ವಿಮಾನದಲ್ಲಿ ಇಂಧನ ಸ್ವಿಚ್​ಗಳು ಹೇಗೆ ಕೆಲಸ ಮಾಡುತ್ತವೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ

author-image
Veena Gangani
Updated On
ದುರಂತ ವಿಮಾನದ ಪೈಲಟ್ ಖಿನ್ನತೆಯಿಂದ ಬಳಲುತ್ತಿದ್ರಾ? ಕೊನೆಗೂ ನಿಖರ ಕಾರಣ ಬಹಿರಂಗ..?
Advertisment
  • ಏರ್ ಇಂಡಿಯಾ ವಿಮಾನ ದುರಂತದ ಕಾರಣ ಈಗ ಬಹಿರಂಗ
  • ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನ ಪತನ
  • ಕೊನೆಯ ಕ್ಷಣದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಆಗಿದ್ದೇನು?

ಅಹಮದಾಬಾದ್​ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಕಾರಣ ಈಗ ಬಹಿರಂಗವಾಗಿದೆ. 270ಕ್ಕೂ ಹೆಚ್ಚು ಮಂದಿಯ ದಾರುಣ ಸಾವಿಗೆ ಕಾರಣವಾಗಿದ್ದು, ವಿಮಾನದ ಇಂಜಿನ್​ಗೆ ಇಂಧನ ಪೂರೈಕೆಯಾಗದಿರುವುದು. ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಇಂಜಿನ್​ಗೆ ಇಂಧನ ಪೂರೈಕೆಯೇ ಸ್ಥಗಿತವಾಗಿತ್ತು. ವಿಮಾನದ ಇಂಜಿನ್​ಗೆ ಇಂಧನ ಪೂರೈಸುವ ಸ್ವಿಚ್​ಗಳನ್ನು ಆಫ್ ಮಾಡಲಾಗಿತ್ತು. ಇದರಿಂದಾಗಿ ಇಂಧನ ಇಲ್ಲದೇ ಇಂಜಿನ್ ವರ್ಕ್ ಆಗಿಯೇ ಇಲ್ಲ. ಹೀಗಾಗಿ ಈಗ ಪೋಕಸ್, ವಿಮಾನದ ಇಂಧನ ಪೂರೈಕೆಯ ಸ್ವಿಚ್​ಗಳತ್ತ ನೆಟ್ಟಿದೆ. ವಿಮಾನದಲ್ಲಿ ಇಂಧನ ನಿಯಂತ್ರಿಸುವ ಸ್ವಿಚ್ ಕಾರ್ಯನಿರ್ವಹಣೆಯ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ:ಬೆಣ್ಣೆಯಂತೆ ಕೊಬ್ಬು ಕರಗಿಸೋ ಬಟರ್​ ಫ್ರೂಟ್.. ಇದರ ಆರೋಗ್ಯ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರಾ!

publive-image

ಇಂಧನ ಸ್ವಿಚ್​ಗಳು ಹೇಗೆ ಕೆಲಸ ಮಾಡುತ್ತವೆ?

ವಿಮಾನದಲ್ಲಿ ಇಂಧನ ಸ್ವಿಚ್​​ಗಳು ವಿಮಾನದ ಇಂಜಿನ್​ಗೆ ಇಂಧನ ಪೂರೈಕೆಯನ್ನು ನಿಯಂತ್ರಿಸುತ್ತಾವೆ. ವಿಮಾನವನ್ನು ಗ್ರೌಂಡ್ ನಲ್ಲಿ ನಿಲ್ಲಿಸಿದಾಗ, ಇಂಜಿನ್​ಗೆ ಇಂಧನ ಪೂರೈಕೆ ಆರಂಭಿಸಲು ಮತ್ತು ನಿಲ್ಲಿಸಲು ಪೈಲಟ್​ಗಳು ಇಂಧನ ಸ್ವಿಚ್ ಗಳನ್ನು ರನ್ ಮತ್ತು ಕಟ್ ಆಫ್ ಮಾಡ್ತಾರೆ. ವಿಮಾನದ ಇಂಜಿನ್​ಗೆ ಇಂಧನ ಸರಬರಾಜು ಆಗೋದನ್ನು ನಿಲ್ಲಿಸಲು ಕಟ್ ಆಫ್ ಸ್ವಿಚ್ ಬಳಸುತ್ತಾರೆ. ವಿಮಾನ ಟೇಕಾಫ್ ಆಗುವಾಗ, ರನ್ ವೇನಲ್ಲಿ ಚಲಿಸುವಾಗ ಇಂಜಿನ್​ಗೆ ಇಂಧನ ಪೂರೈಕೆಯಾಗಬೇಕು. ಹೀಗಾಗಿ ರನ್ ಎಂಬ ಸ್ವಿಚ್ ಒತ್ತುತ್ತಾರೆ. ಇಂಜಿನ್ ಕಾರ್ಯನಿರ್ವಹಣೆಯನ್ನು ನಿಲ್ಲಿಸಲು ಅಥವಾ ಫುನಃ ಆರಂಭಿಸಲು ಇಂಧನ ಸ್ವಿಚ್ ಗಳನ್ನು ಪೈಲಟ್ ಗಳು ಬಳಕೆ ಮಾಡುತ್ತಾರೆ. ವಿಮಾನ ಹಾರಾಟ ನಡೆಸುವಾಗಲೂ ಯಾವುದಾದರೂ ಇಂಜಿನ್ ಫೈಲ್ಯೂರ್ ಆದರೂ, ಈ ಇಂಧನ ಸ್ವಿಚ್ ಬಳಸಿ ರೀಸ್ಟಾರ್ಟ್ ಮಾಡುವ ಪ್ರಯತ್ನ ಮಾಡುತ್ತಾರೆ.

publive-image

ಏವಿಯೇಷನ್ ತಜ್ಞರು ಹೇಳುವ ಪ್ರಕಾರ, ಪೈಲಟ್ ಗಳು ಆಕಸ್ಮಿಕವಾಗಿ ಇಂಧನ ಸ್ವಿಚ್ ಗಳನ್ನು ಕಟ್ ಆಫ್ ಅಂದರೇ, ಆಫ್ ಮಾಡಲ್ಲ. ಒಂದು ವೇಳೆ, ಇಂಧನದ ಸ್ವಿಚ್ ಕಟ್ ಆಫ್ ಆದರೇ, ಅದರ ಪರಿಣಾಮ ತಕ್ಷಣವೇ ಆಗುತ್ತೆ. ವಿಮಾನದ ಇಂಜಿನ್​ಗೆ ಇಂಧನ ಪೂರೈಕೆ ಸ್ಥಗಿತವಾದರೇ, ಇಂಜಿನ್ ವರ್ಕ್ ಮಾಡುವುದೇ ನಿಂತುಹೋಗುತ್ತೆ. ವಿಮಾನದಲ್ಲಿ ಸ್ವತಂತ್ರವಾದ ಪವರ್ ಸಿಸ್ಟಮ್ ಮತ್ತು ವೈರಿಂಗ್ ವ್ಯವಸ್ಥೆ ಇರುತ್ತೆ. ಇಂಧನದ ಪೈಪ್ ಗಳನ್ನು ಈ ಇಂಧನದ ಸ್ವಿಚ್​​ಗಳು ಕಂಟ್ರೋಲ್ ಮಾಡುತ್ತವೆ ಎಂದು ಅಮೆರಿಕಾದ ಏವಿಯೇಷನ್ ಸೇಫ್ಟಿ ಎಕ್ಸ್ ಫರ್ಟ್ ಜಾನ್ ಕಾಕ್ಸ್ ಹೇಳಿದ್ದಾರೆ.

publive-image

ಇಂಧನ ಸ್ವಿಚ್ ಎಲ್ಲಿರುತ್ತೆ?

ಎರಡು ಇಂಧನ ಕಂಟ್ರೋಲ್ ಸ್ವಿಚ್​​ಗಳು ಬೋಯಿಂಗ್ 787 ವಿಮಾನದಲ್ಲಿ ಥ್ರಸ್ಟ್ ಲಿವರ್ಸ್ ಕೆಳಗೆ ಇರುತ್ತಾವೆ. ಬೋಯಿಂಗ್ ವಿಮಾನಕ್ಕೆ ಜಿಇ ಇಂಜಿನ್ ಅಳವಡಿಸಲಾಗಿತ್ತು.
ಇಂಧನ ಸ್ವಿಚ್ ಗಳನ್ನು ಏನಿದ್ದರೂ, ಪೈಲಟ್ ಗಳು ರನ್ ಮತ್ತು ಕಟ್ ಆಫ್ ಮಾಡಬೇಕು ಅಷ್ಟೇ. ಸ್ವಿಚ್ ಅನ್ನು ಮೇಲಕ್ಕೆ ಎತ್ತಿದರೇ, ರನ್ ಆಗುತ್ತೆ. ಇಂಧನ ಸ್ವಿಚ್ ರನ್ ಸ್ಥಿತಿಯಲ್ಲಿದ್ದಾಗ, ಇಂಜಿನ್​ಗೆ ಇಂಧನ ಪೂರೈಕೆಯಾಗುತ್ತಿದೆ ಎಂದರ್ಥ. ಇನ್ನೂ ಕೆಳಕ್ಕೆ ಎಳೆದರೇ, ಕಟ್ ಆಫ್ ಆಗುತ್ತೆ. ಕಟ್ ಆಫ್ ಅಂದರೇ, ಇಂಜಿನ್​ಗೆ ಇಂಧನ ಪೂರೈಕೆಯಾಗುತ್ತಿಲ್ಲ ಎಂದರ್ಥ. ಇಂಧನ ಸ್ವಿಚ್ ನಲ್ಲಿ ಎರಡೇ ಮೋಡ್ ಇವೆ. ರನ್ ಮತ್ತು ಕಟ್ ಆಫ್ ಎಂಬ 2 ಮೋಡ್ ಗಳು ಮಾತ್ರ ಇವೆ.

publive-image

ಏರ್ ಇಂಡಿಯಾ ವಿಮಾನದಲ್ಲಿ ಆಗಿದ್ದೇನು?

ಪ್ಲೈಟ್ ರೆಕಾರ್ಡರ್ ಪ್ರಕಾರ, ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಇಂಧನದ ಸ್ವಿಚ್, ರನ್ ನಿಂದ ಕಟ್ ಆಫ್ ಸ್ಥಿತಿಗೆ ಹೋಗಿದೆ. ವಿಮಾನದಲ್ಲಿ ಎರಡು ಇಂಜಿನ್ ಗಳಿಗೂ ಎರಡು ಪ್ರತೇಕ ಇಂಧನ ಸ್ವಿಚ್ ಗಳಿವೆ. ಎರಡು ಸ್ವಿಚ್​​ಗಳು ಒಂದು ಸೆಕೆಂಡ್ ಅಂತರದಲ್ಲಿ ರನ್ ನಿಂದ ಕಟ್ ಆಫ್ ಸ್ಥಿತಿಗೆ ಹೋಗಿವೆ. ಇದರಿಂದಾಗಿ ಇಂಜಿನ್ ವರ್ಕ್ ಆಗಿಲ್ಲ, ಇಂಧನ ಇಲ್ಲದೇ, ಇಂಜಿನ್ ವರ್ಕ್ ಮಾಡುವುದಾದರೂ ಹೇಗೆ? ಇಂಜಿನ್ ಶಕ್ತಿ ಕಳೆದುಕೊಂಡಿದೆ. ಕಾಕ್ ಪೀಟ್ ವಾಯ್ಸ್ ರೆಕಾರ್ಡರ್ ನಲ್ಲೂ ಓರ್ವ ಪೈಲಟ್, ಮತ್ತೊಬ್ಬ ಪೈಲಟ್ ಗೆ ನೀವು ಏಕೆ ಇಂಧನವನ್ನು ಕಟ್ ಆಫ್ ಮಾಡಿದ್ದೀರಿ ಎಂದು ಕೇಳಿದ್ದಾರೆ. ಇದರ ವಾಯ್ಸ್ ರೆಕಾರ್ಡಿಂಗ್ ಆಗಿದೆ. ಮತ್ತೊಬ್ಬ ಪೈಲಟ್ ತಕ್ಷಣವೇ ನಾನು ಹಾಗೇ ಇಂಧನ ಸ್ವಿಚ್ ಕಟ್ ಆಫ್ ಮಾಡಿಲ್ಲ ಎಂದು ಹೇಳಿದ್ದಾರೆ.

publive-image

ಇದಾದ ಸೆಕೆಂಡ್ ನಲ್ಲೇ ವಿಮಾನದ ಇಂಜಿನ್​ಗೆ ಇಂಧನ ಪೂರೈಸುವ ಸ್ವಿಚ್ ರನ್ ಮಾಡಲಾಗಿದೆ. ಎರಡು ಇಂಧನ ಕಂಟ್ರೋಲ್ ಮಾಡುವ ಸ್ವಿಚ್​​ಗಳು ರನ್ ಸ್ಥಿತಿಯಲ್ಲಿದ್ದಿದ್ದು ಪತನವಾದ ಸ್ಥಳದಲ್ಲಿನ ಪರಿಶೀಲನೆ ವೇಳೆಯಲ್ಲಿ ಪತ್ತೆಯಾಗಿದೆ. ಇಂಧನ ಕಂಟ್ರೋಲ್ ಮಾಡುವ ಸ್ವಿಚ್​​ಗಳು ಕಟ್ ಆಫ್ ನಿಂದ ರನ್ ಸ್ಥಿತಿಗೆ ಹೋದರೂ, ವಿಮಾನ ಹಾರಾಟ ನಡೆಸುತ್ತಿದ್ದರಿಂದ , ಪ್ರತಿಯೊಂದು ಇಂಜಿನ್ ಆಟೋಮ್ಯಾಟಿಕ್ ಆಗಿ ಮ್ಯಾನೇಜ್ ಆಗಿ ಹಾರಾಟ ನಡೆಸಬೇಕು. ವಿಮಾನದ ಶಕ್ತಿ, ಬಲ ಮತ್ತೆ ಸಿಗಬೇಕು. ನತದೃಷ್ಟ ಏರ್ ಇಂಡಿಯಾ ವಿಮಾನದಲ್ಲಿ ಕಟ್ ಆಫ್ ನಿಂದ ರನ್ ಸ್ಥಿತಿಗೆ ಇಂಧನ ಸ್ವಿಚ್​​ಗಳು ಹೋದ ಬಳಿಕ , ಇಂಜಿನ್ 2 ವರ್ಕ್ ಆದರೂ, ಪೂರ್ತಿಯಾಗಿ ವರ್ಕ್ ಆಗಿಲ್ಲ. ಇಂಜಿನ್ 1 ಇಂಧನ ಪೂರೈಕೆ ಬಳಿಕ ತಕ್ಷಣವೇ ವರ್ಕ್ ಆಗಿಲ್ಲ.
ಯಾವುದೇ ತಲೆ ಕೆಟ್ಟ ಪೈಲಟ್ ಕೂಡ ಇಂಧನ ಸ್ವಿಚ್ ಗಳನ್ನು ಆಫ್ ಮಾಡಲ್ಲ, ವಿಶೇಷವಾಗಿ ವಿಮಾನ ಮೇಲಕ್ಕೇರುವಾಗ ಇಂಧನ ಸ್ವಿಚ್ ಗಳನ್ನು ಕಟ್ ಆಫ್ ಮಾಡಲ್ಲ ಎಂದು ಅಮೆರಿಕಾದ ಏವಿಯೇಷನ್ ಸೇಫ್ಟಿ ಎಕ್ಸ್ ಫರ್ಟ್ ಜಾನ್ ನ್ಯಾನ್ಸಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment