/newsfirstlive-kannada/media/post_attachments/wp-content/uploads/2024/05/RCB_TEAM-1.jpg)
ಆರ್​ಸಿಬಿ ತಂಡ ಎಲಿಮಿನೇಟ್​ ಪಂದ್ಯದಲ್ಲಿ ಎಡವಿದೆ. ಅಹಮದಾಬಾದ್​ ಮೈದಾನದಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ 4 ವಿಕೆಟ್​​ಗಳ ಸೋಲುಂಡು ತವರಿಗೆ ಮರಳಿದೆ. ಆದರೂ ಅಭಿಮಾನಿಗಳು ನೆಚ್ಚಿನ ತಂಡವನ್ನು ಹೊಗಳುತ್ತಿದ್ದಾರೆ. ತನ್ನ ಹೋರಾಟದ ಮೂಲಕ ಸಿಎಸ್​ಕೆ ತಂಡವನ್ನು ಸೋಲಿಸಿ 4ನೇ ಸ್ಥಾನದಲ್ಲಿ ನಿಂತ ಆರ್​ಸಿಬಿ ಸಾಧನೆಗೆ ಭೇಷ್​ ಎನ್ನುತ್ತಿದ್ದಾರೆ.
ಅಂದಹಾಗೆಯೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಏಳುತ್ತಾ, ಬೀಳುತ್ತಾ ಪಾಯಿಂಟ್​​ ಟೇಬಲ್​ನ ಕೊನೆಯಲ್ಲಿದ್ದ ತಂಡ ನೇರವಾಗಿ 4ನೇ ಸ್ಥಾನಕ್ಕೇರಿತು. ಸಿಎಸ್​ಕೆ ತಂಡವನ್ನು ಮರಳಿ ಊರಿಗೆ ಕಳುಹಿಸಿದ ಆರ್​ಸಿಬಿಯು ರಾಜಸ್ಥಾನ್​ ತಂಡದ ವಿರುದ್ಧ ಸುಲಭ ಸೋಲು ಕಂಡಿತು. ಆದರೆ ಐಪಿಎಲ್​ 2024ರ ಪಾಯಿಂಟ್​ ಟೇಬಲ್​ನಲ್ಲಿ 4ನೇ ಸ್ಥಾನಕ್ಕೆ ಹೋಗಿ ಎಲಿಮಿನೇಟ್​ ಆದ ಆರ್​ಸಿಬಿ ದೊಡ್ಡ ಮೊತ್ತವನ್ನೇ ಬಾಚಿಕೊಂಡಿದೆ.
/newsfirstlive-kannada/media/post_attachments/wp-content/uploads/2024/05/RCB_TEAM-1-1.jpg)
ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿಟ್ಟಿದ್ದ ಮೃತದೇಹಗಳು ಇಲಿಗಳ ಪಾಲು.. ಕಣ್ಣು, ಹೆಬ್ಬೆರಳು ತಿಂದು ತೇಗಿದ ಮೂಷಿಕ
ಹೌದು. 4ನೇ ಸ್ಥಾನದಲ್ಲಿ ಕಾಣಿಸಿಕೊಂಡು ಕೊನೆಗೆ ನಿನ್ನೆಯ ಪಂದ್ಯದಲ್ಲಿ ತವರು ಸೇರಿದ ಆರ್​ಸಿಬಿ 6.5 ಕೋಟಿ ಮೊತ್ತವನ್ನು ಬಾಚಿಕೊಂಡಿದೆ. ಇನ್ನು ಇಂದಿನ ಪಂದ್ಯದಲ್ಲಿ ಸೋತ ತಂಡ, ಅಂದರೆ 3ನೇ ಸ್ಥಾನದಲ್ಲಿರುವ ತಂಡ 7 ಕೋಟಿ ಗೆಲ್ಲಲಿದೆ. ಇನ್ನು ಟ್ರೋಫಿ ಗೆದ್ದ ತಂಡವು 46 ಕೋಟಿಯನ್ನು ಬಹುಮಾನವಾಗಿ ಗೆಲ್ಲಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us