newsfirstkannada.com

ಅಪ್ಘಾನ್ ಟಿ20 ಸರಣಿಯಲ್ಲಿ ಸಿಗದ ಸ್ಪಷ್ಟತೆ.. 15 ಸ್ಲಾಟ್​​ ಪೈಕಿ 5 ಸ್ಥಾನ ಮಾತ್ರ ಫಿಕ್ಸ್..!​​​

Share :

Published January 17, 2024 at 12:06pm

    ರೋಹಿತ್​ಗೆ ಸಾಥ್​​​​​ ನೀಡಲು ಜೈಸ್ವಾಲ್​​-ಗಿಲ್ ಮಧ್ಯೆ ಫೈಟ್​​

    ವಿಕೆಟ್ ಕೀಪಿಂಗ್​​​​, ಮಿಡಲ್ ಆರ್ಡರ್​ ಆಯ್ಕೆಯೇ ಟೆನ್ಷನ್

    5 ಸ್ಲಾಟ್​​ ಫಿಕ್ಸ್​​​.. 9 ಪ್ಲೇಯರ್ಸ್​ ಬಗ್ಗೆ ಕ್ಲಾರಿಟಿನೇ ಇಲ್ಲ

ಅಪ್ಘಾನ್ ಟಿ20 ಸರಣಿ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಂದು ಭಾರತ-ಅಪ್ಘಾನ್​ ಟಿ20 ದಂಗಲ್​​ ಕೊನೆಗೊಳ್ಳಲಿದೆ. ಇಷ್ಟಾದ್ರು ಮುಂಬರೋ ಟಿ20 ವಿಶ್ವಕಪ್​ಗೆ ಭಾರತ ತಂಡ ಫೈನಲ್ ಆಗಿಲ್ಲ. ಬೆರಳೆಣಿಕೆ ಪ್ಲೇಯರ್ಸ್​ ಬಿಟ್ರೆ ಮಿಕ್ಕವರ ಸ್ಲಾಟ್​​​ ಕಥೆ ಏನು ಅನ್ನೋದು ಗೊತ್ತಾಗ್ತಿಲ್ಲ.

ಅಪ್ಘಾನಿಸ್ತಾನ ವಿರುದ್ಧ ಎರಡು ಟಿ20 ಪಂದ್ಯಗಳು ಮುಗಿದಿವೆ. ಇಂದು ಟೀಮ್ ಇಂಡಿಯಾ ಕೊನೆ ಪಂದ್ಯವನ್ನಾಡಲಿದೆ. ಇದಾದ ಬಳಿಕ ಭಾರತ ಯಾವುದೇ ಟಿ20 ಪಂದ್ಯಗಳನ್ನಾಡಲ್ಲ. ನೇರವಾಗಿ ಟಿ20 ವಿಶ್ವಕಪ್​​ ಅಖಾಡಕ್ಕೆ ಎಂಟ್ರಿಕೊಡಲಿದೆ. ರೋಹಿತ್ ಶರ್ಮಾ ಪಡೆ ಈ ಬಾರಿ ಟ್ರೋಫಿ ಗೆಲ್ಲುವ ಫೇವರಿಟ್​​​ ತಂಡವೆನಿಸಿದೆ. ಹಾಗಾದ್ರೆ ಮೆನ್​​​ ಇನ್​ ಬ್ಲೂ ಪಡೆ ಮುಂಬರೋ ವಿಶ್ವಕಪ್​​​​ಗೆ ಎಷ್ಟೆಲ್ಲಾ ಸಿದ್ಧಗೊಂಡಿದೆ? ಯಾವ ಸ್ಲಾಟ್​ನಲ್ಲಿ ಗೊಂದಲ ಇದೆ? ಯಾವ ವಿಭಾಗ ಟೀಮ್ ಮ್ಯಾನೇಜ್​​​​ಮೆಂಟ್​​ ಟೆನ್ಷನ್ ಹೆಚ್ಚಿಸಿದೆ? ಫಿನಿಶರ್ ಯಾರು?

ಬಿಸಿಸಿಐ ಟಿ20 ವಿಶ್ವಕಪ್​​​ಗೆ ತಂಡ ಕಟ್ಟುವ ನಿಟ್ಟಿನಲ್ಲಿ ಕಳೆದೊಂದು ವರ್ಷದಿಂದ ಎಕ್ಸ್​ಪೆರಿಮೆಂಟ್​ ಮೇಲೆ ಎಕ್ಸ್​​ಪೆರಿಮೆಂಟ್ ಮಾಡಿದೆ. ಇಷ್ಟಾದ್ರು ಕೇವಲ ಐದು ಆಟಗಾರರನ್ನ ಬಿಟ್ಟು ಉಳಿದವರು ಯಾರೆಲ್ಲಾ ವಿಶ್ವಕಪ್ ಅಡ್ತಾರೆ ಅನ್ನೋದು ಕ್ಲಾರಿಟಿ ಸಿಕ್ಕಿಲ್ಲ. ಚುಟುಕು ದಂಗಲ್​ಗೆ ಒಟ್ಟು 15 ಸದಸ್ಯರ ತಂಡವನ್ನ ಸೆಲೆಕ್ಟ್ ಮಾಡಲಾಗುತ್ತೆ. ಆ ಪೈಕಿ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಫಿಟ್​ ಆದರೆ ಸೂರ್ಯಕುಮಾರ್​ ಯಾದವ್​​, ಹಾರ್ದಿಕ್ ಪಾಂಡ್ಯ, ವೇಗಿ ಜಸ್​ಪ್ರೀತ್ ಬೂಮ್ರ ಹಾಗೂ ಮೊಹಮ್ಮದ್ ಸಿರಾಜ್​​ ಆಡುವುದು ಕನ್ಫರ್ಮ್​. ಉಳಿದವರು ಯಾರು ಅನ್ನೋದು ಯಕ್ಷ ಪ್ರಶ್ನೆಯಾಗಿದೆ.

ಆರಂಭಿಕನಾಗಿ ರೋಹಿತ್ ಶರ್ಮಾ ಟಿಕೆಟ್ ಗಿಟ್ಟಿಸಿಕೊಳ್ಳುವುದ ಗ್ಯಾರಂಟಿ. ಆದರೆ ರೋಹಿತ್​​​​​​​​​​​ ಜೊತೆಗಾರನಾಗಲು ಇಬ್ಬರ ಮಧ್ಯೆ ಫೈಟ್ ಏರ್ಪಟ್ಟಿದೆ. ಯಶಸ್ವಿ ಜೈಸ್ವಾಲ್​​​​ ಹಾಗೂ ಶುಭ್​​ಮನ್ ಗಿಲ್​​​ ನಡುವೆ ವಾರ್ ಏರ್ಪಟ್ಟಿದೆ. ಗಿಲ್​ಗೆ ಹೋಲಿಸಿದ್ರೆ ಜೈಸ್ವಾಲ್ ಹೆಚ್ಚು ಅಗ್ರೆಸ್ಸಿವ್​​. ಟಿ20 ಸೂಟ್ ಆಗೋ ಪ್ಲೇಯರ್​​. ಹಾಗಂತ ಗಿಲ್ ಅನುಭವ ಕಡೆಗಣಿಸುವಂತಿಲ್ಲ.

ಮಧ್ಯಮ ಕ್ರಮಾಂಕದ ಕಥೆನೂ ಹಾಗೆ ಇದೆ. ಸೂರ್ಯಕುಮಾರ್​​​, ಹಾರ್ದಿಕ್​ ಪಾಂಡ್ಯರನ್ನ ಹೊರತಪಡಿಸಿದ್ರೆ ಉಳಿದ ಒಂದು ಸ್ಥಾನದ ಮೇಲೆ ರಿಂಕು ಸಿಂಗ್​​, ತಿಲಕ್ ವರ್ಮಾ ಕಣ್ಣಿಟ್ಟಿದ್ದಾರೆ. ಇನ್ನು ವಿಕೆಟ್​​​ ಕೀಪರ್ ಸ್ಥಾನಕ್ಕಂತೂ ಮೆಗಾ ರೇಸ್​ ಏರ್ಪಟ್ಟಿದೆ. ಕೆ.ಎಲ್ ರಾಹುಲ್​​​, ಜಿತೇಶ್​ ಶರ್ಮಾ, ಸಂಜು ಸ್ಯಾಮ್ಸನ್​​​​​ ನಡುವೆ ಕದನ ಏರ್ಪಟ್ಟಿದೆ. ಫೈನಲಿ ಯಾರಿಗೆ ಜಾಕ್​​ಪಾಟ್​​ ಹೊಡೆಯುತ್ತೆ ಅನ್ನೋದು ಇನ್ನೂ ನಿಗೂಢ. ಒಂದು ವೇಳೆ ಪಂತ್​ ಫುಲ್​​ ಫಿಟ್​ ಆದರೆ ಅವರು ಸಹ ರೇಸ್​​ಗೆ ಎಂಟ್ರಿಕೊಡಲಿದ್ದಾರೆ.

ಬೂಮ್ರ-ಸಿರಾಜ್​​​ ಒಕೆ.. ಉಳಿದ ಕಥೆ ಅಸ್ಪಷ್ಟ..!

ವೇಗಿಗಳಾಗಿ ಜಸ್​ಪ್ರೀತ್ ಬೂಮ್ರ, ಮೊಹಮ್ಮದ್ ಸಿರಾಜ್​ ಕಣಕ್ಕಿಳಿಯುವುದು ಬಹುತೇಕ ಖಚಿತ. ಆದರೆ ಉಳಿದ ವೇಗಿ ಹಾಗೂ ಸ್ಪಿನ್ನರ್​ಗಳ ಕಥೆ ಇನ್ನೂ ಸಸ್ಪೆನ್ಸ್ ಆಗಿ ಉಳಿದಿದೆ. ಸ್ಪಿನ್​ ಕೋಟಾದಲ್ಲಿ ಕುಲ್​ದೀಪ್​ ಯಾದವ್​​​, ರವಿ ಬಿಷ್ನೋಯಿ ಮಧ್ಯೆ ಫೈಟ್​ ಇದೆ. ಇದಿಷ್ಟೆ ಅಲ್ಲದೇ, ಆಲ್​ರೌಂಡರ್​ಗಳ ಪಟ್ಟಿಯು ದೊಡ್ಡದಿದೆ. ಹಾರ್ದಿಕ್​​​ಗೆ ಸ್ಲಾಟ್ ಫಿಕ್ಸ್ ಆದರೂ ಮಿಕ್ಕ ಸ್ಥಾನದ ಮೇಲೆ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಿವಂ ದುಬೆ ಹಾಗೂ ವಾಷಿಂಗ್ಟನ್ ಸುಂದರ್​​ ಹದ್ದಿನ ಕಣ್ಣಿಟ್ಟಿದ್ದಾರೆ.

17ನೇ IPLನಲ್ಲಿ ವಿಶ್ವಕಪ್​​​ ತಂಡದ ಸ್ಪಷ್ಟ ಚಿತ್ರಣ..!

ಅಪ್ಘಾನಿಸ್ತಾನ ಎದುರಿನ ಟಿ20 ಸಿರೀಸ್​​ ಅಂತಿಮ ಘಟ್ಟ ತಲುಪಿದ್ರೂ ವಿಶ್ವಕಪ್​ ಆಡುವ ತಂಡದ ಬಗ್ಗೆ ಸಂಪೂರ್ಣ ಕ್ಲಾರಿಟಿ ಸಿಕ್ಕಿಲ್ಲ. ಇಂದಿನ ಅಂತಿಮ ಟಿ20 ಪಂದ್ಯದ ಬಳಿಕ ಸಿಗುವುದು ಅನುಮಾನ. ಮಾರ್ಚ್​ 22 ರಿಂದ 17ನೇ ಐಪಿಎಲ್ ಆರಂಭಗೊಳ್ಳುವ ಸಾಧ್ಯತೆ ಇದೆ. ಈ ಕಲರ್​​ಫುಲ್​ ಟೂರ್ನಿಯಲ್ಲಿ ವಿಶ್ವಕಪ್​​​ ಆಡುವ ಫೈನಲ್​​ ತಂಡದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಪ್ಘಾನ್ ಟಿ20 ಸರಣಿಯಲ್ಲಿ ಸಿಗದ ಸ್ಪಷ್ಟತೆ.. 15 ಸ್ಲಾಟ್​​ ಪೈಕಿ 5 ಸ್ಥಾನ ಮಾತ್ರ ಫಿಕ್ಸ್..!​​​

https://newsfirstlive.com/wp-content/uploads/2024/01/Team-India-14.jpg

Load More