/newsfirstlive-kannada/media/post_attachments/wp-content/uploads/2025/04/SUNITA-WILLIAMS.jpg)
ಇತ್ತೀಚಿಗೆ ಬಾಹ್ಯಾಕಾಶದಿಂದ ಭೂಮಿಗೆ ಬಂದಿರುವ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶ ಕ್ಷೇತ್ರದದಲ್ಲಿ ದೊಡ್ಡ ಸಾಧನೆಯೊಂದಿಗೆ ಜಗತ್ತಿನ ಗಮನವನ್ನು ಸೆಳೆದರು. ಮಾರ್ಚ್ 18 ರಂದು ಭೂಮಿಗೆ ಬಂದ ಸುನೀತಾ ವಿಲಿಯಮ್ಸ್ ಕೆಲವೊಂದು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತೆ ಎಂಬ ಪ್ರಶ್ನೆಗೆ ಸುನೀತಾ ವಿಲಿಯಮ್ಸ್ ತುಂಬಾ ಚೆನ್ನಾಗಿ ಉತ್ತರ ನೀಡಿದ್ದಾರೆ.
ಬಾಹ್ಯಾಕಾಶದಿಂದ ಭೂಮಿಗೆ ವಾಪಸ್ ಬಂದ ಮೇಲೆ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಭಾರತದ ಬಗ್ಗೆ ಅವರಿಂದ ಬಂದ ಮೊದಲ ಶಬ್ದ ಭಾರತ ಎನ್ನುವುದೇ ಒಂದು ಅದ್ಭುತ. ಬಾಹ್ಯಾಕಾಶದಿಂದ ಹಿಮಾಲಯ ಪರ್ವತಗಳನ್ನು ನೋಡುವುದೇ ನಮಗೊಂದು ಎಲ್ಲಿಲ್ಲದ ಖುಷಿ. ನಾವು ಬಾಹ್ಯಾಕಾಶಕ್ಕೆ ಹೋಗುವಾಗ ಹಾಗೂ ಭೂಮಿಗೆ ಬರುವಾಗಿ ಅದ್ಭುತ ಎನಿಸುವ ಹಿಮಾಲಯದ ಚಿತ್ರಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೇಸಿಕ್ ಮೊಬೈಲ್ ಬಳಸೋರಿಗೆ ಗುಡ್ನ್ಯೂಸ್; ಕಡಿಮೆ ಬೆಲೆಗೆ ಹೊಸ ಪ್ಲಾನ್!
ನಾವು ಇರುವ ಕಕ್ಷಯಿಂದ ಅತ್ಯಂತ ರಂಗು ರಂಗಾಗಿ ಭಾರತ ಗೋಚರಿಸುತ್ತದೆ. ಪ್ರಮುಖವಾಗಿ ಗುಜರಾತ್ ಮತ್ತು ಮುಂಬೈನ ಭೂಮಿಗಳು ಅದ್ಭುತವಾಗಿ ಕಾಣುತ್ತವೆ. ದೊಡ್ಡ ದೊಡ್ಡ ಸಿಟಿಗಳು ಪುಟ್ಟ ಪುಟ್ಟ ಹಳ್ಳಿಗಳಂತೆ ಅಲ್ಲಿ ನಮಗೆ ಗೋಚರಿಸುತ್ತವೆ ಎಂದು ಸುನೀತಾ ವಿಲಿಯಮ್ಸ್ ಭಾರತದ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಸುನಿತಾರನ್ನು ಕರೆತಂದ ನೌಕೆಯ ಶಕ್ತಿ ಎಂಥದ್ದು..? ಅದರ ಯಶಸ್ವಿ ರೋಚಕ ಕಾರ್ಯಾಚರಣೆಗಳು ಏನೇನು?
ಇನ್ನು ತನ್ನ ತಂದೆಯ ದೇಶದೊಂದಿಗೆ ಮರುಸಂಪರ್ಕದ ಬಗ್ಗೆ ಮಾತನಾಡಿದ ಸುನೀತಾ ವಿಲಿಯಮ್ಸ್, ಭಾರತದ ಬಾಹ್ಯಾಕಾಶ ಸಂಸ್ಥೆಗಳು ಬೆಳೆಯುತ್ತಿದ್ದ ಪರಿಯನ್ನು ಅದರ ಪಾತ್ರವನ್ನು ಹಾಡಿ ಹೋಗಳಿದ್ದಾರೆ. ನನ್ನ ತಂದೆಯ ನೆಲವಾದ ಭಾರತದ ಗಗನಯಾತ್ರಿಗಳು ಕೂಡ ಆಕ್ಸಿಯಮ್ ಮಿಷನ್ ಮೂಲಕ ಬಾಹ್ಯಾಕಾಶಕ್ಕೆ ಹೋಗುತ್ತಿರುವುದು ನಿಜಕ್ಕೂ ನನಗೆ ಖುಷಿ ನೀಡಿದೆ. ಭಾರತ ಒಂದು ಶ್ರೇಷ್ಠ ದೇಶ ಮತ್ತು ಅತ್ಯದ್ಭುತ ಪ್ರಜಾಪ್ರಭುತ್ವ ಹೊಂದಿರುವ ದೇಶ ಎಂದು ಹಾಡಿ ಹೊಗಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ