ನಟ ದರ್ಶನ್ ತಾಯಿ ಮೀನಾ ತೂಗುದೀಪ ಹೇಗಿದ್ದಾರೆ? ಸುಳ್ಳು ಸುದ್ದಿ ಹಬ್ಬಿಸಿದ್ಯಾರು?

author-image
admin
Updated On
ನಟ ದರ್ಶನ್ ತಾಯಿ ಮೀನಾ ತೂಗುದೀಪ ಹೇಗಿದ್ದಾರೆ? ಸುಳ್ಳು ಸುದ್ದಿ ಹಬ್ಬಿಸಿದ್ಯಾರು?
Advertisment
  • ನ್ಯೂಸ್‌ ಫಸ್ಟ್ ಚಾನೆಲ್‌ಗೆ ಸ್ಪಷ್ಟನೆ ನೀಡಿದ ಮೀನಾ ತೂಗುದೀಪ
  • ಕೆಲ ದಿನಗಳ ಹಿಂದೆ ಜೈಲಿನಲ್ಲಿರುವ ದರ್ಶನ್ ಅವರ ಭೇಟಿಯಾಗಿದ್ದರು
  • ಒಂದೇ ಕಿಡ್ನಿಯಲ್ಲಿ 25 ವರ್ಷಗಳಿಂದ ಜೀವಿಸುತ್ತಿರುವ ಮೀನಾ!

ಮೈಸೂರು: ನಟ ದರ್ಶನ್ ತೂಗುದೀಪ ಅವರ ತಾಯಿ ಮೀನಾ ತೂಗುದೀಪ ಅವರು ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗಳಾಗಿಲ್ಲ. ಆದರೆ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದು, ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ನಟ, ನಟಿಯರು ಆರೋಪಿಗಾಗಿ ಜೈಲಿಗೆ ಹೋಗ್ತಿದ್ದಾರೆ.. ನಾವು ಎಲ್ಲಿಗೆ ಹೋಗ್ಬೇಕು? ರೇಣುಕಾಸ್ವಾಮಿ ತಾಯಿ ಕಣ್ಣೀರು

ಸದ್ಯ ತಮ್ಮ ಆರೋಗ್ಯದ ಬಗ್ಗೆ ಖುದ್ದು ಮೀನಾ ತೂಗುದೀಪ ಅವರೇ ನ್ಯೂಸ್‌ ಫಸ್ಟ್ ಚಾನೆಲ್‌ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ನನ್ನ ಆರೋಗ್ಯದಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಿರುವ ಸುದ್ದಿಗಳೆಲ್ಲಾ ಸುಳ್ಳು. ನಾನು ಆರೋಗ್ಯದಿಂದ ಆರಾಮಾಗಿದ್ದೇನೆ ಎಂದು ಮೀನಮ್ಮ ತಿಳಿಸಿದ್ದಾರೆ.

ಇದನ್ನೂ ಓದಿ: ನಾನು ರೇಣುಕಾಸ್ವಾಮಿ ಕುಟುಂಬದ ಪರ.. ದರ್ಶನ್‌ಗಾಗಿ ಕಾಮೆಂಟ್‌ ಮಾಡುವವರಿಗೆ ಪ್ರಥಮ್‌ ತಿರುಗೇಟು; ಏನಂದ್ರು?

ಮೀನಾ ತೂಗುದೀಪ ಅವರು ಸದ್ಯ ಮೈಸೂರಿನ ಸಿದ್ದಾರ್ಥನಗರದ ಮುಪಾ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಮೀನಮ್ಮ ಭೇಟಿಯಾಗಿ ಬಂದಿದ್ದರು.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅವರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್ ಜೈಲಿಗೆ ಹೋದ ಸಂದರ್ಭದಲ್ಲಿ ತಾಯಿ ಮೀನಾ ಅವರು ಬೇಸರಕ್ಕೆ ಒಳಗಾಗಿದ್ದರು. ಕೆಲವು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯೂ ಎದುರಾಗಿತ್ತು ಎನ್ನಲಾಗಿತ್ತು. ಪತಿ ಶ್ರೀನಿವಾಸ ತೂಗುದೀಪ ಅವರಿಗೆ ಮೀನಾ ತೂಗುದೀಪ ಅವರು ಒಂದು ಕಿಡ್ನಿಯನ್ನು ದಾನ ಮಾಡಿದ್ದಾರೆ. ಒಂಟಿ‌ ಕಿಡ್ನಿಯಲ್ಲಿಯೇ ಕಳೆದ 25 ವರ್ಷಗಳಿಂದ ಮೀನಾ ತೂಗುದೀಪ ಅವರ ಜೀವನ ಸಾಗಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment