newsfirstkannada.com

ಹೆಚ್‌.ಡಿ ರೇವಣ್ಣ ಆರೋಗ್ಯ ಸಮಸ್ಯೆ ಏನು? ಬೌರಿಂಗ್ ಆಸ್ಪತ್ರೆ ವೈದ್ಯರು ಬಿಚ್ಚಿಟ್ರು ಅಸಲಿ ವಿಷಯ; ಏನಂದ್ರು?

Share :

Published May 5, 2024 at 7:52pm

Update May 5, 2024 at 7:53pm

  ಹೆಚ್‌.ಡಿ ರೇವಣ್ಣ ಅವರ ಬಿಪಿ, ಶುಗರ್, ಪಲ್ಸ್ ರೇಟ್ ನಾರ್ಮಲ್ ಇದೆ

  ಬೌರಿಂಗ್ ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ. ಕೆಂಪರಾಜ್ ಪ್ರತಿಕ್ರಿಯೆ

  ಹೆಚ್‌.ಡಿ ರೇವಣ್ಣ ಅವರು ತನಿಖೆಗೆ ಸಹಕರಿಸುವಷ್ಟು ಸ್ಟೇಬಲ್ ಇದ್ದಾರಾ?

ಬೆಂಗಳೂರು: ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರು SIT ಬಂಧನದಲ್ಲಿದ್ದಾರೆ. ನಿನ್ನೆಯಿಂದ ವಿಚಾರಣೆ ನಡೆಸಿರುವ SIT ಅಧಿಕಾರಿಗಳು ಇಂದು ರೇವಣ್ಣ ಅವರ ಆರೋಗ್ಯ ತಪಾಸಣೆ ನಡೆಸಿದರು. ಬೌರಿಂಗ್ ಆಸ್ಪತ್ರೆಯಲ್ಲಿ ಹೆಚ್‌.ಡಿ ರೇವಣ್ಣ ಅವರ ಹೆಲ್ತ್ ಚೆಕಪ್‌ ಮಾಡಿದ್ದು, ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.

ಹೆಚ್.ಡಿ ರೇವಣ್ಣರಿಗೆ ನಿನ್ನೆ ಮತ್ತು ಇಂದು 2 ಬಾರಿ ಮೆಡಿಕಲ್ ಟೆಸ್ಟ್ ಮಾಡಿದ ಬೌರಿಂಗ್ ಆಸ್ಪತ್ರೆಯ ಹಿರಿಯ ಸರ್ಜನ್ ಹಾಗೂ ಸೂಪರಿಂಟೆಂಡೆಂಟ್ ಡಾ.ಕೆಂಪರಾಜ್ ಅವರು ನ್ಯೂಸ್ ಫಸ್ಟ್‌ಗೆ ಮಾಹಿತಿ ನೀಡಿದ್ದಾರೆ.

ಸದ್ಯ ಹೆಚ್‌.ಡಿ ರೇವಣ್ಣ ಅವರ ಬಿಪಿ, ಶುಗರ್, ಪಲ್ಸ್ ರೇಟ್ ನಾರ್ಮಲ್ ಇದೆ. ಡಯಾಬಿಟಿಸ್, ಟೆನ್ಷನ್ ಕೂಡ ಇದೆ. ಬೇರೆ ಯಾವುದೇ ಹಾರ್ಟ್ ಪ್ರಾಬ್ಲಂ ಕಾಣಿಸುತ್ತಿಲ್ಲ. ರೇವಣ್ಣ ಅವರು ಸ್ಟೇಬಲ್ ಆಗಿದ್ದಾರೆ. ಆದರೆ ಹೊಟ್ಟೆಯಲ್ಲಿ ಸಣ್ಣ ಅರ್ನಿಯಾ ಸಮಸ್ಯೆ ಇದೆ. ಇದಕ್ಕೆ ಶೀಘ್ರವೇ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇಲ್ಲ. ಇದಕ್ಕೆ ಕಾರ್ಡಿಯಾಲಜಿಸ್ಟ್ ಒಪಿನಿಯನ್ ಬೇಕಾಗುತ್ತೆ ಎಂದಿದ್ದಾರೆ.

ಇದನ್ನೂ ಓದಿ: BREAKING: ‘ಇದು ರಾಜಕೀಯ ಷಡ್ಯಂತ್ರ’- ಬಂಧನದ ಬಳಿಕ ಹೆಚ್‌.ಡಿ ರೇವಣ್ಣ ಮೊದಲ ಪ್ರತಿಕ್ರಿಯೆ 

ಬೌರಿಂಗ್ ಆಸ್ಪತ್ರೆಯಲ್ಲಿ ಬೇರೆ ರೋಗಿಗಳಿಗೆ ಯಾವ ರೀತಿ ಮೆಡಿಕಲ್ ಟೆಸ್ಟ್ ಮಾಡ್ತಿವೋ ಅದೇ ರೀತಿಯಲ್ಲಿ ರೇವಣ್ಣರಿಗೂ ತಪಾಸಣೆ ಮಾಡಿದ್ದೇವೆ. ನಿನ್ನೆಯೂ ಅವರು ಸ್ಟೇಬಲ್ ಇದ್ದರು. ನಿನ್ನೆ ಮತ್ತು ಇವತ್ತು ಬಿಪಿ, ಶುಗರ್ ನಾರ್ಮಲ್ ಇತ್ತು. ಹೆಚ್‌.ಡಿ ರೇವಣ್ಣ ಅವರು ಆರೋಗ್ಯವಾಗಿದ್ದು, ಚೆನ್ನಾಗಿಯೇ ಮಾತಾಡಿದ್ದಾರೆ. ತನಿಖೆಗೆ ಸಹಕರಿಸುವಷ್ಟು ರೇವಣ್ಣ ಮೆಡಿಕಲಿ ಸ್ಟೇಬಲ್ ಇದ್ದಾರೆ ಎಂದು ಡಾ.ಕೆಂಪರಾಜ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್‌.ಡಿ ರೇವಣ್ಣ ಆರೋಗ್ಯ ಸಮಸ್ಯೆ ಏನು? ಬೌರಿಂಗ್ ಆಸ್ಪತ್ರೆ ವೈದ್ಯರು ಬಿಚ್ಚಿಟ್ರು ಅಸಲಿ ವಿಷಯ; ಏನಂದ್ರು?

https://newsfirstlive.com/wp-content/uploads/2024/05/hd-revanna5.jpg

Load More