/newsfirstlive-kannada/media/post_attachments/wp-content/uploads/2024/11/INDIAN-VOTERS-1.jpg)
ಅಮೆರಿಕಾದ ಚುನಾವಣೆ ಇಂದು ಶುರುವಾಗಲಿದೆ. ಯಾರ ಒಲವು ಯಾರ ಕಡೆಗೆ ಇದೆ ಎಂದು ಸ್ಪಷ್ಟವಾದ ಒಂದು ಸಂದೇಶ ಬರಲಿದೆ. ನವೆಂಬರ್ 5 ರಂದು ಅಮೆರಿಕಾದ ಅಧ್ಯಕ್ಷ ಗಾದಿಗೆ ಏರುವವರು ಯಾರು? ಕಮಲಾ ಹ್ಯಾರಿಸ್ ಇಲ್ಲವೇ ಡೊನಾಲ್ಡ್ ಟ್ರಂಪ್ ಎಂಬ ಖಚಿತ ಮಾಹಿತಿ ಸಿಗಲಿದೆ ಇದರ ನಡುವೆ ಅಮೆರಿಕಾದಲ್ಲಿರುವ ಭಾರತೀಯರ ವೋಟು ಯಾರು ಬಾಚಿಕೊಳ್ಳುತ್ತಿದ್ದಾರೆ ಎಂಬ ಚರ್ಚೆಯೂ ಕೂಡ ಮುನ್ನೆಲೆಗೆ ಬಂದಿದೆ. ಅಮೆರಿಕಾದ ಹಲವು ರಾಜ್ಯಗಳಲ್ಲಿ ಭಾರತೀಯ ಮೂಲದವರ ವೋಟುಗಳು ಕೂಡ ನಿರ್ಣಾಯಕ ಪಾತ್ರವಹಿಸುತ್ತವೆ. ಸದ್ಯದ ಟ್ರೆಂಡ್ ನೋಡಿದಾಗ ಯುಎಸ್​ನಲ್ಲಿರುವ ಭಾರತೀಯರ ಮತಗಳು ಡೆಮಾಕ್ರಟಿಕ್ ಪಕ್ಷದತ್ತ ಹೊರುಳುತ್ತಿರುವ ಸ್ಪಷ್ಟ ಅಂಕಿ ಅಂಶಗಳು ಎದುರಿಗೆ ಬಂದಿವೆ. ಅದರಲ್ಲೂ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಧಕ್ಷೀಯ ಅಭ್ಯರ್ಥಿಯಾದ ಮೇಲೆ ಭಾರತೀಯ ಮೂಲದ ಅಮೆರಿಕಾ ನಿವಾಸಿಗಳು ಡೆಮಾಕ್ರಟಿಕ್ ಪಕ್ಷದತ್ತ ಹೊರಳಿದ್ದಾರೆ ಅದರಲ್ಲೂ ಮಹಿಳೆಯರು ಹೆಚ್ಚು ಕಮಲಾ ಹ್ಯಾರಿಸ್ ಬಗ್ಗೆ ಒಲವು ತೋರಿದ್ದಾರೆ.
ಒಂದು ಸರ್ವೆ ಪ್ರಕಾರ ಕಮಲಾ ಹ್ಯಾರಿಸ್ ಬಗೆಗೆ ಒಲವು ತೋರುವಲ್ಲಿ ಭಾರತೀಯ ಮಹಿಳೆಯರು ಪುರುಷರನ್ನು ಮೀರಿಸಿದ್ದಾರೆ. ಯುಎಸ್​ನ 10 ಜನ ಭಾರತೀಯ ಮತದಾರರದಲ್ಲಿ 6 ಜನರು ನಾವು ಕಮಲಾ ಹ್ಯಾರಿಸ್​ಗೆ ವೋಟು ಹಾಕುವುದಾಗಿ ಹೇಳಿದ್ದಾರೆ. ಅದರಲ್ಲೂ ಶೇಕಡಾ 67 ರಷ್ಟು ಮಹಿಳೆಯರು ನಾವು ಕಮಲಾ ಹ್ಯಾರಿಸ್​ಗೆ ಮತ ಹಾಕುವುದಾಗಿ ಹೇಳಿದ್ರೆ ಪುರುಷರು ಶೇಕಡಾ 53 ರಷ್ಟು ಮಂದಿ ಕಮಲಾ ಹ್ಯಾರಿಸ್ ಬಗ್ಗೆ ಒಲವು ತೋರಿದ್ದಾರೆ. ಹೋಲಿಕೆ ಮಾಡಿ ನೋಡಿದಾಗ ಪುರುಷರಿಗಿಂತ ಮಹಿಳೆಯರೇ ಕಮಲಾ ಹ್ಯಾರಿಸ್ ಬಗ್ಗೆ ಹೆಚ್ಚು ಒಲವು ಹೊಂದಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಹೆಚ್ಚು ಭಾರತೀಯರು ವಾಸವಿರುವ ನ್ಯೂಯಾರ್ಕ್ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ಕಮಲಾ ಹ್ಯಾರಿಸ್ ಜನಪ್ರಿಯತೆ ಉತ್ತುಂಗದಲ್ಲಿದೆ. ಇಲ್ಲಿನ ಸುಮಾರು ಶೇಕಡಾ 51ರಷ್ಟು ಅಮೆರಿಕಾದ ಭಾರತೀಯ ಮಹಿಳಾ ಮತದಾರರು ಕಮಲಾ ಹ್ಯಾರಿಸ್​ಗೆ ಮತ ಹಾಕುವುದಾಗಿ ಹೇಳಿದ್ರೆ ಶೇಕಡಾ 41 ರಷ್ಟು ಮಹಿಳೆಯರು ಟ್ರಂಪ್​ಗೆ ಮತ ಹಾಕುವುದಾಗಿ ಹೇಳಿದ್ದಾರೆ. ಇನ್ನು ಪುರುಷರಲ್ಲಿ ಶೇಕಡಾ 45 ರಷ್ಟು ಮಂದಿ ಕಮಲಾ ಹ್ಯಾರಿಸ್​ ಅವರತ್ತ ಒಲವು ತೋರಿದ್ದರೆ ಶೇಕಡಾ 49 ರಷ್ಟು ಜನರು ಟ್ರಂಪ್ ಎನ್ನುತ್ತಿದ್ದಾರೆ.
ಇದನ್ನೂ ಓದಿ:ನಾಳೆ ಅಮೆರಿಕಾ ಚುನಾವಣೆ; ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ; ನೀವು ಓದಲೇಬೇಕಾದ ಸ್ಟೋರಿ
ಆದರೆ ಇನ್ನೊಂದು ಸರ್ವೆ 2024 ಇಂಡಿಯನ್ ಅಮೆರಿಕನ್ ಆ್ಯಟಿಟ್ಯೂಡ್ ಪ್ರಕಾರ ಭಾರತೀಯ ಮೂಲದ ಮಹಿಳಾ ಮತದಾರರು ಅತಿಹೆಚ್ಚು ಒಲವನ್ನು ಕಮಲಾ ಹ್ಯಾರಿಸ್​ರತ್ತ ತೋರಿದ್ದಾರೆ. ಈಗಾಗಲೇ ಹೇಳಿದಂತೆ ಶೇಕಡಾ 67ರಷ್ಟು ಮಹಿಳೆಯರು ನಮ್ಮ ಮತ ಕಮಲಾ ಹ್ಯಾರಿಸ್​ಗೆ ಎನ್ನುತ್ತಿದ್ದಾರೆ. ಕಮಲಾ ಹ್ಯಾರಿಸ್ ಭಾರತೀಯ ಮೂಲದವರು ಎನ್ನುವ ಒಂದು ಭಾವನಾತ್ಮಕ ನಂಟು ಹಾಗೂ ಮೊದಲ ಮಹಿಳಾ ಅಧ್ಯಕ್ಷರನ್ನು ಅಮೆರಿಕಾ ಪಡೆಯಲಿ ಎಂಬ ಸ್ತ್ರೀವಾದ ಇವೆಲ್ಲವೂ ಕೂಡ ಭಾರತೀಯ ಮಹಿಳಾ ಮತದಾರರನ್ನು ಕಮಲಾ ಹ್ಯಾರಿಸ್​ರತ್ತ ಸೆಳೆದಿವೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us