ಅಬ್ಬಾ.. ಪಾಪ್ ಸಿಂಗರ್‌ ರಿಹಾನ್ನಾಗೆ 60 ಕೋಟಿ; ಅಂಬಾನಿ ಮಗನ ಮದುವೆಯ ಒಟ್ಟು ಖರ್ಚು ಎಷ್ಟು ಗೊತ್ತಾ?

author-image
admin
Updated On
ಅಬ್ಬಾ.. ಪಾಪ್ ಸಿಂಗರ್‌ ರಿಹಾನ್ನಾಗೆ 60 ಕೋಟಿ; ಅಂಬಾನಿ ಮಗನ ಮದುವೆಯ ಒಟ್ಟು ಖರ್ಚು ಎಷ್ಟು ಗೊತ್ತಾ?
Advertisment
  • ಪಾಪ್ ರಾಣಿ ರಿಹಾನ್ನಾ ಅವರ ಸ್ಟೇಜ್‌ ಶೋಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!
  • ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ರಿಹಾನ್ನಾ ಶೋಗೆ ಕೋಟಿ, ಕೋಟಿ ಖರ್ಚು
  • 2018ರಲ್ಲೇ 60 ಕೋಟಿ ರೂಪಾಯಿ ಖರ್ಚು ಮಾಡಿದ್ದ ಅಂಬಾನಿ ಕುಟುಂಬ

ಜಾಮ್‌ನಗರ: ಸಾವಿರಾರು ಕೋಟಿ ರೂಪಾಯಿ ವೆಚ್ಚದ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್‌ ಸಂಭ್ರಮ ಶುರುವಾಗಿದೆ. ಗುಜರಾತ್‌ನ ಜಾಮ್‌ನಗರಕ್ಕೆ ದೇಶ, ವಿದೇಶದ ಪ್ರಖ್ಯಾತ ಗಣ್ಯರು ಆಗಮಿಸಿದ್ದು, ಇಂದಿನಿಂದ ಮೂರು ದಿನಗಳ ಕಾಲ ಅದ್ಧೂರಿ ವಿವಾಹ ಮಹೋತ್ಸವ ನಡೆಯುತ್ತಿದೆ.

ಜಾಮ್‌ನಗರಕ್ಕೆ ಈಗಾಗಲೇ ಬಾಲಿವುಡ್, ಹಾಲಿವುಡ್‌ನ ಗಣ್ಯರ ದಂಡು ಹರಿದು ಬಂದಿದೆ. ಇಂದು ಸಂಜೆ ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು, ಪಾಪ್ ರಾಣಿ ರಿಹಾನ್ನಾ ಅವರ ಶೋ ವಿಶೇಷವಾಗಿದೆ. ಪಾಪ್ ಸಿಂಗರ್ ರಿಹಾನ್ನಾ ನಿನ್ನೆಯೇ ಭಾರತಕ್ಕೆ ಆಗಮಿಸಿದ್ದು, ಕಲರ್‌ಫುಲ್ ಕಾರ್ಯಕ್ರಮಕ್ಕೆ ಸಜ್ಜಾಗಿದ್ದಾರೆ.

publive-image

ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ಸ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ರಿಹಾನ್ನಾ ಶೋ ಧೂಳೆಬ್ಬಿಸಲಿದೆ. ಪಾಪ್ ಸಿಂಗರ್‌ನ ಈ ಕ್ರೇಜ್‌ ಮಧ್ಯೆ ಅಂಬಾನಿ ಫ್ಯಾಮಿಲಿ ರಿಹಾನ್ನಾ ಕಾರ್ಯಕ್ರಮಕ್ಕೆ ಖರ್ಚು ಮಾಡಿದ್ದು ಎಷ್ಟು ಅನ್ನೋದು ರಿವೀಲ್ ಆಗಿದೆ. ಮಾಹಿತಿಗಳ ಪ್ರಕಾರ ರಿಹಾನ್ನಾ ಒಬ್ಬರಿಗೆ 8-9 ಮಿಲಿಯನ್‌ ನೀಡಲಾಗುತ್ತಿದೆ. ಅಂದ್ರೆ ಬರೋಬ್ಬರಿ 60-74 ಕೋಟಿ ರೂಪಾಯಿ ರಿಹಾನ್ನಾ ಅವರಿಗೆ ಕೊಡಲಾಗುತ್ತಿದೆ ಎನ್ನಲಾಗಿದೆ. ಇಂದು ಸಂಜೆ ಜಾಮ್‌ನಗರದಲ್ಲಿ ಕಲರ್‌ಫುಲ್ ಕಾರ್ಯಕ್ರಮಗಳು ಜರುಗುತ್ತಿದೆ.

ಇದನ್ನೂ ಓದಿ: ಅಬ್ಬಬ್ಬಾ! 1 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಅಂಬಾನಿ ಮಗನ ಮದುವೆ; ಹೇಗಿರಲಿದೆ & ಏನಿದರ ವಿಶೇಷತೆ?

ಅಂಬಾನಿ ಕುಟುಂಬ ಮದುವೆಗಾಗಿ ಇಷ್ಟೊಂದು ಕೋಟಿ ರೂಪಾಯಿ ಖರ್ಚು ಮಾಡ್ತಾ ಇರೋದು ಇದೇ ಮೊದಲಲ್ಲ. 2018ರಲ್ಲಿ ತನ್ನ ಮಗಳು ಇಶಾ ಮದುವೆಯಲ್ಲೂ ಮನರಂಜನಾ ಕಾರ್ಯಕ್ರಮಗಳಿಗೂ 60 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಇನ್ನು ಅನಂತ್ ಅಂಬಾನಿ ಅವರ ಮದುವೆಗೆ ಅಂದಾಜಿನ ಪ್ರಕಾರ 994 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗುತ್ತಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment