/newsfirstlive-kannada/media/post_attachments/wp-content/uploads/2025/06/B2-1.jpg)
ಅಮೆರಿಕಾ ಅತ್ಯಂತ ರಹಸ್ಯವಾಗಿ ಇರಾನ್ ಮೇಲೆ ದಾಳಿ ನಡೆಸಿದ್ದೇಗೆ? ಇರಾನ್ ಸೇನೆಯನ್ನು, ಇರಾನ್ ಇಂಟಲಿಜೆನ್ಸ್ ಅನ್ನು ಅಮೆರಿಕಾ ದಿಕ್ಕು ತಪ್ಪಿಸಿದ್ದೇಗೆ? ಅಮೆರಿಕಾದ ಸೇನಾ ಉನ್ನತಾಧಿಕಾರಿ ಹೇಳಿದ್ದೇನು ಗೊತ್ತಾ? ಅಮೆರಿಕಾದ ಸೇನೆಯ ಉನ್ನತಾಧಿಕಾರಿಯೇ ಈಗ ಸೀಕ್ರೇಟ್ ಅಪರೇಷನ್ ಮಿಡ್ ನೈಟ್ ಹ್ಯಾಮರ್ನ ಡೀಟೈಲ್ಸ್ ಅನ್ನು ಬಾಯಿಬಿಟ್ಟಿದ್ದಾರೆ. ಅಮೆರಿಕಾದ ಜಂಟಿ ಚೀಫ್ ಸ್ಟಾಫ್ ಅಧ್ಯಕ್ಷ ಜನರಲ್ ಡಾನ್ ಕೈನಿ ಅವರು ಸೀಕ್ರೆಟ್ ಅಪರೇಷನ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೊರ್ಮುಜ್ ಜಲಸಂಧಿ ಮುಚ್ಚಲು ಇರಾನ್ ನಿರ್ಧಾರ; ಭಾರತ ಸೇರಿ ಹಲವು ರಾಷ್ಟ್ರಗಳಿಗೆ ಭಾರೀ ಪೆಟ್ಟು..!
ಅಪರೇಷನ್ ಮಿಡ್ ನೈಟ್ ಹ್ಯಾಮರ್ನಲ್ಲಿ 125 ಅಮೆರಿಕಾದ ಯುದ್ಧ ವಿಮಾನ ಭಾಗಿಯಾಗಿದ್ದವು. ಸಾಕಷ್ಟು ಸಂಖ್ಯೆಯ ಬಿ-2 ಬಾಂಬರ್ ಯುದ್ಧ ವಿಮಾನಗಳು ಭಾಗಿಯಾಗಿದ್ದವು. ಅಮೆರಿಕಾ, ಮಧ್ಯರಾತ್ರಿ ಇರಾನ್ ಮೇಲೆ ದಾಳಿಗೆ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಇರಾನ್ ದೇಶವನ್ನು ದಿಕ್ಕು ತಪ್ಪಿಸಿ, ಅಪರೇಷನ್ ಸಿಂಧೂರ್ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿತ್ತು. ತನ್ನ ಸ್ಟ್ರಾಟರ್ಜಿ ಮೂಲಕ ಇರಾನ್‌ಗೆ ಸರ್ಪ್ರೈಸ್ ನೀಡಿದ್ದು ಅಮೆರಿಕಾದ ಸೇನೆ. ಇರಾನ್ ದೇಶದ ದಿಕ್ಕು ತಪ್ಪಿಸಲು ಮುಂಜಾನೆ ಫೆಸಿಫಿಕ್ ಐಲ್ಯಾಂಡ್ ಕಡೆಗೆ ಅಮೆರಿಕಾ ಯುದ್ಧ ವಿಮಾನಗಳು ಹೊರಟಿದ್ದವು. ಡಮ್ಮಿ ಯುದ್ಧ ವಿಮಾನಗಳನ್ನು ಫೆಸಿಫಿಕ್ ಐಲ್ಯಾಂಡ್ ಕಡೆಗೆ ಅಮೆರಿಕಾ ಕಳಿಸಿತ್ತು. ಫ್ಲೈಟ್ ರಾಡಾರ್ನಲ್ಲಿ ಅಮೆರಿಕಾದ ಯುದ್ಧ ವಿಮಾನಗಳ ಚಲನವಲನ ಪರಿಶೀಲಿಸುತ್ತಿದ್ದ ಇರಾನ್‌ಗೆ ಅಮೆರಿಕಾದ ಯುದ್ಧ ವಿಮಾನ ನಮ್ಮ ಕಡೆಗೆ ಬರುತ್ತಿಲ್ಲ ಎಂಬ ಭಾವನೆ ಬಂದಿತ್ತು. ಆದರೆ ರಾಡಾರ್ ಕಣ್ಣು ತಪ್ಪಿಸುವ ಬಿ-2 ಸ್ಟೀಲ್ತ್ ಬಾಂಬರ್ ವಿಮಾನಗಳನ್ನು ಸದ್ದಿಲ್ಲದೇ, ಇರಾನ್‌ಗೆ ಅಮೆರಿಕಾ ಕಳಿಸಿತ್ತು.
ಅಮೆರಿಕಾದ ಈ ದಿಕ್ಕು ತಪ್ಪಿಸುವ ರಣತಂತ್ರದ ಸುಳಿವು ಸಿಗದೆ ಇರಾನ್ ಮೈ ಮರೆತು ಕುಳಿತಿತ್ತು. ಅಮೆರಿಕಾದ ಯುದ್ಧದ ಈ ದಿಕ್ಕು ತಪ್ಪಿಸುವ ಪ್ಲ್ಯಾನ್ ಅಮೆರಿಕಾದಲ್ಲೂ ಕೂಡ ಕೆಲವೇ ಕೆಲವು ಮಂದಿಗೆ ಮಾತ್ರ ಗೊತ್ತಿತ್ತು. ಡಮ್ಮಿ ಯುದ್ಧ ವಿಮಾಗಳು ಪಶ್ಚಿಮದ ಫೆಸಿಫಿಕ್ ಐಲ್ಯಾಂಡ್ಗೆ ಹೋಗಿದ್ದರಿಂದ ಇರಾನ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು. ಆದರೆ 7 ಬಿ-2 ಬಾಂಬರ್ ವಿಮಾನಗಳು ಸದ್ದಿಲ್ಲದೆ ರಾಡಾರ್ ಕಣ್ಣುತಪ್ಪಿಸಿ ಇರಾನ್ ಮೇಲೆ ದಾಳಿ ಮಾಡಿದ್ದವು. ಪೂರ್ವದ ಇರಾನ್ ಕಡೆಗೆ ನುಗ್ಗಿದ್ದ 7, ಬಿ-2 ಬಾಂಬರ್ ವಿಮಾನಗಳು ನ್ಯೂಕ್ಲಿಯರ್ ಸೈಟ್್ಗಳ ಮೇಲೆ ದಾಳಿ ನಡೆಸಿದ್ದವು. ಇರಾನ್ ಮೇಲೆ ದಾಳಿ ನಡೆಸಿದ್ದ ಬಿ-2 ಬಾಂಬರ್ ವಿಮಾನಗಳಲ್ಲಿ ತಲಾ ಇಬ್ಬರು ಪೈಲಟ್ಗಳಿದ್ದರು. ಕನಿಷ್ಠ ಕಮ್ಯೂನಿಕೇಷನ್ ಮೂಲಕ ಯಶಸ್ವಿಯಾಗಿ ಬಿ-2 ಬಾಂಬರ್ ವಿಮಾನಗಳು ಇರಾನ್ ಮೇಲೆ ದಾಳಿ ನಡೆಸಿದ್ದವು.
ಇದನ್ನೂ ಓದಿ: ಅಮೆರಿಕ ದಾಳಿ ಬೆನ್ನಲ್ಲೇ ಯುದ್ಧಕ್ಕೆ ಹೊಸ ತಿರುವು.. ಪುಟಿನ್ ಭೇಟಿಯಾಗಿ ‘Game is not over’ ಎಂದ ಇರಾನ್..!
3 ಅಡಗುತಾಣಗಳು, 7 ಬಾಂಬರ್‌ಗಳು ಮತ್ತು 25 ನಿಮಿಷಗಳು.. ನಿನ್ನೆ ಇರಾನ್‌ನ ನಿದ್ದೆಯನ್ನ ಕದ್ದ ಅಮೆರಿಕದ ಕಾರ್ಯಾಚರಣೆಯ ಕಥೆ ಇದು.. ಆ ಕಾರಣಕ್ಕೆ ಏನೋ? ಮಿಡ್‌ನೈಟ್ ಹ್ಯಾಮರ್ ಅಂತ ಇದಕ್ಕೆ ಹೆಸರಿಟ್ಟು ಅನಿಸುತ್ತೆ.. ಅಮೆರಿಕವು ನಡೆಸಿದ ನಿಖರ, ವೇಗ, ಅಪಾಯಕಾರಿ ಮಿಲಿಟರಿ ಕಾರ್ಯಾಚರಣೆ ಅಂತ ಟ್ರಂಪ್ ಸರ್ಕಾರ ಹೇಳಿಕೊಳ್ತಿದೆ..
25 ನಿಮಿಷ.. ಹೇಗಿತ್ತು ಬಿ2 ಅಟ್ಯಾಕ್?
- ಮಿಸೌರಿಯ ವಾಯುನೆಲೆಯಿಂದ ಹಾರಿದ್ದ ಬಿ-2 ಸ್ಟೆಲ್ತ್ ಬಾಂಬರ್‌ಗಳು
- 18 ಗಂಟೆಗಳ ಸುದೀರ್ಘ ಪ್ರಯಾಣ ನಡೆಸಿದ ಬಿ-2 ಸ್ಟೆಲ್ತ್ ಬಾಂಬರ್‌ಗಳು
- ಏಳು ಬಿ-2 ಬಾಂಬರ್‌ಗಳಲ್ಲಿ ತಲಾ 2 ಸಿಬ್ಬಂದಿಗಳಿದ್ದು, 14 ಜನ ಭಾಗಿ
- ಅತ್ಯಂತ ರಹಸ್ಯ ಆಪರೇಷನ್ಗೆ 125ಕ್ಕೂ ಹೆಚ್ಚು ವಿಮಾನಗಳು ಭಾಗಿ
- ಭಾರತೀಯ ಕಾಲಮಾನ ಭಾನುವಾರ ಬೆಳಗಿನ ಜಾವ 4:10ಕ್ಕೆ ದಾಳಿ
- ಭಾನುವಾರ ಬೆಳಗಿನ ಜಾವ 4:35ರ ಹೊತ್ತಿಗೆ ವಿಮಾನಗಳು ವಾಪಾಸ್
- ಕೇವಲ 25 ನಿಮಿಷಗಳಲ್ಲಿ ಕಾರ್ಯಾಚರಣೆ ಅಂತ್ಯ ಮಾಡಿದ ಅಮೆರಿಕಾ
- ಇರಾನ್‌ನ ಮೂರು ಪ್ರಮುಖ ಪರಮಾಣು ತಾಣಗಳ ಮೇಲೆ ನಿಖರ ದಾಳಿ
- ಈ ದಾಳಿಗಳನ್ನು 7 ಸ್ಟೆಲ್ತ್ ಬಿ-2 ಬಾಂಬರ್‌ಗಳ ಮೂಲಕ ನಡೆಸಲಾಗಿದೆ
- ಪರಮಾಣು ತಾಣಗಳ ಮೇಲೆ 14 ಬಂಕರ್ ಬಸ್ಟರ್ ಬಾಂಬ್‌ಗಳ ಬಳಕೆ
- 30,000 ಪೌಂಡ್ ಅಂದ್ರೆ 13,608 ಕೆಜಿ ಬಂಕರ್ ಬಸ್ಟರ್ ಬಾಂಬ್ ಬಳಕೆ
- ಮೊದಲು ಫೋರ್ಡೋ, ನಟಾಂಜ್ ಮೇಲೆ ಬಸ್ಟರ್ ಬಾಂಬ್‌ಗಳ ದಾಳಿ
- ನಂತ್ರ ಇಸ್ಫಹಾನ್ ಮೇಲೆ 2 ಡಜನ್ ಟೊಮಾಹಾಕ್ ಕ್ಷಿಪಣಿಗಳ ಅಟ್ಯಾಕ್
- 9/11 ದಾಳಿ ನಂತರ ಅತಿ ದೀರ್ಘ ಹಾರಾಟ ನಡೆಸಿದ್ದ B-2 ಬಾಂಬರ್
- ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಅಟ್ಯಾಕ್
18 ಗಂಟೆಗಳ ಕಾಲ ರಹಸ್ಯ ಕಾರ್ಯಾಚರಣೆ ನಡೆಸಿದ್ದ ಬಿ-2 ಬಾಂಬರ್ ವಿಮಾನಗಳಿಗೆ ಆಗಸದಲ್ಲಿ ಇಂಧನ ಭರ್ತಿ ಮಾಡಲಾಗಿತ್ತು. ಬಿ-2 ಬಾಂಬರ್ ವಿಮಾನಗಳು ಇರಾನ್ ವಾಯುಪ್ರದೇಶ ಪ್ರವೇಶಿಸಿದಾಗ, ಬೇರೆ ವಿಮಾನಗಳಿಂದ ಎಸ್ಕಾರ್ಟ್, ಬೆಂಬಲದ ವ್ಯವಸ್ಥೆಯನ್ನು ಮಾಡಿತ್ತು. ಇರಾನ್ ನ ಮೂರು ಅಣ್ವಸ್ತ್ರ ತಯಾರಿ ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸಿ, ಆ ಸ್ಥಳಗಳನ್ನು ನಾಶಪಡಿಸಿದ ಬಳಿಕ ಬಿ-2 ಬಾಂಬರ್ ವಿಮಾನಗಳು ಸೇಫಾಗಿ ಅಮೆರಿಕಾದ ಮಿಸ್ಸೂರಿನ ವೈಟ್ ಮ್ಯಾನ್ ವಾಯುನೆಲೆಗೆ ಹಿಂತಿರುಗಿವೆ.
ಇದನ್ನೂ ಓದಿ: ಇರಾನ್ ಹೊರ್ಮುಜ್ ಜಲಸಂಧಿ ಬಂದ್ ಮಾಡಿದರೆ.. ಭಾರತದ ಮೇಲೆ ಏನೆಲ್ಲಾ ಪರಿಣಾಮ..?
ಬಿ-2 ಬಾಂಬರ್ ವಿಮಾನಗಳು ಅಮೆರಿಕಾಕ್ಕೆ ವಾಪಸ್ ಆಗುವ ವಿಡಿಯೋವನ್ನು ಅಮೆರಿಕಾದ ಶ್ವೇತಭವನ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅಪರೇಷನ್ ಮಿಡ್ ನೈಟ್ ಹ್ಯಾಮರ್ನ ಈ ಸೀಕ್ರೇಟ್ ಮಾಹಿತಿಗಳನ್ನು ಈಗ ಅಮೆರಿಕಾದ ಜಂಟಿ ಚೀಫ್ ಸ್ಟಾಫ್ ಅಧ್ಯಕ್ಷ ಜನರಲ್ ಡಾನ್ ಕೈನಿ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಸೀಕ್ರೆಟ್ ಅಪರೇಷನ್ ಬಗ್ಗೆ ಮಾಹಿತಿಯನ್ನು
ಜನರಲ್ ಡಾನ್ ಕೈನಿ ನೀಡಿದ್ದಾರೆ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ