂದಿರಕ್ಕಾಗಿ ಪ್ರತಿಮೆ ನಿರ್ಮಾಣ ಮಾಡಬೇಕು ಎಂದಾಗ ಮೂರು ಪ್ರತಿಮೆಗಳ ನಿರ್ಮಾಣ ಆಯ್ತು. ಕೊನೆಯ ಹಂತದಲ್ಲಿ ಏನಾದ್ರು ಹೆಚ್ಚುಕಮ್ಮಿ ಆದ್ರು ಕೂಡ ಒಂದಲ್ಲ ಇನ್ನೊಂದು ಪ್ರತಿಮೆಯನ್ನು ಪ್ರತಿಷ್ಠೆ ಮಾಡಲು ಅನುಕೂಲ ಆಗಬೇಕು. ಕೊನೆಯ ಹಂತದಲ್ಲಿ ಕೈಕಾಲು ಬಿಡುವ ಹಾಗೆ ಆಗಬಾರದು. ಕೊನೆಯ ಹಂತದಲ್ಲಿ ಏನಾದರು ಆದ್ರು ಕೂಡ ಪುನರ್​ ನಿರ್ಮಾಣ ಮಾಡುವುದು ಕಷ್ಟ. ಹಾಗಾಗಿ ಮೂರು ಪ್ರತಿಮೆ ನಿರ್ಮಾಣ ಮಾಡಬೇಕು ಎಂದಾಯ್ತು. ಬಳಿಕ ಯಾರ ಕೈಯಲ್ಲಿ ರಾಮ ಲಲ್ಲಾ ಮೂರ್ತಿ ಕೆತ್ತಿಸೋದು ಎಂಬ ಚರ್ಚೆ ಆಯ್ತು. ಪ್ರಸಿದ್ಧ ಕಲಾಕಾರರೆಲ್ಲರಿಗೂ ಆಹ್ವಾನ ನೀಡಿತು. ನಿಮ್ಮ ನಿಮ್ಮ ಅನುಭವ, ಕೆಲಸವನ್ನು ಹಂಚಿಕೊಳ್ಳಿ ಎಂದು ಕೇಳಲಾಯ್ತು. ಅದರಲ್ಲಿ ಮೂರು ಮಂದಿಯನ್ನು ಆಯ್ಕೆ ಮಾಡಲಾಯ್ತು. ಅವರ ಕೆಲಸಗಳನ್ನು ನೋಡಲಾಯ್ತು.

ದೊಡ್ಡ ಆಶ್ಚರ್ಯ ಸಂಗತಿ ಎಂದರೆ ಅದರಲ್ಲಿ ಕರ್ನಾಟಕದವರೇ ಇಬ್ಬರು ಇದ್ದಾರೆ ಎಂಬಂತದ್ದು ಅತ್ಯಂತ ಸಂತೋಷದ ಸಂಗತಿ. ಅದರಲ್ಲೂ ಪುನಃ ನಮ್ಮ ಮೈಸೂರಿನ ಯೋಗಿ ರಾಜ್​ರವರು ಮಾಡಿದ ಪ್ರತಿಮೆ ಆಯ್ಕೆಯಾದವು.

ಕಲ್ಲುಗಳ ಸೆಲೆಕ್ಷನ್​ ಹೇಗಾಯ್ತು? ನೇಪಾಳ ಸೇರಿ ಆರು ಕಡೆಗಳಿಂದ ಬಂದ ಕಲ್ಲುಗಳ ಸೆಲೆಕ್ಷನ್​ ಹೇಗಾಯ್ತು?

ಅನೇಕ ಮಂದಿಯ ಅಭಿಪ್ರಾಯದ ಮೇರೆಗೆ ಪ್ರತಿಮಾ ನಿರ್ಮಾಣಕ್ಕೆ ಯಾವ ಶಿಲೆಗಳು ಉತ್ತಮ ಎಂದು ಕೇಳಲಾಯ್ತು. ಅದಕ್ಕಾಗಿ ಅನೇಕ ಬಗೆಯ ಶಿಲೆಗಳ ಸಿದ್ಧತೆ ಮಾಡಿಕೊಂಡಿದ್ದವು. ನಂತರ ಶಿಲ್ಪಿಗಳ ಆಯ್ಕೆ ಆ ಬಳಿಕ ಆಗಿತ್ತು. ಶಿಲ್ಪಿಗಳ ಬಳಿ ತೋರಿಸಿದಾಗ ಕೆಲವು ನೂನ್ಯತೆ ತೋರಿಸಿದ್ದರಿಂದ ಕೊನೆಗೆ ಶಿಲೆಗಳ ಆಯ್ಕೆ ಅವರವರಿಗೆ ಬಿಡಲಾಯ್ತು. ಅವರಿಗೆ ಯಾವ ಶಿಲೆಯಲ್ಲಿ ಕೈಚಳಕ ಕೆತ್ತನೆ ಮಾಡಲು ಅನುಕೂಲವಾಗುವಂತದ್ದು ಯಾವುದು ಮತ್ತು ದೃಢತೆಯು ಬೇಕು. ಸಾವಿರಾರು ವರ್ಷಗಳ ಕಾಲ ನಿಲ್ಲುವಂತದ್ದಾಗಬೇಕು. ವಾತಾವರಣಕ್ಕೆ ಹೊಂದಿಕೊಳ್ಳವಂತದ್ದಾಗಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು. ಅವರಿಗೆ ಬೇಕಾದ ಯೋಗ್ಯ ಶಿಲೆಯನ್ನು ಅವರವರು ತೆಗೆದುಕೊಂಡು ಬಂದಿದ್ದಾರೆ. ಬಳಿಕ ಪ್ರತಿಮೆ ನಿರ್ಮಾಣ ಮಾಡಲಾಯ್ತು.

ಅಂತಿವಾಗಿ ಮೂರ್ತಿ ಆಯ್ಕೆ ಮಾಡಿದ್ದು ಹೇಗೆ?

ಸೆಲೆಕ್ಷನ್​ ಕಮಿಟಿಯಲ್ಲಿ ಕನ್ನಡದವನು ಇದ್ದದ್ದು ನಾನೊಬ್ಬ. ಇನ್ನುಳಿದವರು ಇಲ್ಲಿಯವರು. ಅಂತದರಲ್ಲಿ ಎಲ್ಲರೂ ಈ ಮೂವರನ್ನು ಆಯ್ಕೆ ಮಾಡಿದ್ದಾರೆ. ಆ ಮೂವರಲ್ಲಿ ಪ್ರತಿಮೆಯನ್ನು ಬಹುಮತಗಳಿಂದ ಕರ್ನಾಟಕದವರು ಮಾಡಿದ ಪ್ರತಿಮೆ ಆಯ್ಕೆಗೊಂಡಿದೆ. ಇನ್ನೊಂದು ವಿಶೇಷವೆಂದರೆ ಪ್ರತಿಮಾ ನಿರ್ಮಾಣಕ್ಕೆ ಬಳಸಿಕೊಂಡ ಶಿಲೆಯೂ ಕರ್ನಾಟಕದ್ದು ಎಂಬುದು ನಮಗೆ ಹೆಮ್ಮೆಯ ಸಂಗತಿ.

ಇನ್ನುಳಿದ 2 ಮೂರ್ತಿಯನ್ನು ಎಲ್ಲಿ ಪ್ರತಿಷ್ಠಾಪಣೆ ಮಾಡ್ತಾರೆ?

ಮುಂದಿನ ದಿನಗಳಲ್ಲಿ ಅದಕ್ಕೆ ಯೋಗ್ಯವಾದ ಸ್ಥಳದಲ್ಲಿ ಅದಕ್ಕೆ ಮರ್ಯಾದೆ ಕೊಟ್ಟು ರಕ್ಷಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀರಾಮನ ಮೂರ್ತಿ ಕೆತ್ತಲು ಶಿಲ್ಪಿ, ಶಿಲೆಯ ಆಯ್ಕೆ ಹೇಗಾಯ್ತು? ನ್ಯೂಸ್​ಫಸ್ಟ್​ಗೆ ಪೇಜಾವರಶ್ರೀ ಇಂಟ್ರಸ್ಟಿಂಗ್​ ಮಾಹಿತಿ

https://newsfirstlive.com/wp-content/uploads/2024/01/Pejawara-Shree.jpg

Load More