RCBಗೆ ಶ್ರೇಯಸ್ ಅಯ್ಯರ್ ಅಂದ್ರೆ ಭಯನಾ.. ಪಂಜಾಬ್ ಕ್ಯಾಪ್ಟನ್​ ಬ್ಯಾಟಿಂಗ್, ಗೇಮ್ ಪ್ಲಾನ್ ಹೇಗಿರುತ್ತೆ?

author-image
Bheemappa
Updated On
RCB vs PBKS ನಡುವಿನ ಜಿದ್ದಾಜಿದ್ದಿ ಹೇಗಿದೆ.. ಹೆಚ್ಚು ಬಾರಿ ಮ್ಯಾಚ್​ ಗೆದ್ದವರು ಯಾರು?
Advertisment
  • ಯಾವ ಬೌಲಿಂಗ್ ಜೊತೆ ಶ್ರೇಯಸ್ ಅಯ್ಯರ್ ವೇಗದ ರನ್​ ಗಳಿಸ್ತಾರೆ?
  • ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಕುರಿತು ತಲೆ ಕೆಡಿಸಿಕೊಂಡ ಆರ್​​ಸಿಬಿ
  • ಪಂದ್ಯದಲ್ಲಿ ಕ್ರೀಸ್​ಗೆ ಬರುವ ಶ್ರೇಯಸ್ ಬ್ಯಾಟಿಂಗ್ ಅಬ್ಬರ ಹೇಗಿರುತ್ತೆ?

ಪಂಜಾಬ್ ಕಿಂಗ್ಸ್​ ತಂಡವನ್ನ ಮಣಿಸಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಭರ್ಜರಿ ಸಮರಾಭ್ಯಾಸ ನಡೆಸಿದೆ. ಪಂಜಾಬ್ ತಂಡವನ್ನ ಬಗ್ಗುಬಡಿಯಲು ತುದಿಗಾಲಲ್ಲಿ ನಿಂತಿರುವ ಆರ್​ಸಿಬಿ, ತವರಲ್ಲಿ ಮೊದಲ ಗೆಲುವನ್ನ ಎದುರು ನೋಡ್ತಿದೆ. ಆದ್ರೆ ಬೆಂಗಳೂರು ತಂಡಕ್ಕೆ ಚಿನ್ನಸ್ವಾಮಿಯಲ್ಲಿ ಗೆಲುವು ಸುಲಭವಲ್ಲ. ಆರ್​ಸಿಬಿ ಈ ಪಂದ್ಯ ಗೆಲ್ಲಬೇಕಾದ್ರೆ, ಮೊದಲು ಕಿಂಗ್ಸ್ ನಾಯಕನನ್ನ ಕಟ್ಟಿಹಾಕಬೇಕು. ಅದು ಯಾಕೆ ಗೊತ್ತಾ?.

ಪಂಜಾಬ್ ಕಿಂಗ್ಸ್​ಗೆ ಆರ್​ಸಿಬಿ ವಿರುದ್ಧದ ಪಂದ್ಯ, ಕೇವಲ ಪಂದ್ಯವಲ್ಲ, ಅದು ಪ್ರತಿಷ್ಠೆ ಜೊತೆಗೆ ಗೆಲ್ಲಲೇಬೇಕಾದ ಪಂದ್ಯ. ಇಂದು ಗೆದ್ರೆ ಕಿಂಗ್ಸ್, ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನಕ್ಕೆ ಜಿಗಿಯಲಿದೆ. ಅಷ್ಟೇ ಅಲ್ಲ, ಒಳ್ಳೆ ರನ್​​ರೇಟ್​ನಿಂದ ಏನಾದ್ರೂ ಪಂದ್ಯ ಗೆದ್ರೆ, ಪಂಜಾಬ್​​ಗೆ ಡಬಲ್ ಧಮಾಕಾ. ಚಿನ್ನಸ್ವಾಮಿಯಲ್ಲಿ ಕಿಂಗ್ಸ್​ಗೆ ಗೆಲುವು ಅಸಾಧ್ಯವೇನಲ್ಲ. ಯಾಕಂದ್ರೆ ಪಂಜಾಬ್​ ತಂಡದಲ್ಲಿ ಸಕ್ಸಸ್​​​ಫುಲ್ ಕ್ಯಾಪ್ಟನ್ ಮತ್ತು ಇನ್​ಫಾರ್ಮ್​​ ಬ್ಯಾಟ್ಸ್​ಮನ್​​​ ಶ್ರೇಯಸ್ ಅಯ್ಯರ್ ಇದ್ದಾರೆ. ಶ್ರೇಯಸ್ ಮಿಂಚಿದ್ರೆ ಯಶಸ್ಸು ದೂರವೇನಲ್ಲ.

publive-image

ಸಾಲಿಡ್ ಫಾರ್ಮ್​, ಕನ್ಸಿಸ್ಟೆಂಟ್ ಶ್ರೇಯಸ್..!

ಐಪಿಎಲ್ ಸೀಸನ್-18ರಲ್ಲಿ ಶ್ರೇಯಸ್ ಅಯ್ಯರ್ ಸೂಪರ್ಬ್​ ಫಾರ್ಮ್​ನಲ್ಲಿದ್ದಾರೆ. ಟೂರ್ನಿಯುದ್ದಕ್ಕೂ ಕನ್ಸಿಸ್ಟೆಂಟ್ ಆಗಿ ಪರ್ಫಾಮ್ ಮಾಡ್ತಿರುವ ಶ್ರೇಯಸ್, ಅತಿ ಹೆಚ್ಚು ರನ್​ಗಳಿಸಿದವರ ಲಿಸ್ಟ್​ನಲ್ಲಿ, ಟಾಪ್ ಫೋರ್​ನಲ್ಲಿದ್ದಾರೆ. ಈಗಾಗಲೇ 3 ಅರ್ಧಶತಕಗಳನ್ನ ಸಿಡಿಸಿರುವ ಶ್ರೇಯಸ್, ಪಂಜಾಬ್​ನ ರಿಯಲ್ ಕಿಂಗ್ ಆಗಿ ಬ್ಯಾಟಿಂಗ್​ನಲ್ಲಿ ಡಾಮಿನೇಟ್ ಮಾಡ್ತಿದ್ದಾರೆ.

ಶ್ರೇಯಸ್ ಅಗ್ರೆಸಿವ್ ಇಂಟೆಂಟ್​, ತಂಡಕ್ಕೆ ಬಲ..!

ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಅಟ್ಯಾಕಿಂಗ್ ಅಪ್ರೋಚ್​ನಿಂದ, ಎದುರಾಳಿಗಳ ವಿರುದ್ಧ ರನ್​​​ ಸ್ಕೋರ್ ಮಾಡ್ತಿದ್ದಾರೆ. ಶ್ರೇಯಸ್ ಬ್ಯಾಟಿಂಗ್ ಇಂಟೆಂಟ್ ಹೇಗಿದೆ ಅನ್ನೋದನ್ನ, ಅವ್ರ ಸ್ಟ್ರೈಕ್​ರೇಟೇ ಹೇಳುತ್ತದೆ. ಟೂರ್ನಿಯಲ್ಲಿ ಇದುವರೆಗೂ 122 ಎಸೆತಗಳನ್ನ ಎದುರಿಸಿರೋ ಶ್ರೇಯಸ್, ಬರೋಬ್ಬರಿ 250 ರನ್​ ಸಿಡಿದ್ದಾರೆ. ಶ್ರೇಯಸ್ ಬ್ಯಾಟಿಂಗ್ ಸ್ಟ್ರೈಕ್​ರೇಟ್ 205. ಇದು ಶ್ರೇಯಸ್​ರ Unbelievable ಬ್ಯಾಟಿಂಗ್..!

ಸ್ಪಿನ್ನರ್ಸ್ ವಿರುದ್ಧ ಶ್ರೇಯಸ್ ಮೇಲುಗೈ..!

ಶ್ರೇಯಸ್ ಅಯ್ಯರ್ ಸ್ಪಿನ್ ವಿರುದ್ಧ ಅದ್ಭುತವಾಗಿ ಆಡ್ತಾರೆ. ಸ್ಪಿನ್ ಬೌಲಿಂಗ್​​ನಲ್ಲಿ ಶ್ರೇಯಸ್ ವೇಗವಾಗಿ ರನ್​ ಸ್ಕೋರ್ ಮಾಡ್ತಾರೆ. ಸ್ಪಿನ್ನರ್ಸ್​ ವಿರುದ್ಧ ಅತಿ ಹೆಚ್ಚು ಸಿಕ್ಸರ್ಸ್, ಉತ್ತಮ ಸ್ಟ್ರೈಕ್​ರೇಟ್ ಹೊಂದಿರುವ ಶ್ರೇಯಸ್, ಆರ್​ಸಿಬಿಯ ಕೃನಾಲ್ ಪಾಂಡ್ಯ, ಸುಯೇಷ್ ಶರ್ಮಾ, ಲಿಯಾಮ್ ಲಿವಿಂಗ್​ಸ್ಟೋನ್​ರನ್ನ ಟ್ಯಾಕಲ್ ಮಾಡೋಕೆ ಬೆಸ್ಟ್ ಆಪ್ಶನ್. ​​​​​​​​​​​​​ಅದ್ರಲ್ಲೂ ಬ್ಯಾಟಿಂಗ್​ ಟ್ರ್ಯಾಕ್​ ಸಿಕ್ಕಿಬಿಟ್ರೆ, ಶ್ರೇಯಸ್​ನ ಹಿಡಿಯೋರೇ ಇಲ್ಲ..!

ಸಂದರ್ಭಕ್ಕೆ ಹೊಂದಿಕೊಂಡು ಆಟ..!

ಅಡಾಬ್ಟಬಲಿಟಿ ಅಂದ್ರೆ, ಸಂದರ್ಭಕ್ಕೆ ತಕ್ಕ ಆಟ. ಇದನ್ನ ಶ್ರೇಯಸ್ ಅಯ್ಯರ್ ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಬೌಲರ್​ಗಳ ವಿರುದ್ಧ ತಿರುಗಿ ಬೀಳೋದು. ಬೌಲರ್​ಗಳನ್ನ ದಂಡಿಸೋದು, ಶ್ರೇಯಸ್​​ಗೆ ಹೇಳಿಕೊಡಬೇಕಿಲ್ಲ. ಶ್ರೇಯಸ್​ಗೆ ಕ್ರಿಕೆಟಿಂಗ್ ಬ್ರೈನ್ ಸೂಪರ್ ಆಗಿದೆ. ಹಾಗಾಗಿ ಯಾವಾಗ ಹೇಗೆ ಬ್ಯಾಟ್ ಮಾಡಬೇಕು ಅನ್ನೋದು ಗೊತ್ತಿದೆ. ಶ್ರೇಯಸ್, ಪಂಜಾಬ್ ಕಿಂಗ್ಸ್​ನ ಆಪತ್ಭಾಂದವ.

ಇದನ್ನೂ ಓದಿ:IPL ತಂಡದ ಬ್ಯಾಟಿಂಗ್​​ ಕೋಚ್​ಗಳ ಸಂಬಳ ಎಷ್ಟು.. ಕನ್ನಡಿಗ ರಾಹುಲ್​ ದ್ರಾವಿಡ್​ಗೆ ಎಷ್ಟು ಕೋಟಿ ಹಣ ಕೊಡ್ತಾರೆ?

publive-image

ನಾಯಕನಾಗಿ ಶ್ರೇಯಸ್ ಸೂಪರ್ ಸಕ್ಸಸ್..!

ಪಂಜಾಬ್ ಕಿಂಗ್ಸ್​ ತಂಡವನ್ನ ನಾಯಕನಾಗಿ ಶ್ರೇಯಸ್, ಸಾಲಿಡ್ ಆಗಿ ಲೀಡ್ ಮಾಡ್ತಿದ್ದಾರೆ. ಸಕ್ಸಸ್ ಕೂಡ ಕಂಡಿದ್ದಾರೆ. ಈಗಾಗಲೇ ಐಪಿಎಲ್​ನಲ್ಲಿ ತನ್ನ ಲೀಡರ್​ಶಿಪ್ ಕ್ವಾಲಿಟಿಸ್ ತೋರಿಸಿರುವ ಶ್ರೇಯಸ್, ಕಳೆದ ಸೀಸನ್​ನಲ್ಲಿ ಕೆಕೆಆರ್​ಗೆ ಕಪ್ ಕೂಡ ಗೆಲ್ಲಿಸಿಕೊಟ್ಟಿದ್ದಾರೆ. ಸ್ಮಾರ್ಟ್, ಗ್ರೇಟ್ ಌಂಡ್ ಬೆಸ್ಟ್ ಟ್ಯಾಕ್ಟಿಕಲ್ ಕ್ಯಾಪ್ಟನ್ ಆಗಿರುವ ಶ್ರೇಯಸ್, ಪಂಜಾಬ್​ಗೆ ಸಿಕ್ಕಿರೋ ಅದ್ಭುತ ಸಾರಥಿ.

ಸದ್ಯ ಆರ್​ಸಿಬಿ, ಎದುರಾಳಿ ನಾಯಕ ಶ್ರೇಯಸ್ ಅಯ್ಯರ್ ಬಗ್ಗೆಯಂತೂ, ತಲೆ ಕೆಡಿಸಿಕೊಂಡಿದೆ. ಅಯ್ಯರ್​​ರ ಬ್ಯಾಟಿಂಗ್ ಫಾರ್ಮ್​, ಗೇಮ್ ಪ್ಲಾನ್ ಉಲ್ಟಾ ಮಾಡಲು, ಬ್ಯಾಕ್​ ಹ್ಯಾಂಡ್​ನಲ್ಲಿ ವರ್ಕ್​​ಔಟ್ ಮಾಡ​​​​​​​​ದೇ ಇರೋದಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment