/newsfirstlive-kannada/media/post_attachments/wp-content/uploads/2024/08/isreal-toothpaste-murder.jpg)
ಶತ್ರುಗಳು ಯಾವ ಬಿಲದಲ್ಲಿ ಹೊಕ್ಕರು, ಎಷ್ಟೇ ದೂರವಿದ್ದರು, ಯಾವುದೇ ಭದ್ರೆತೆಯಲ್ಲಿದ್ದರೂ ಒಂದು ಬಾರಿ ಇಸ್ರೇಲ್ನ ಮೊಸ್ಸಾದ್ ಹಿಟ್ಲಿಸ್ಟ್ನಲ್ಲಿ ಅವರು ಸೇರಿಬಿಟ್ಟರೇ ಮುಗೀತು ಅಲ್ಲಿಗೆ ಅವರ ಮರಣ ಶಾಸನವೊಂದು ಸಿದ್ಧವಾಂತೆಯೇ ಸರಿ. ಇಸ್ರೇಲ್ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಹೀಗೆಯೇ ಬೆಳೆದುಕೊಂಡು ಬಂದಿದೆ. ಆ ಸಮುದಾಯದ ಮೇಲಾದ ನಿರಂತರ ದಬ್ಬಾಳಿಕೆ, ತುಂಡು ಭೂಮಿ ಇಲ್ಲವಾದಲ್ಲಿ ನಾವು ಜಗತ್ತಿನಲ್ಲಿ ಹೇಗೆ ಬದುಕಬೇಕಾಗುತ್ತದೆ ಅನ್ನೋ ಇತಿಹಾಸ ಕಲಿಸಿದ ಪಾಠವೋ ಗೊತ್ತಿಲ್ಲ, ಇಸ್ರೇಲ್ನ್ನು ಒಂದು ಬಾರಿ ಕೆಣಕಿಬಿಟ್ಟರೆ, ಆ ಕೆಣಕಿದ ವೈರಿ ಪಡೆಯ ತನ್ನ ಕಟ್ಟಕಡೆಯ ವ್ಯಕ್ತಿಯ ಉಸಿರು ಕಸೆಯುವವರೆಗೂ ಇಸ್ರೇಲ್ ವಿರಮಿಸುವುದಿಲ್ಲ.
ಈಗ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯ ಹತ್ಯೆ ಮತ್ತೆ ಮೊಸ್ಸಾದ್ನ ಕಡೆ ದೃಷ್ಟಿ ಹೊರಳುವಂತೆ ಮಾಡಿದೆ. ಅವನನ್ನು ಹತ್ಯೆ ಮಾಡಿದ ರೀತಿಯಲ್ಲೆಲ್ಲಾ ಹಿಂದೆ ಮೊಸ್ಸಾದ್ ಪ್ರತಿಶೋಧ ತೆಗೆದುಕೊಂಡಿರುವ ನೆರಳುಗಳೇ ಕಾಣುತ್ತಿವೆ. ಹಮಾಸ್ ಮುಖ್ಯಸ್ಥನ ಸಾವು ಈಗ 1978ರಲ್ಲಿ ಇಸ್ರೇಲ್ ಪಿಇಎಲ್ಎಫ್ ಮುಖ್ಯಸ್ಥನನ್ನು ಮುಗಿಸಿ ಹಾಕಿದ ಕಥೆಯನ್ನು ನೆನಪಿಸುತ್ತಿದೆ.
ಇದನ್ನೂ ಓದಿ:ಕುದಿಯುತ್ತಿದೆ ಮಧ್ಯಪ್ರಾಚ್ಯ.. ಇಸ್ರೇಲ್ನ ಅನೇಕ ಪ್ರದೇಶಗಳ ಮೇಲೆ ಹೆಜ್ಬೊಲ್ಲಾ ರಾಕೆಟ್ ದಾಳಿ..
70ರ ದಶಕದಲ್ಲಿ ವಡೈ ಹದ್ದದ್ ಎಂಬ ವ್ಯಕ್ತಿ ಪಾಪ್ಯುಲರ್ ಫ್ರಂಟ್ ಆಫ್ ಲಿಬರೇಷನ್ ಆಫ್ ಪ್ಯಾಲಿಸ್ತೇನ್ ಅಂದ್ರೆ ಪಿಎಫ್ ಎಲ್ಪಿಯ ಮುಖ್ಯಸ್ಥನಾಗಿದ್ದ. 1976ರಲ್ಲಿ ನಡೆದ ಫ್ರಾನ್ಸ್ ಫ್ಲೈಟ್ 139 ಹೈಜಾಕ್ ಹಿಂದೆ ಅವನದೇ ಕೈವಾಡವಿತ್ತು. ಟೆಲ್ ಅವಿವ್ನಿಂದ ಹೊರಟ ವಿಮಾನವನ್ನು ಲಿಬಿಯಾ ಮತ್ತು ಉಗಾಂಡಕ್ಕೆ ತೆಗೆದುಕೊಂಡು ಹೋಗಿ, ಒತ್ತೆಯಾಳುಗಳನ್ನಿಟ್ಟುಕೊಂಡು ಹಲವು ಬೇಡಿಕೆಗಳನ್ನಿಡಲಾಗಿತ್ತು. ಆಗಲೇ ಇಸ್ರೇಲ್ ಉಗಾಂಡಾ ಎಂಟೆಬ್ಬೆಯಲ್ಲಿ ಆಪರೇಷನ್ ಥಂಡರ್ಬೋಲ್ಟ್ ನಡೆಸಿ, ಉಗ್ರರನ್ನು ಹೊಡೆದು ಹಾಕಿತ್ತು. ಆದ್ರೆ ಅವರ ಲಿಸ್ಟ್ನಲ್ಲಿ ಈ ವಡೈ ಹದ್ದದ್ ಹಾಗೆ ಉಳಿದಿದ್ದ.
ಇದನ್ನೂ ಓದಿ:ಇಸ್ರೇಲ್ ವಿರುದ್ಧ ಇರಾನ್ ಜಿದ್ದು.. ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಫಿಕ್ಸ್? ಭಾರತೀಯರಿಗೆ ಎಚ್ಚರಿಕೆ!
ವಡೈನನ್ನು ಮುಗಿಸಲು ಜಗತ್ತಿನಲ್ಲಿಯೇ ಅತ್ಯಂತ ಅಪಾಯಕಾರಿ ಗುಪ್ತಚರ ಇಲಾಖೆ ಎಂದು ಗುರುತಿಸಿಕೊಳ್ಳುವ ಮೊಸ್ಸಾದ್ ಸಜ್ಜಾಗಿತ್ತು. ಒಳಕ್ಕೆ ನುಗ್ಗಿ ಹೊಡೆಯುವ, ಎಜೆಂಟ್ಗಳ ಮೂಲಕ ಗುಂಡಿಟ್ಟು ಕೊಲ್ಲುವ ಈ ಎಲ್ಲಾ ಆಯ್ಕೆಗಳನ್ನು ಹೊರತುಪಡಿಸಿ ಮೊಸ್ಸಾದ್ ಬೇರೆಯದೇ ಆಯ್ಕೆಯನ್ನು ಆಯ್ದುಕೊಂಡಿತ್ತು. 1978ರಲ್ಲಿ ಮೊಸ್ಸಾದ್ನ ಎಜೆಂಟ್ ಒಬ್ಬ ವಡೈ ಹದ್ದದ್ನ ಟೂಥ್ಪೇಸ್ಟ್ನನ್ನು ಬದಲಿಸಿದ, ನಿತ್ಯ ಉಪಯೋಗಿಸುತ್ತಿದ್ದ ಟೂಥ್ಪೇಸ್ಟ್ ರೀತಿಯದ್ದೇ ಅತ್ಯಂತ ವಿಷಕಾರಿ ಅಂಶ ಬೆರೆಸಿರುವ ಟೂಥ್ಪೇಸ್ಟ್ ವಡೈ ಕೋಣೆಯಲ್ಲಿಟ್ಟು ಅತ್ಯಂತ ಸರಳ ರೀತಿಯಲ್ಲಿ ಅವನನ್ನು ಮುಗಿಸಿ ಹಾಕಿತ್ತು ಇಸ್ರೇಲ್. ಸದ್ಯ ಇಸ್ರೇಲ್ ಪ್ಯಾಲಿಸ್ತೇನ್, ಇರಾನ್, ಲಿಬಿಯಾನ್ನಲ್ಲಿ ನಡೆಯುತ್ತಿರುವ ಸಂಘರ್ಷಗಳು ಹಾಗೂ ಹಮಾಸ್ ಮುಖ್ಯಸ್ಥನ ಸಾವು ಈ ಪ್ರಕರಣವನ್ನು ನೆನಪಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ