newsfirstkannada.com

‘ಲಿಯೋ’ ಸಿನಿಮಾ ಕ್ರೇಜ್‌ ಹೇಗಿದೆ? ವಿಜಯ್‌ಗೆ ರಜನಿಕಾಂತ್ ಏನಂದ್ರು? ನಾಳೆ ಕೋರ್ಟ್‌ನಲ್ಲಿ ಫ್ಯಾನ್ಸ್ ಶೋ ಭವಿಷ್ಯ!

Share :

Published October 16, 2023 at 8:19pm

    ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಲಿಯೋ ಸಿನಿಮಾದ ಕ್ರೇಜ್‌!

    ಕೇರಳ, ತಮಿಳುನಾಡಿನ ಥಿಯೇಟರ್‌ಗಳಲ್ಲಿ ವಿಜಯ್ ಅಭಿಮಾನಿಗಳ ಹಬ್ಬ

    ವಿಜಯ್‌ ಸಿನಿಮಾಗೆ ಶುಭಾಶಯ ಕೋರಿದ ಸೂಪರ್ ಸ್ಟಾರ್ ರಜನಿಕಾಂತ್

ತಮಿಳು ನಟ, ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಲಿಯೋ ಸಿನಿಮಾದ ಕ್ರೇಜ್‌ ಮುಗಿಲು ಮುಟ್ಟಿದೆ. ವಿಜಯ್‌ ಫ್ಯಾನ್ಸ್‌ ಅಂತೂ ಮೂರು ದಿನ ಮುಂಚೆಯೇ ಲಿಯೋ ಸಿನಿಮಾವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ. ಲಿಯೋ ಸಿನಿಮಾ ರಿಲೀಸ್ ಆಗೋ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸೆಲೆಬ್ರೇಷನ್ ಮುಗಿಲು ಮುಟ್ಟಿದೆ. ಕೇರಳ, ತಮಿಳುನಾಡಿನ ಥಿಯೇಟರ್‌ಗಳಲ್ಲಿ ಲಿಯೋ ಸಿನಿಮಾದ ಬಟಿಂಗ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ. ಅಭಿಮಾನಿಗಳಂತೂ ಕುಣಿದು ಕುಪ್ಪಳಿಸುತ್ತಿದ್ದಾರೆ.

ವಿಜಯ್, ಸಂಜಯ್ ದತ್ ಸೇರಿದಂತೆ ಬಹು ತಾರಾಗಣದ ಲಿಯೋ ಸಿನಿಮಾ ಇದೇ ಅಕ್ಟೋಬರ್ 19ರಂದು ತೆರೆ ಕಾಣಲು ಸಜ್ಜಾಗಿದೆ. ಲಿಯೋ ಸಿನಿಮಾದ ಕ್ರೇಜ್ ಎಷ್ಟಿದೆ ಅಂದ್ರೆ ಮೂರು ದಿನ ಮುಂಚೆಯೇ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದೆ. ಒಂದೊಂದು ಟಿಕೆಟ್‌ ಅನ್ನು 1,500 ರೂಪಾಯಿ ಕೊಟ್ಟು ಅಭಿಮಾನಿಗಳು ಕೊಂಡು ಕೊಳ್ಳುತ್ತಿದ್ದಾರೆ. ರಿಲೀಸ್ ಆದ ಮೊದಲ ದಿನವೇ ಲಿಯೋ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡೋ ನಿರೀಕ್ಷೆ ಇದೆ.

ವಿಜಯ್ ಅಭಿಮಾನಿಗಳು ಸಿನಿಮಾಗೆ ಕಾಯುತ್ತಿರುವಾಗಲೇ ಲಿಯೋಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ವಿಜಯ್‌ ಸಿನಿಮಾಗೆ ಶುಭಾಶಯ ಕೋರಿದ್ದು, ಲಿಯೋ ಬಹುದೊಡ್ಡ ಸಕ್ಸಸ್ ಕಾಣಲಿ ಎಂದು ಹಾರೈಸಿದ್ದಾರೆ. ತಮಿಳುನಾಡು, ಕೇರಳ, ಆಂಧ್ರ, ಕರ್ನಾಟಕದಲ್ಲೂ ಲಿಯೋ ಸಿನಿಮಾದ ಬಿಡುಗಡೆಗೆ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ.

ಬೆಳಗ್ಗೆ 4 ಗಂಟೆಗೆ ಫ್ಯಾನ್ಸ್ ಶೋ ಇರುತ್ತಾ?

ಅಕ್ಟೋಬರ್ 19ರಂದು ಕೇರಳ, ಕರ್ನಾಟಕ, ಹೈದರಾಬಾದ್‌ನಲ್ಲಿ ಲಿಯೋ ಸಿನಿಮಾದ ಫಸ್ಟ್‌ ಶೋ ಬೆಳಗಿನ ಜಾವ 4 ಗಂಟೆಗೆ ಶುರುವಾಗಲಿದೆ. ಆದರೆ ಈ ಫ್ಯಾನ್ಸ್‌ ಶೋಗೆ ತಮಿಳುನಾಡಿನಲ್ಲಿ ಮಾತ್ರ ಅವಕಾಶವಿಲ್ಲ. ತಮಿಳುನಾಡು ಸರ್ಕಾರ ಲಿಯೋ ಸಿನಿಮಾದ ಸ್ಪೆಷಲ್ ಶೋಗೆ ಅನುಮತಿ ಕೊಟ್ಟಿಲ್ಲ. ತಮಿಳುನಾಡು ಸರ್ಕಾರದ ವಿರುದ್ಧ ವಿಜಯ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ರಾಜಕೀಯ ಕಾರಣಗಳಿಗೆ ವಿಜಯ್ ಚಿತ್ರಕ್ಕೆ ತೊಂದರೆ ಕೊಡಲಾಗ್ತಿದೆ ಎಂದು ಆರೋಪ ಮಾಡಿದ್ದಾರೆ. ಲಿಯೋ ಚಿತ್ರಕ್ಕೆ ಹಿನ್ನಡೆಯಾಗಬೇಕು ಎಂದು ಹೀಗೆ ಮಾಡಲಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಯೋ ಚಿತ್ರದ ನಿರ್ಮಾಪಕರು ಇದೀಗ ತಮಿಳುನಾಡು ಸರ್ಕಾರದ ಆದೇಶ ಪ್ರಶ್ನಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ನಿರ್ಮಾಪಕ ಲಲಿತ್ ಕುಮಾರ್​ ಅವರು ಮದ್ರಾಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ತಮಿಳುನಾಡಿನಲ್ಲಿ ಲಿಯೋ ಚಿತ್ರಕ್ಕೆ ಬೆಳಗ್ಗೆ 4 ಗಂಟೆಗೆ ಅನುಮತಿ ನೀಡಲು ಕೋರಲಾಗಿದೆ. ನಾಳೆ ಮದ್ರಾಸ್ ಹೈಕೋರ್ಟ್‌ನಲ್ಲಿ ಲಿಯೋ ಚಿತ್ರ ನಿರ್ಮಾಪಕರ ಅರ್ಜಿ ವಿಚಾರಣೆ ನಡೆಯಲಿದೆ. ತಮಿಳುನಾಡಿನಲ್ಲಿ ವಿಜಯ್ ಫ್ಯಾನ್ಸ್‌ ಶೋಗೆ ಅನುಮತಿ ಸಿಗುತ್ತಾ ಅನ್ನೋ ತೀವ್ರ ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಲಿಯೋ’ ಸಿನಿಮಾ ಕ್ರೇಜ್‌ ಹೇಗಿದೆ? ವಿಜಯ್‌ಗೆ ರಜನಿಕಾಂತ್ ಏನಂದ್ರು? ನಾಳೆ ಕೋರ್ಟ್‌ನಲ್ಲಿ ಫ್ಯಾನ್ಸ್ ಶೋ ಭವಿಷ್ಯ!

https://newsfirstlive.com/wp-content/uploads/2023/10/Leo-Vijay-Cinema.jpg

Load More